December 23, 2024

Newsnap Kannada

The World at your finger tips!

madhu bangarappa

ಕಾಂಗ್ರೆಸ್ ಸೇರ್ಪಡೆಯ ಸುಳಿವು ನೀಡಿದ ಮಧು ಬಂಗಾರಪ್ಪ

Spread the love

ಬದಲಾವಣೆಗೆ ಈಗಾಗಲೇ ನಿರ್ಧರಿಸಿದ್ದೇನೆ. ಕಾಂಗ್ರೆಸ್ ಬಗ್ಗೆ ಯಾವುದೇ ಮುಜುಗುರ ಇಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ನಿಂದ ದೂರವಾಗುತ್ತಿರುವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಪಕ್ಷ ಬದಲಾವಣೆಗೆ ಸಂಬಂಧಿಸಿದಂತೆ ನಾನು ಇನ್ನು ಹೆಚ್ಚು ದಿನ‌ ಕಾಯುವುದಿಲ್ಲ. ಜಿಲ್ಲೆಯ ಸ್ನೇಹಿತರ ಜತೆ ಸಮಾಲೋಚಿಸಿ ಆದಷ್ಟು ಬೇಗ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಮಧು ಸ್ಪಷ್ಟವಾಗಿ ತಿಳಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಯಾವತ್ತೂ ಮುಜಗರ ತಂದಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲೂ ದೊಡ್ಡ ಮಟ್ಟದಲ್ಲಿ ಮತ ಪಡೆಯಲು ನೆರವಾಗಿದೆ ಎಂದು ಕಾಂಗ್ರೆಸ್ ಅನ್ನು ಗಣಗಾನ ಮಾಡಿದರು.

ಹಿರಿಯರಾದ ಕಾಗೋಡು ತಿಮ್ಮಪ್ಪನವರು ನನ್ನನ್ನು ಒಬ್ಬ ಪ್ರತಿಪಕ್ಷದವ ಎಂದು ಗುರುತಿಸದೆ ಜನಪ್ರತಿನಿಧಿ ಎಂಬ ನೆಲೆಗಟ್ಟಿನಲ್ಲಿ ನೋಡಿದ್ದರು. ಸಿದ್ದರಾಮಯ್ಯನವರು, ಡಿ.ಕೆ. ಶಿವಕುಮಾರ್‌ರಂತ ನಾಯಕರು ವಿಶ್ವಾಸದಲ್ಲಿಯೇ ಕಂಡಿದ್ದರು. ಈ ಮೊದಲು ಕಾಂಗ್ರೆಸ್‌ನಲ್ಲಿ ನಾನು ಇದ್ದವ. ಹೀಗಾಗಿ ಕಾಂಗ್ರೆಸ್ ಸೇರುವ ಬಗ್ಗೆ ಮಧು ಸುಳಿವು ನೀಡಿದರು.

Copyright © All rights reserved Newsnap | Newsever by AF themes.
error: Content is protected !!