- ಹಲವಾರು ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಫೆಬ್ರವರಿ 21: ಕರ್ನಾಟಕ ಸರ್ಕಾರವು ಅಧಿಕ ಬಡ್ಡಿ ನಿಷೇಧ ಅಧಿನಿಯಮ, 2004ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ತಿದ್ದುಪಡಿಯ ಪ್ರಕಾರ, ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 5 ವರ್ಷ ದಂಡ ವಿಧಿಸಲಾಗುವುದು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಪ್ರಮುಖ ತಿದ್ದುಪಡಿಗಳು ಮತ್ತು ನಿರ್ಣಯಗಳು:
ಕಾನೂನು ತಿದ್ದುಪಡಿ:
- ಕರ್ನಾಟಕ ಗಿರಿವಿದಾರರ ಅಧಿನಿಯಮ, 1961ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಸಂಪುಟ ಅನುಮೋದಿಸಿದೆ.
- ಬಡವರು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ತಿದ್ದುಪಡಿ ಮಾಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ:
- ವಿಜಯಪುರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಕಾಮಗಾರಿಗೆ ₹1288.79 ಲಕ್ಷ ವೆಚ್ಚದ ಅನುಮೋದನೆ.
- 2024-25ನೇ ಸಾಲಿನಿಂದ ಕಲ್ಯಾಣ ಕರ್ನಾಟಕದ 306 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಶಿಕ್ಷಣಕ್ಕೆ ₹15.30 ಕೋಟಿಗಳ ವೆಚ್ಚದಲ್ಲಿ ತರಬೇತುದಾರರನ್ನು ನೇಮಕ.
ಪೌರಾಡಳಿತ ಮತ್ತು ಅಭಿವೃದ್ಧಿ:
- ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯ 23 ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿರ್ಧಾರ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ನವೀಕರಣಕ್ಕೆ ₹199 ಕೋಟಿ ಅನುಮೋದನೆ.
ಮೀನುಗಾರರ ಕಲ್ಯಾಣ:
- “ಮಸ್ತ್ಯಾಶ್ರಯ ಯೋಜನೆ” ಅಡಿ 10,000 ಮನೆ ನಿರ್ಮಾಣಕ್ಕೆ ಅನುಮೋದನೆ.
ಅನ್ನಭಾಗ್ಯ ಯೋಜನೆ:
- 2025 ಮೇ ತಿಂಗಳಿಂದ ಅರ್ಹ ಫಲಾನುಭವಿಗಳಿಗೆ ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿ ವಿತರಣೆಗೆ ಸಚಿವ ಸಂಪುಟ ಒಪ್ಪಿಗೆ.
ಶೈಕ್ಷಣಿಕ ಹಾಗೂ ಸಮಾಜ ಕಲ್ಯಾಣ:
- ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಿಗೆ ₹441 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ.
ಪ್ರವಾಸೋದ್ಯಮ ಅಭಿವೃದ್ಧಿ:
- ಬೀದರ್ ಶ್ರೀ ಪಾಪನಾಶ ದೇವಸ್ಥಾನದ ಅಭಿವೃದ್ಧಿಗೆ ₹22.41 ಕೋಟಿ ಮಂಜೂರು.
- ಬೆಳಗಾವಿ ಜಿಲ್ಲೆಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹18.37 ಕೋಟಿ ಅನುಮೋದನೆ.
- ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನದ ಸಮಗ್ರ ಅಭಿವೃದ್ಧಿಗೆ ₹61.99 ಕೋಟಿಗಳ ಯೋಜನೆಗೆ ಅನುಮೋದನೆ.
ಕೃಷಿ ಮಾರುಕಟ್ಟೆ ನಿಯಂತ್ರಣ:
- “ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ & ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2025” ಅನುಮೋದನೆ.
- ಮಾರುಕಟ್ಟೆ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ವಿಸ್ತರಣೆ.
ಇದನ್ನು ಓದಿ –SSLC ಪಾಸ್ ಅಂಕವನ್ನು 35ರಿಂದ 33ಕ್ಕೆ ಇಳಿಸಲು ಖಾಸಗಿ ಶಾಲೆಗಳ ಒತ್ತಾಯ
ಈ ನಿರ್ಧಾರಗಳ ಮೂಲಕ ರಾಜ್ಯ ಸರ್ಕಾರ ಬಹಳಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು