ರಾಜ್ಯದ ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ಅವರುಗಳನ್ನೇ ಸಿಎಂ , ಮಂತ್ರಿಯನ್ನಾಗಿ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಾಗ್ದಾಳಿ ಮಾಡಿದರು.
ಮೀಸಲಾತಿಗಾಗಿ ವಿವಿಧ ಜಾತಿ ಸ್ವಾಮೀಜಿಗಳ ಹೋರಾಟಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ಸಮಸ್ಯೆ ಸರಿಹೋಗಬೇಕು ಅಂದರೆ ಎಲ್ಲಾ ಸ್ವಾಮೀಗಳು ಎಂಎಲ್ಎ, ಸಿಎಂ ಆಗಿಬಿಡಬೇಕು. ಆಗ ಸಮಸ್ಯೆ ಬಗೆಹರಿಯಬಹುದಷ್ಟೇ. ಇಲ್ಲಾ ಅಂದ್ರೆ ಇದು ನೆವರ್ ಎಂಡಿಂಗ್ ಪ್ರಾಬ್ಲಂ ಇದು ಎಂದರು.
ಕುಂಬಾರರು, ಮಡಿವಾಳರು ಈ ಮೀಸಲಾತಿ ಕೇಳಿದರೆ ಪರವಾಗಿಲ್ಲ. ತಳಸಮುದಾಯದ ಶೋಷಿತರು ಮೀಸಲಾತಿ ಕೇಳೋದ್ರಲ್ಲಿ ಅರ್ಥ ಇದೆ. ಲಿಂಗಾಯತರು 2-ಎಗೆ ಬಂದರೆ ಕುರುಬರೆಲ್ಲ ಸತ್ತುಹೋಗುತ್ತಾರೆ. 2-ಎನಲ್ಲಿ ಹೆಚ್ಚು ಫಲಾನುಭವಿಗಳು ಕುರುಬರೇ ಇರೋದು. ಅವರೇನಾದ್ರೂ 2-ಎಗೆ ಬಂದರೆ ಕುರುಬರನ್ನು ಸಾಯಿಸಿ ಬಿಡುತ್ತಾರೆ ಅಂತಾ ಆರೋಪಿಸಿದರು.
ಅದೇ ರೀತಿ ಕುರುಬರಿಗೆ ಎಸ್ಟಿ ಮೀಸಲಾತಿ ಕೊಟ್ರೆ ನಿಜವಾಗಿಯೂ ಎಸ್ ಟಿ ಗಳಾದವರ ಕಥೆ ಮುಗಿಯಿತು ಎಂದಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು