Editorial

ಮಹಾವೀರ ಜಯಂತಿ 2022

ಮಹಾವೀರ ಜನಿಸಿದ ವರ್ಷ – ಕ್ರಿ ಪೂ 599
ಜನಿಸಿದ ಸ್ಥಳ – ಬಿಹಾರದ ಕುಂದಲಾಪುರ
ತಂದೆಯ ಹೆಸರು – ಸಿದ್ಧಾರ್ಥ
ತಾಯಿ ಹೆಸರು – ತ್ರಿಶಲಾದೇವಿ
ವಿವಾಹವಾಗಿದ್ದು – 18 ನೇ ವಯಸ್ಸು
ಪತ್ನಿಯ ಹೆಸರು – ಯಶೋಧರೆ
ಜೀವನದ ಅಂತ್ಯ ದಿನಗಳು – ಬಿಹಾರದ ಪಾವಾ ಪುರಿ

ಅಹಿಂಸಾ ಪರಮೋ ಧರ್ಮಃ’’ ಎಂಬ ಜೈನ ಧರ್ಮದ ಮೂಲ ಮಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತ್ಯಾಗ ಪ್ರಧಾನವಾದ ಜೈನಧರ್ಮದಲ್ಲಿ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ ಮಹಾವೀರರು, ತಮ್ಮ ಹಿಂದಿನ ಇಪ್ಪತ್ತಮೂರು ತೀರ್ಥಂಕರುಗಳು ಪಾಲಿಸಿಕೊಂಡು ಬಂದಂತಹ ಅಹಿಂಸೆ, ತ್ಯಾಗ ಮೂಲವಾದ ಸಂಪ್ರದಾಯಕ್ಕೆ ಸ್ವಷ್ಟ ನಿಲುವು, ಸಮಕಾಲೀನ ವಿಚಾರಗಳನ್ನು ಅಳವಡಿಸಿದವರು.

ಮಹಾವೀರರ ಮೊದಲ ಹೆಸರು ವರ್ಧಮಾನ

ವರ್ಧಮಾನ, ಸನ್ಮತಿ, ವೀರ, ಅತಿವೀರ ಎಂದೆಲ್ಲಾ ಹೆಸರುಗಳಿಂದ ಗುರುತಿಸಲ್ಪಡುವ ಮಹಾವೀರ ಹುಟ್ಟಿದ್ದು ಕ್ರಿ.ಪೂ. 599 ರಲ್ಲಿ. ಈಗಿನ ಬಿಹಾರದ ಕುಂದಲಾಪುರ (ಇದಕ್ಕೆ ವೈಶಾಲಿ ಎಂದೂ ಹೆಸರಿತ್ತು) ಈ ನಗರದ ದೊರೆ ಸಿದ್ಧಾರ್ಥ ಹಾಗೂ ತ್ರಿಶಲಾ ದೇವಿಯ ಮಗುವಾಗಿ ಜನಿಸಿದ. ಹುಟ್ಟಿದಾಗ ‘ವರ್ಧಮಾನ’ ಎಂದೇ ನಾಮಕರಣ ಮಾಡಲಾಗಿತ್ತು.

ವರ್ಧಮಾನ ಮಹಾವೀರನಾಗಿ ಬದಲಾಗಿದ್ದು

ರಾಜನ ಮಗನಾಗಿದ್ದರೂ ವೈಭೋಗದಲ್ಲಿ ಆಸಕ್ತಿ ವಹಿಸದೆ ತನ್ನ ಧರ್ಮದ ಬಗ್ಗೆ ತಿಳಿದುಕೊಳ್ಳಲಾರಂಭಿದ. ಸಂಸಾರ ಬಂಧನ ಎನಿಸಲು ಪ್ರಾರಂಭವಾದ ಕೂಡಲೇ ತನ್ನ 30 ನೇ ವಯಸ್ಸಿನಲ್ಲಿ ಮನೆ ತೊರೆದು ಸುತ್ತಮುತ್ತಲಿನ ಆಗುಹೋಗುಗಳ ಕಡೆ ಗಮನಹರಿಸಿ ದೇಶ ಸಂಚಾರ ಕೈಗೊಂಡರು. ತನ್ನ ದೇಶ ಸಂಚಾರದ ಸಮಯದಲ್ಲಿ ತನ್ನ ವಸ್ತ್ರವನ್ನು ತ್ಯಾಗ ಮಾಡಿದರು. ವರ್ಧಮಾನ ಆಗಿದ್ದ ಮನುಷ್ಯ ಮಹಾವೀರನಾಗಿ ಬದಲಾಗಲು ಆತನಲ್ಲಿದ್ದ ವಿಶಿಷ್ಟವಾದ ಚಾತುರ್ಯಗಳು ಮತ್ತು ಸೂಕ್ಷ್ಮ ಸಂವೇದನಾ ಶಕ್ತಿ ಕಾರಣವಾಯಿತು.

ದಿಗಂಬರತ್ವದ ಅರ್ಥ ಬಯಲಾಗುವುದು. ಬೆತ್ತಲಾಗುವುದೆಂದರೆ ಕಿಂಚಿತ್ತೂ ತನ್ನದಲ್ಲವೆಂಬ ,ತನ್ನ ದೇಹದ ಮೇಲಿನ ಮಮತ್ವವನ್ನು ಬಿಟ್ಟು ಒಳಗಿನ ಆತ್ಮನ ಬಗ್ಗೆ ಸದಾ ಚಿಂತಿಸುವುದು ಎರಡನೆಯದು. ಮಲ, ಮೂತ್ರ, ಕ್ರಿಮಿ-ಕೀಟಗಳ ಈ ದೇಹಕ್ಕೆ ನಿರಂತರ ಅಲಂಕರಿಸುವ ನಾವು ಒಳಗಿನ ಸ್ವಚ್ಛತೆಯ ಅರಿವು ಅರಿಯದಾಗಿರುತ್ತೇವೆ ಎಂಬುದನ್ನು ಮನಗಂಡ ಮಹಾವೀರರು ತಮ್ಮನ್ನು ತಾವು ತಿಳಿದುಕೊಳ್ಳಲು ಸುಮಾರು ಹನ್ನೆರೆಡು ವರುಷ ತಪಸ್ಸು ಮಾಡುತ್ತಾರೆ. ತನ್ನೊಳಗಿನ ಅನೇಕ ಪ್ರಶ್ನೆಗಳಿಗೆ ತನ್ನಲ್ಲಿಯೇ ಮೌನವಾಗಿ ಉತ್ತರವನ್ನು ಕಂಡುಕೊಂಡು ‘ಜ್ಞಾನಿ’ಯಾಗುತ್ತಾರೆ. ತಮ್ಮ ಆತ್ಮಕಲ್ಯಾಣದೊಂದಿಗೆ ಇತರರ ಆತ್ಮಕಲ್ಯಾಣದ ಮಾರ್ಗವನ್ನು ಯಾರು ತೋರುತ್ತಾರೋ ಅವರು ತೀರ್ಥಂಕರರಾಗುತ್ತಾರೆ.

ತೀರ್ಥಂಕರರು ಎಂದರೆ ಮಾರ್ಗದರ್ಶಕರು ಅಥವಾ ಭವಸಾಗರವನ್ನು ದಾಟಬಲ್ಲ ಧರ್ಮಗುರು

ಬಿಹಾರದ ಸುತ್ತ 30 ವರ್ಷಗಳ ಕಾಲ ಸಂಚರಿಸುವ ಮಹಾವೀರರು, ಜಾತಿ, ಉಪ ಜಾತಿಗಳನ್ನು ವಿರೋಧಿಸುತ್ತಾರೆ. ಯಜ್ಞ-ಯಾಗಾದಿಗಳಿಗೆ ಬಲಿ ಕೊಡುವುದನ್ನು ಖಂಡಿಸಿ ‘ಈ ಜಗತ್ತಿನಲ್ಲಿ ಮನುಷ್ಯನಿಗೆ ಬದುಕುವಷ್ಟೇ ಹಕ್ಕು ಎಲ್ಲಾ ಪ್ರಾಣಿ,ಕ್ರಿಮಿ-ಕೀಟಗಳಿಗೂ ಇದೆ. ಆದ್ದರಿಂದ ಯಾವುದನ್ನು ಹಿಂಸಿಸಬೇಡ, ನೀನೂ ಜೀವಿಸು ಇತರರನ್ನೂ ಜೀವಿಸಲು ಬಿಡು’ ಎಂಬ ಅವರ ಮಾತು ಲಕ್ಷಾಂತರ ಜನರ ಮನಗೆಲ್ಲುತ್ತದೆ. ಜನರಿಗೆ ಅರ್ಥವಾಗುವಂತೆ ಅರ್ಧಮಾಗಧಿ ಭಾಷೆಯಲ್ಲಿಯೇ ತಮ್ಮ ಮಾತುಗಳನ್ನು ಜನರಿಗೆ ತಲುಪಿಸುತ್ತಾ ಅವರ ಪ್ರೀತಿ ಗಳಿಸುತ್ತಾರೆ.

ಮಹಾವೀರರು ಪಂಚಾಣುವ್ರತಗಳನ್ನು ಜನರಿಗೆ ತಿಳಿಸಿ ಹೇಳುತ್ತಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಈ ತತ್ತ್ವಗಳು ಜೈನಧರ್ಮವು ವಿಶ್ವಧರ್ಮವೆಂದು ಜಗತ್ತಿಗೆ ತಿಳಿಸುವಲ್ಲಿ ಮಹತ್ತರವಾಗಿವೆ. ಅಹಿಂಸೆಯನ್ನು ಇಂದಿಗೂ ಸೂಕ್ಷ್ಮಾತಿಸೂಕ್ಷ್ಮವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ದಿಗಂಬರ ಮುನಿಗಳು ತಮ್ಮ ಕೈಯಲ್ಲಿ ಬಿದ್ದ ನವಿಲುಗರಿಗಳಿಂದ ಮಾಡಿದ ‘ಪಿಂಛ’ದಿಂದ ತಾವು ಕುಳಿತುಕೊಳ್ಳುವ ಜಾಗದಲ್ಲಿ ಸೂಕ್ಷ್ಮ ಜೀವಿಗಳ ಸಾವಾಗದಂತೆ ಕುಳಿತುಕೊಳ್ಳುತ್ತಾರೆ.

ಜೈನರ ಪುರಾಣಗಳ ಪ್ರಕಾರ ಭಗವಾನ್ ಮಹಾವೀರ ಜೈನ ಸಮುದಾಯಕ್ಕೆ ಸೇರಿದ 24 ನೇ ತೀರ್ಥಂಕರ ಎಂದು ಗುರುತಿಸಲಾಗಿದೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನಧರ್ಮಕ್ಕೆ ಜೊಸ ನೆಲೆಯನ್ನು ತಂದುಕೊಟ್ಟ ಮಹಾವೀರರು ತಮ್ಮ ನಡೆ, ನುಡಿ, ಆಚಾರ-ವಿಚಾರಗಳಿಂದ ಜನ ಮಾನಸವನ್ನು ಗೆದ್ದವರು. ಜೈನಧರ್ಮವನ್ನು ವಿಶ್ವಧರ್ಮವಾಗಿ ಎತ್ತಿಹಿಡಿದು, ತಮ್ಮ ತಾತ್ತ್ವಿಕ ಚಿಂತನೆಗಳಿಂದ ಭಾರತದಲ್ಲಿ ಧರ್ಮ ಪ್ರವರ್ತಕರೆಂದು ಕರೆಸಿಕೊಂಡವರ ಸಾಲಿನಲ್ಲಿ ಭಗವಾನ ಮಹಾವೀರ ಹೆಸರು ಚಿರಸ್ಥಾಯಿಯಾದದ್ದು.

ಅಸತ್ಯಕ್ಕೆ ಆ ಕ್ಷಣಕ್ಕೆ ಗೆಲ್ಲುವ ಶಕ್ತಿಯಿದೆ. ಆದರೆ ಸತ್ಯವೊಂದೇ ನಿತ್ಯ ಭಯವಿಲ್ಲದೆ ಬದುಕು ನಡೆಸಲು ಇರುವ ಸಾಧನ. ಅಸ್ತೇಯ ಅಂದರೆ ಕಳ್ಳತನ. ನಿನ್ನದೇ ನಿನ್ನ ಬಳಿ ಉಳಿಯಲಾರದು. ಪರರ ಗಂಟು ಉಳಿಯಬಹುದೇ ಎಂದು ಅರಿತು ನಡೆಯುವುದು ಕಷ್ಟಸಾಧ್ಯ. ಆದರೆ ಸತತ ಮನನ, ಚಿಂತನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳಿಂದಾಗಿ ಇದು ಅಸಾಧ್ಯವಲ್ಲ. ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವುದು ಎಂಬ ಒಂದೇ ಅರ್ಥವಲ್ಲ. ಮದುವೆಯಾದ ಮೇಲೆಯೂ ತನ್ನ ಪತ್ನಿಯನ್ನು ಬಿಟ್ಟು ಬೇರೆಯ ಹೆಣ್ಣುಮಕ್ಕಳನ್ನು ಗೌರವಿಸುವ ಹಾಗೂ ಅವರನ್ನು ಅಕ್ಕ-ತಂಗಿಯರೆಂದು ತಿಳಿದುಕೊಳ್ಳುವುದು ಮುಖ್ಯ.

ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಇವು ಜೈನಧರ್ಮದ ಪ್ರಮುಖ ತತ್ತ್ವಗಳು. ಇದನ್ನು ಮಹಾವೀರರು ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತಾರೆ. ಸದಾ ಕಾಲ ಒಳ್ಳೆಯದ್ದನ್ನೇ ನೋಡು, ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ, ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡತೆಗೆ ಕಾರಣವಾಗುತ್ತದೆ ಎಂಬ ಅಂದಿನ ಮಾತುಗಳು ಇಂದಿನ ಕಾಲಘಟ್ಟದಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಡಿಸುತ್ತವೆ.

ಮನುಷ್ಯನ ದುರಾಸೆಯಿಂದಲೇ ಇಂದು ಈ ಜಗತ್ತು ಅಳಿವಿನಂಚಿಗೆ ಸರಿಯುತ್ತಿದೆ. ತನ್ನ ಸ್ವಾರ್ಥಕ್ಕೆ ತನ್ನ ಸುತ್ತಲಿನ ಪರಿಸರ, ನೆಲ, ಜಲ, ವಾಯುವನ್ನು ಮಲಿನಗೊಳಿಸುತ್ತಿರುವ ನಮಗೆ ಮಹಾವೀರ ಮಾತುಗಳು ಮಾರ್ಗದರ್ಶಕವಾಗಬೇಕು.

ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ.

Team Newsnap
Leave a Comment
Share
Published by
Team Newsnap

Recent Posts

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024