‘ಮಹಾರಾಷ್ಟ್ರ ಸರ್ಕಾರದ ಬಗ್ಗೆ ಜನರಲ್ಲಿ ಬೇಸರ ಮೂಡಿದೆ. ಹಾಗಾಗಿ ಮಹಾ ಸರ್ಕಾರವನ್ನು ಬಿಜೆಪಿ ಪತನಗೊಳಿಸುವದಿಲ್ಲ. ಅದಾಗಿಯೇ ಪತನಗೊಳ್ಳಲಿದೆ’ ಎಂದು ಬಿಜೆಪಿ ನಾಯಕ ದೇವೆಂದ್ರ ಘಡ್ನವೀಸ್ ಹೇಳಿದರು.
‘ಶಿವಸೇನಾ ಸಾರಥ್ಯದ ಮಹಾ ಸರ್ಕಾರದ ಬಗ್ಗೆ ಜನರಲ್ಲಿ ವಿರೋಧವಿದೆ. ಹಾಗಾಗಿ ಬಿಜೆಪಿ ಅದನ್ನು ಪತನಗೊಳಿಸದೇ ಅದಾಗಿಯೇ ಪತನಗೊಳ್ಳಲಿದೆ’ ಎಂದು ತಿಳಿಸಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ನಿನ್ನೆ ದೇವೇಂದ್ರ ಘಡ್ನವೀಸ್ ಅವರನ್ನು ಭೇಟಿಯಾಗಿದ್ದರು. ಇದು ಎಲ್ಲರಲ್ಲಿಯೂ ಸಂಚಲನ ಮೂಡಿಸಿತ್ತು. ಇದರ ಬಗ್ಗೆ ಘಡ್ನವೀಸ್ ಸ್ಪಷ್ಟನೆ ನೀಡಿ ರಾವುತ್ ‘ಶಿವಸೇನಾ ಪಕ್ಷದ ಮುಖವಾಣಿ, ‘ಸಾಮ್ನಾ’ ಪತ್ರಿಕೆಯ ಸಂಪಾದಕರೂ ಹೌದು. ಅವರು ನನ್ನೊಡನೆ ಮಾಡಲಿರುವ ಸಂದರ್ಶನ ಕುರಿತ ಚರ್ಚೆಗೆ ಬಂದಿದ್ದರು. ನನ್ನ ಪೂರ್ಣ ಸಂದರ್ಶನ ಪ್ರಕಟ ಮಾಡಬೇಕು. ಕ್ಯಾಮೆರಾದ ಬಳಕೆ ಮುಂತಾದ ವಿಷಯಗಳ ಬಗ್ಗೆ ಮಾತನಾಡುವದಕ್ಕೆ ಬಂದಿದ್ದರು. ಇದರಲ್ಲಿ ಬೇರೆ ವಿಶೇಷವೇನಿಲ್ಲ’ ಎಂದು ತಿಳಿಸಿದರು.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವುತ್ ಅವರೂ ಸಹ, ಘಡ್ನವೀಸ್ ಕೇವಲ ಪ್ರತಿಪಕ್ಷದವರು.
ನಮ್ಮ ಶತ್ರುವಲ್ಲ. ಸಂದರ್ಶನದ ಚರ್ಚೆಗೆ ಮಾತ್ರ ಅವರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ