- ಮಾನಸ ಗೌಡ
ಡಿಮ್ಯಾಕ್ ( ಯೋಜನಾ ಸಲಹಾ ಅಧಿಕಾರಿ) ಯೋಜನಾಧಿಕಾರಿ ಇವೈ, ಬೆಂಗಳೂರು
ಬರದ ನಾಡಿನಲ್ಲಿ ಹನಿನೀರಾವರಿ ಮೂಲಕ ಚೀಯಾ ಸೀಡ್ ಬೆಳೆ ಬೆಳೆದು ಸೈ ಎನ್ನಿಸಿಕೊಂಡಿರುವ ರೈತನ ಯಶೋಗಾಥೆ
ರೈತ ದೇಶದ ನಾಡಿ ಮಿಡಿತ, ನೇಗಿಲ ಯೋಗಿಯ ಬೆವರು ನಮ್ಮ ನಿಮ್ಮೆಲ್ಲರ ಉಸಿರು ಹೊಸ ಕೃಷಿ ತಾಂತ್ರಿಕತೆ ಹೊರಣ ರೈತ ಯಶೋಗಾಥೆಯ ಚಿತ್ರಣ ಇಲ್ಲಿದೆ
ಈಗಿನ ಕಾಲದಲ್ಲಿ ಸಿರಿಧಾನ್ಯಗಳಿಗೆ ಭಾರಿ ಡಿಮ್ಯಾಂಡ್ ಇದೆ. ಅದರಂತೆ ಕೆಲವೊಂದು ವಿದೇಶಿ ಸಿರಿಧಾನ್ಯಗಳು ಹೆಚ್ಚಿನ ಜನಪ್ರಿಯತೆ ಪಡೆಯುತ್ತ ಇದ್ದೇವೆ. ಇದರಲ್ಲಿರುವ ಅಗಾಧ ಪೋಷಕಾಂಶಗಳಿಂದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಕೂಡ ಉಂಟು.
ಇಂತಹ ವಿಶೇಷ ಬೆಳೆ ಬೆಳೆದಿರುವ ರೈತರ ಹೆಸರು ಮಲ್ಲನಗೌಡ ಎಸ್ ಪಾಟೀಲ್, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ತಿಮ್ಮಾಪುರ ಗ್ರಾಮದವರಾದರು.
ಬರದ ನಾಡಿನಲ್ಲಿ ಹನಿನೀರಾವರಿ ಮೂಲಕ ಚೀಯಾ ಸೀಡ್ ಬೆಳೆ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ ಬನ್ನಿ ಅವರ ಮನೆಯಂಗಳ ( ಮನೆಯ ಹೆಸರು ಕೂಡ ನೇಗಿಲ ಯೋಗಿ) ಮುಂಭಾಗದಲ್ಲಿ ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಚೀಯಾ ಸೀಡ್ ಬೆಳೆಯ ಬಗ್ಗೆ ಸಂಪೂಣ೯ ಮಾಹಿತಿ ಇಲ್ಲಿದೆ
ಮಲ್ಲನಗೌಡರು ಹೇಳುವುದು ಏನು?
‘ಕಳೆದ ೨೫ ವರ್ಷದಿಂದ ರೈತ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೆನೆ ಎಂದಿಗೂ ನಾನು ಕೃಷಿಯಲ್ಲಿ ಸೋತಿದ್ದೆ ಇಲ್ಲ ಎನ್ನುತ್ತಾರೆ ರೈತ ಮಲ್ಲನ ಗೌಡರು
ಸಾಂಪ್ರದಾಯಿಕ ಕೃಷಿಯೊಂದಿಗೆ ವಿದೇಶಿ ಗಿಡ ಮೂಲಿಕೆಯ ಚೀಯಾ ಸೀಡ್ ಸಸಿ ಬೆಳೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಏನಿದು ಈ ಚೀಯಾ ಸೀಡ್ ಮತ್ತು ಇದರ ಬೇಸಾಯದ ಕ್ರಮ ಹೇಗೆ?
ಈ ಭಾರಿ ಅತಿ ಹೆಚ್ಚು ಬೇಡಿಕೆ ಇರುವ ಚಿಯಾ ಬೀಜಗಳನ್ನು ( ಇದು ಮೂಲತಹ: ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕದಿಂದ ಬಂದಂತಹ ವಲಸೆ ಬೆಳೆ ) ಇದೊಂದು ಗಿಡ ಮೂಲಿಕೆ ಸಸ್ಯವಾಗಿದೆ. ಹೆಚ್ಚಿನ ನಾರಿನ ಅಂಶಗಳನ್ನು ಇದು ಒಳಗೊಂಡಿದೆ. ಅತ್ಯಂತ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಇದರ ಬೇಸಾಯ ಸಾಧ್ಯ.
ಸಸಿಗಳನ್ನು ನಾಟಿ ಮಾಡಿದ ೮೦ ರಿಂದ ೯೫ ದಿನಗಳಲ್ಲಿ ಬೆಳೆ ಕಟಾವಿಗೆ ಸಿದ್ದವಾಗಲಿದೆ ಪ್ರತಿ ಎಕರೆಗೆ ೩ ರಿಂದ ೪ ಕ್ವಿಂಟಾಲ್ ಇಳುವರಿ ಕೊಡಲಿದೆ . ಕರ್ನಾಟಕದಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಇದರ ಬೇಸಾಯ ಕೈಗೊಳ್ಳಬಹುದು. ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆಯುವ ಶಕ್ತಿ ಇದರಲ್ಲಿದೆ.
ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕಾದಿಂದ ವಲಸೆ ಬಂದಿರುವ ಗಿಡ ಮೂಲಿಕೆಯಾಗಿರುವ ಸಸ್ಯ ಪ್ರಪಂಚದಾದ್ಯಂತ ಬೇಡಿಕೆಯಾಗಿದೆ.
ಇದರಲ್ಲಿರುವ ಔಷಧಿಯ ಗುಣಗಳು ಬಹಳ ಮುಖ್ಯವಾಗಿದೆ ಈ ಚೀಯಾ ಬೀಜಗಳು ಹೆಚ್ಚಿನ ಪೋಷಕಾಂಶಗಳಿಂದ ಕೂಡಿದೆ, ಮುಖ್ಯವಾಗಿ ಹೆಚ್ಚಿನ ನಾರಿನಾಂಶದಿಂದ ಕೂಡಿದೆ
ಪ್ರತಿ ಶತ ೩೦ ರಿಂದ ೩೫ ಪರ್ಸೆಂಟ್ ನಾರಿನಾಂಶದಿಂದ ಕೂಡಿದೆ, ಪ್ರೋಟಿನ್ ಶೇಕಡಾ ೨೦ ಪರ್ಸೆಂಟ್, ಎಣ್ಣೆ ಅಂಶ ೩೦ ಪರ್ಸೆಂಟ್ ಹಾಗೂ ಅದರ ಜೊತೆಗೆ ಒಮೇಗಾ ೩ ಫ್ಯಾಟಿ ಆಸಿಡ್, ಆಮ್ಲವಿದೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ ಈ ಸಸ್ಯದ ಮೂಲಕ ಮಾತ್ರ ಪಡೆಯಲಿಕ್ಕೆ ಸಾಧ್ಯವಾಗುತ್ತಿದೆ ಮತ್ತು ಇದರ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ಸಂಪತ್ತು ಭರಿತ ಖನೀಜಂಶಗಳನ್ನು ಹೊಂದಿದೆ ಅದರಲ್ಲೂ ಕ್ಯಾಲ್ಸಿಯಂ ಹಾಲಿಗಿಂತ ಐದು ಪಟ್ಟು ಹೆಚ್ಚಿದೆ ಇನ್ನು ಮ್ಯಾಗ್ನಶಿಯಂ, ಒಳಗೊಂಡ ದೇಹಕ್ಕೆ ಬೇಕಾಗುವ ಎಲ್ಲ ರೀತಿಯ ಖನೀಜಗಳು ಇದರಿಂದ ದೊರೆಯುತ್ತದೆ
ಈ ವಿನೂತನ ಬೆಳೆ ಇಂದು ಅಂತರರಾಷ್ಟೀಯ ಬೆಳೆ ಎಂದು ಮಾನ್ಯತೆ ಪಡೆದಿದೆ. ಮೂರು ರೀತಿಯ ಚೀಯಾ ಬೀಜಗಳನ್ನು ನೋಡಬಹುದು ಮೊದಲನೇಯದು ಕಪ್ಪು, ಬಿಳಿ ಹಾಗೂ ಬೂದು ಬಣ್ಣದಲ್ಲಿ ಸಿಗುತ್ತದೆ.
ಇದೊಂದು ಮೂರರಿಂದ ಮೂರುವರೆ ತಿಂಗಳಿನಲ್ಲಿ ಬೆಳೆಯಬಹುದಾದ ಬೆಳೆ ಪ್ರತಿಯೊಂದು ಎಲೆ, ಬೇರು ಕಾಂಡ ಬಹಳಷ್ಟು ಉಪಯೋಗಗಳಿಂದ ಕೂಡಿದೆ. ಮೈಸೂರಿನ ಸಿಎಫ್‌ಟಿಆರ್‌ಐ ಉತ್ತಮ ತಳಿಯ ಅಭಿವೃದ್ದಿ ಪಡಿಸಿದ್ದಾರೆ ಇದನ್ನು ನೋಡಿ ನಾನು ಮೈಸೂರಿನಿಂದ ತಂದು ಎರಡು ಎಕರೆ ಭೂಮಿಯಲ್ಲಿ ಬೇಸಾಯ ಮಾಡಿದ್ದಿನಿ ಎನ್ನುತ್ತಾರೆ ಮಲ್ಲನಗೌಡ ಪಾಟೀಲ್ ಅವರು.
ಒಟ್ಟಾರೆ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಈ ಸಸ್ಯ ಕಡಿಮೆ ಅವಧಿಯಲ್ಲಿ ಬರದ ನಾಡಿನಲ್ಲೂ ಕೂಡ ಉತ್ಕೃಷ್ಟವಾಗಿ ಬೆಳೆಯಬಹುದು, ರೈತರಿಗೆ ವರವಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
ಇದು ಹೆಚ್ಚಿನ ಪೋಷಕಾಂಶಗಳೊAದಿಗೆ ಒಮೇಗಾ ೩ ಕೂಡ ಇದರಲ್ಲಿ ಹೆಚ್ಚಿದೆ ಇದರೊಂದಿಗೆ ಕೆಲವೊಂದು ರೋಗಗಳಿಗೆ ರಾಮಬಾಣ ಕೂಡ ಇದಾಗಿದೆ. ಈಗಾಗಿ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ೧೦೦೦ ರೂಪಾಯಿವರೆಗೆ ಇದೆ.
ಇವುಗಳ ಬೇಸಾಯಕ್ಕೆ ಫಲವತ್ತಾದ ಭೂಮಿ ಬೇಕಾಗಿಲ್ಲ ಮತ್ತು ಬರದ ಪರಿಸ್ಥಿಯನ್ನು ತಡೆದು ಬೆಳೆಯುವ ಶಕ್ತಿ ಇರುವುದರಿಂದ ಮಳೆಯಾಶ್ರಿತ ರೈತರಿಗೂ ಇದು ವರದಾನವಾಗಿದೆ ಎಂದರೆ ತಪ್ಪಲ್ಲ.
ಚೀಯಾ ಸೀಡ್ ಬೇಸಾಯದ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ: ೯೯೦೧೫೬೬೯೦೫ ಸಂಪರ್ಕಿಸಬಹುದು.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು