ನಟ ಸುದೀಪ್ ಗೆ ಕಂಟಕ ಎದುರಾಗಿದೆ. ಮದ್ರಾಸ್ ಹೈಕೋರ್ಟ್‌ನಿಂದ ನಟ ಸುದೀಪ್‌ಗೆ ನೊಟೀಸ್ ಒಂದು ಬಂದಿದೆ. ನೊಟೀಸ್‌ಗೆ ಸುದೀಪ್ ಉತ್ತರ ನೀಡಬೇಕಿದೆ.
ಸುದೀಪ್ ರಮ್ಮಿ ಸರ್ಕಲ್ ಆನ್‌ಲೈನ್ ಜೂಜನ್ನು ಪ್ರಚಾರ ಮಾಡುತ್ತಿರುವ ಕಾರಣ ಮದ್ರಾಸ್ ಹೈಕೋರ್ಟ್ ಈ ನೊಟೀಸ್ ನೀಡಿದೆ. ಸುದೀಪ್ ಮಾತ್ರವಲ್ಲದೆ, ರಮ್ಮಿ ಸರ್ಕಲ್ ಜಾಹೀರಾತಿನಲ್ಲಿ ನಟಿಸಿರುವ ರಾಣಾ ದಗ್ಗುಬಾಟಿ, ನಟಿ ತಮನ್ನಾ, ಪ್ರಕಾಶ್ ರೈ ಇನ್ನೂ ಕೆಲವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
ನಟ ಸುದೀಪ್ ಅವರು, ರಮ್ಮಿ ಸರ್ಕಲ್ ಎಂಬ ಆನ್‌ಲೈನ್ ಜೂಜು ಆ್ಯಪ್ ನ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಈ ಜಾಹೀರಾತು ಜನರು ಆನ್‌ಲೈನ್ ನಲ್ಲಿ ಹಣ ತೊಡಗಿಸಿ ರಮ್ಮಿ ಆಟವಾಡಲು ಪ್ರಚೋದನೆ ನೀಡುತ್ತದೆ.
ಜನರು ಹಣ ಕಳೆದುಕೊಳ್ಳಲು, ಆತ್ಮಹತ್ಯೆಗೆ ಕಾರಣವಾಗಬಹುದು. ಇಂಥಹ ಜೂಜಿಗೆ ಪ್ರಚಾರ ಮಾಡುತ್ತಿರುವುದು ಸರಿಯಲ್ಲವೆಂದು ಸೂರ್ಯಪ್ರಕಾಶ್ ಎಂಬ ವಕೀಲರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಇದೇ ಕಾರಣಕ್ಕೆ ನ್ಯಾಯಾಲವು ನೊಟೀಸ್ ಜಾರಿ ಮಾಡಿದೆ.
ಸಿನಿಮಾ ನಟರು ಮಾತ್ರವಲ್ಲದೆ, ಜೂಜಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಹಾಗೂ ಇತರರಿಗೂ ನೊಟೀಸ್ ಜಾರಿ ಆಗಿದೆ. ಐಪಿಎಲ್ ಪ್ರಾರಂಭವಾದಮೇಲೆ ಕ್ರಿಕೆಟ್ ಜೂಜಿನ ಜಾಹೀರಾತುಗಳು ಸಹ ಹೆಚ್ಚಾಗಿವೆ.
ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಹ ಸುದೀಪ್ ಅವರ ವಿರುದ್ಧ ಇದೇ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಅಹೋರಾತ್ರಾ ಎಂಬುವರು ಹಾಗೂ ಇನ್ನೂ ಕೆಲವರು ಸುದೀಪ್ ಅವರು ಆನ್‌ಲೈನ್ ಜೂಜಿನ ಪ್ರಚಾರ ಮಾಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು.
ಸುದೀಪ್ ಅವರು ಆನ್‌ಲೈನ್ ಜೂಜನ್ನು ಪ್ರಚಾರ ಮಾಡುತ್ತಿರುವುದನ್ನು ವಿರೋಧಿಸಿದ್ದಕ್ಕಾಗಿ ಆಧ್ಯಾತ್ಮಿಕ ಚಿಂತಕ ಅಹೋರಾತ್ರಾಗೆ ಸುದೀಪ್ ಅಭಿಮಾನಿಗಳು ಸಾಕಷ್ಟು ಬೆದರಿಕೆ ಕರೆಗಳನ್ನು ಮಾಡಿದ್ದರು. ನಿರ್ಮಾಪಕ ಜಾಕ್ ಮಂಜು ಸಹ ಅಹೋರಾತ್ರ ಅವರೊಟ್ಟಿಗೆ ಇದೇ ವಿಷಯವಾಗಿ ಕರೆ ಮಾಡಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು