November 27, 2024

Newsnap Kannada

The World at your finger tips!

sudhakar 1

ವಿಕ್ಟೋರಿಯಾ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ: ಆರೋಗ್ಯ ಸಚಿವ ಡಾ.ಸುಧಾಕರ್

Spread the love
  • ಪೋರ್ಟೇಬಲ್ ಆಕ್ಸಿಜನ್ ಪೂರೈಕೆ

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಕ್ಟೋರಿಯಾ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆವರಣದಲ್ಲಿ ಒಂದು ಕಟ್ಟಡದಲ್ಲಿ 85 ಹಾಸಿಗೆ, ಪಿಎಂಎಸ್ ಎಸ್ ವೈನಲ್ಲಿ 180 ಹಾಸಿಗೆಯನ್ನು ಸಂಪೂರ್ಣ ಕೋವಿಡ್ ಗೆ ಮೀಸಲಿಡಲಾಗುವುದು. ಜೊತೆಗೆ 100 ರಿಂದ 150 ಐಸಿಯು ಹಾಸಿಗೆ ಇರುವ ಆಸ್ಪತ್ರೆ ನಿರ್ಮಿಸಲಾಗುವುದು. ಇದನ್ನು ಅಂತಿಮಗೊಳಿಸಲಾಗುವುದು. ಹಲವು ಜಿಲ್ಲಾ ಕೇಂದ್ರಗಳ ಮೆಡಿಕಲ್ ಕಾಲೇಜುಗಳ ಆವರಣದಲ್ಲಿ ಈ ರೀತಿ ಮೇಕ್ ಶಿಫ್ಟ್ ಆಸ್ಪತ್ರೆ ರೂಪಿಸಲಾಗುವುದು ಎಂದರು.

ಬೆಂಗಳೂರಿಗೆ 5,000, ಬೇರೆ ಜಿಲ್ಲೆಗಳಿಗೆ ತಲಾ ಒಂದು ಸಾವಿರದಂತೆ ಪೋರ್ಟೇಬಲ್ ಆಕ್ಸಿಜನ್ ನೀಡಲಾಗುವುದು. ಆಕ್ಸಿಜನ್ ಬೇಕಾದವರು ಮಾತ್ರ ಇಂತಹ ಸೌಲಭ್ಯ ಬಳಸಿಕೊಳ್ಳಬಹುದು. ಮನೆ ಆರೈಕೆಯಲ್ಲಿರುವವರಿಗೆ ಸಿಐಐ ಸಹಯೋಗದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 75 ರಷ್ಟು ಹಾಸಿಗೆಯನ್ನು ಕೋವಿಡ್ ಗೆ ಮೀಸಲಿಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಎರಡರಿಂದ ಎರಡೂವರೆ ಸಾವಿರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುವುದು. ಒಂದು ಘಟಕವು 200-250 ಹಾಸಿಗೆಗಳನ್ನು ಹೊಂದಿರುತ್ತದೆ. ಆಸ್ಪತ್ರೆಗಳ ಆವರಣದಲ್ಲೇ ಇದನ್ನು ಅಭಿವೃದ್ಧಿಪಡಿಸಲಾಗುವುದು. 15 ದಿನದೊಳಗೆ ಇದನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ದಿನಕ್ಕೆ 300 ಟನ್ ಆಕ್ಸಿಜನ್ ಪೂರೈಕೆ ನಿಗದಿಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ 800 ಟನ್ ಗೆ ಹೆಚ್ಚಿಸಲಾಗಿದೆ. ಇದು ಏಪ್ರಿಲ್ 30 ರವರೆಗೆ ಸಿಗಲಿದೆ. ಒಂದು ಲಕ್ಷಕ್ಕೂ ಹೆಚ್ಚು ರೆಮ್ ಡಿಸಿವಿರ್ ಬೇಕೆಂದು ಕೋರಿದ್ದು, ಅದರಂತೆ 1.22 ಲಕ್ಷ ಔಷಧಿ ದೊರೆತಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!