Editorial

ನಿಮ್ಮ ಶ್ವಾಸಕೋಶವನ್ನು ಕೊರೋನಾ ಸೋಂಕಿನಿಂದ ಬಚಾವ್ ಮಾಡಲು ಮನೆ ಮದ್ದು ಮಾಡಿಕೊಳ್ಳಿ

ಕೊರೊನಾ 2ನೇ ಅಲೆಯಿಂದ 60 ರಿಂದ 65 ಪ್ರತಿಶತದಷ್ಟು ರೋಗಿಗಳು ಉಸಿರಾಟದ ತೊಂದರೆ ಅನುಭವಿಸುತ್ತಿ ದ್ದಾರೆ.

2 ರಿಂದ 3 ದಿನಗಳಲ್ಲಿ ಸೋಂಕಿತರ ಆಮ್ಲಜನಕದ ಮಟ್ಟ 80 ಕ್ಕಿಂತ ಕಡಿಮೆ ತಲುಪುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಆಮ್ಲಜನಕದ ಅಗತ್ಯ ಇರುತ್ತದೆ. ‌

ಈ ಅವಧಿಯಲ್ಲಿ ಆಮ್ಲಜನಕ ಲಭ್ಯವಿಲ್ಲದಿದ್ದರೆ, ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ. ಶ್ವಾಸಕೋಶದ ಕಾಳಜಿಯನ್ನು ಮೊದಲೇ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಶ್ವಾಸಕೋಶವನ್ನು ಆರೋಗ್ಯಯುತವಾಗಿ ನೋಡಿಕೊಳ್ಳುವ ಕೆಲವು ಆಹಾರ ಪದ್ಧತಿಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಿ.

ಅರಿಶಿಣ :

  • ಅರಿಶಿಣದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದಂತಹ ಸಮಸ್ಯೆಗಳನ್ನು ಗುಣ ಪಡಿಸುವ ಅಂಶಗಳಿದೆ.
  • ಇದು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಪ್ರತಿದಿನ ಮಲಗುವ ಮುನ್ನ ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ.
  • ಅರಿಶಿಣ, ಅಮೃತ ಬಳ್ಳಿ, ದಾಲ್ಚಿನಿ, ಲವಂಗ, ಶುಂಠಿ ಮತ್ತು ತುಳಸಿ ಸೇರಿಸಿ ಕಷಾಯ ತಯಾರಿಸಬಹುದು.
  • ಇದು ಶ್ವಾಸಕೋಶವನ್ನು ಸದೃಢವಾಗಿರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಜೇನುತುಪ್ಪ:

  • ಜೇನುತುಪ್ಪಕ್ಕೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಶ್ವಾಸಕೋಶವು ಬಲಗೊಳ್ಳುತ್ತದೆ.
  • ದೇಹದಿಂದ ವಿಷವನ್ನು ತೆಗೆದುಹಾಕಲು ಬೆಳಿಗ್ಗೆ ಹೊತ್ತಿಗೆ ಬೆಚ್ಚಗಿನ ನಿಂಬೆ ರಸ ಮಿಶ್ರಿತ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವುದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
  • ಕಷಾಯಕ್ಕೆ ಕೂಡ ಜೇನುತುಪ್ಪವನ್ನು ಸೇರಿಸಬಹುದು.

ತುಳಸಿ

  • ತುಳಸಿ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಕಬ್ಬಿಣ, ಕ್ಲೋರೊಫಿಲ್ ಮೆಗ್ನೀಸಿಯಮ್, ಕ್ಯಾರೋಟಿನ್ ಮತ್ತು ವಿಟಮಿನ್ಸಿ ಇರುತ್ತವೆ.
  • ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ 4ರಿಂದ5 ಎಲೆಗಳನ್ನು ಅಗೆಯುವುದರಿಂದ ಶ್ವಾಸಕೋಶದ ಆರೋಗ್ಯ ಹೆಚ್ಚುತ್ತದೆ.
  • ತುಳಸಿ ಜೊತೆಗೆ ಅಮೃತ ಬಳ್ಳಿ ಸೇರಿಸಿ ಆಯುರ್ವೇದ ಕಷಾಯವನ್ನು ತಯಾರಿಸಬಹುದು.

ಅಂಜೂರ:

  • ಅಂಜೂರದಲ್ಲಿ ಬಹಳಷ್ಟು ಪವಾಡದ ಅಂಶಗಳು ಕಂಡುಬರುತ್ತವೆ.
  • ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ ಮತ್ತು ಕಬ್ಬಿಣದ ಅಂಶಗಳಿವೆ.
  • ಅಂಜೂರ ಸೇವಿಸುವುದರಿಂದ ಶ್ವಾಸಕೋಶವು ಬಲಗೊಳ್ಳುತ್ತದೆ. ಇದರೊಂದಿಗೆ ಹೃದಯವು ಆರೋಗ್ಯವಾಗಿ ಇರುತ್ತದೆ.

ಬೆಳ್ಳುಳ್ಳಿ :

  • ಬೆಳ್ಳುಳ್ಳಿ ಪ್ರತಿಜೀವಕ, ಆಂಟಿಫಂಗಲ್, ಆಂಟಿವೈರಲ್ ಗುಣಲಕ್ಷಣಗಳು ಮತ್ತು ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಜೀವಸತ್ವಗಳಂತಹ ಅಂಶಗಳನ್ನು ಒಳಗೊಂಡಿದೆ.
  • ಇದು ಶ್ವಾಸಕೋಶವನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2ರಿಂದ3 ಬೆಳ್ಳುಳ್ಳಿ ಮೊಗ್ಗುಗಳನ್ನು ಸೇವಿಸಬಹುದು.
  • ರಾತ್ರಿ ಹೊತ್ತಿಗೆ ನೀವು ಹೆಚ್ಚು ಒತ್ತಡದಲ್ಲಿದ್ದರೆ ಒಂದು ಬೆಳ್ಳುಳ್ಳಿ ಮೊಗ್ಗು ಮತ್ತು ಒಂದು ಲವಂಗವನ್ನು ನೆನೆಸಿ ಅದನ್ನು ಬೆಳಿಗ್ಗೆ ಸೇವಿಸುವುದು ಉತ್ತಮವಾಗಿದೆ.
Team Newsnap
Leave a Comment
Share
Published by
Team Newsnap

Recent Posts

ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ

ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More

April 28, 2024

ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More

April 28, 2024

ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ

ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More

April 27, 2024

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ

ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More

April 27, 2024

14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ

ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More

April 27, 2024

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More

April 26, 2024