December 23, 2024

Newsnap Kannada

The World at your finger tips!

Gutka , MLA , Politics

Madalu Virupakshappa started a gutka company for his son..! ಮಗನಿಗಾಗಿ ಗುಟ್ಕಾ ಕಂಪನಿ ಆರಂಭಿಸಿದ್ದ ಮಾಡಾಳು ವಿರೂಪಾಕ್ಷಪ್ಪ..!

ಮಗನಿಗಾಗಿ ಗುಟ್ಕಾ ಕಂಪನಿ ಆರಂಭಿಸಿದ್ದ ಮಾಡಾಳು ವಿರೂಪಾಕ್ಷಪ್ಪ..!

Spread the love

ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ 3 ತಿಂಗಳ ಹಿಂದಷ್ಟೇ ಪುತ್ರರ ಹೆಸರಿನಲ್ಲಿ ಗುಟ್ಕಾ ಕಂಪನಿ ಆರಂಭಿಸಿದ್ದರು.

ಅಜ್ಞಾತ ಸ್ಥಳದಲ್ಲಿ ಅಡಗಿರುವ ಮಾಡಾಳು ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರ ದಾಳಿ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ.

ಚನ್ನಗಿರಿ ಸಮೀಪದ ಚನ್ನೇಶಪುರದಲ್ಲಿರುವ ಶಾಸಕರ ಮನೆ ಮೇಲೆ ದಾಳಿ ನಡೆಸಿದಾಗಲು ದೊಡ್ಡ ಪ್ರಮಾಣದಲ್ಲಿ ಆಸ್ತಿ ಪತ್ರಗಳು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಜೊತೆಗೆ ಅವರು ಬಂಧನ ಭೀತಿಯನ್ನೂ ಎದುರಿಸುತ್ತಿದ್ದಾರೆ.
ಇದರ ಮಧ್ಯೆ ಮಾಡಾಳು ವಿರೂಪಾಕ್ಷಪ್ಪ ತಮ್ಮ ಮೂವರು ಪುತ್ರರ ಹೆಸರಿನಲ್ಲಿ ಗುಟ್ಕಾ ಕಂಪನಿಯನ್ನು ಆರಂಭಿಸಿರುವುದು ಬೆಳಕಿಗೆ ಬಂದಿದೆ, ಎಂ ಆರ್ ಪಿ ಪಾನ್ ಮಸಾಲ ಹೆಸರಿನ ಇದರಲ್ಲಿ ಅವರ ಮೂವರ ಪುತ್ರರ ಹೆಸರಿನ ಆರಂಭದ ಅಕ್ಷರಗಳಿವೆ ಎನ್ನಲಾಗಿದೆ.

ಅಜ್ಞಾತ ಸ್ಥಳದಲ್ಲಿ ಅಡಗಿರುವ ಮಾಡಾಳು ವಿರೂಪಾಕ್ಷಪ್ಪ ನಿವಾಸದಲ್ಲಿ, ಲೋಕಾಯುಕ್ತರ ದಾಳಿ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ.

ಚನ್ನಗಿರಿ ಸಮೀಪದ ಚನ್ನೇಶಪುರದಲ್ಲಿರುವ ಶಾಸಕರ ಮನೆ ಮೇಲೆ ದಾಳಿ ನಡೆಸಿದಾಗಲು ದೊಡ್ಡ ಪ್ರಮಾಣದಲ್ಲಿ ಆಸ್ತಿ ಪತ್ರಗಳು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ವಿರೂಪಾಕ್ಷಪ್ಪನವರ ಪುತ್ರ ಮಾಡಾಳು ಮಲ್ಲಿಕಾರ್ಜುನ, ರಾಜಣ್ಣ ಅಲಿಯಾಸ್ ಪ್ರವೀಣ ಹಾಗೂ ಪ್ರಶಾಂತ್ ಹೆಸರಿನಲ್ಲಿ ಎಂ ಆರ್ ಪಿ ಪಾನ್ ಮಸಾಲ ಘಟಕವನ್ನು ಸ್ವಗ್ರಾಮ ಚನ್ನೇಶಪುರದಲ್ಲಿ ಎರಡು ತಿಂಗಳ ಹಿಂದಷ್ಟೇ ಆರಂಭಿಸಿದ್ದಾರೆ, ಚನ್ನಗಿರಿ ಸುತ್ತಮುತ್ತಲಿನ ಭಾಗದಲ್ಲಿ ಪ್ರತಿಯೊಂದು ಬೀಡಾ, ಗೂಡಂಗಡಿಗಳಲ್ಲಿ ಇದನ್ನೇ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಇದನ್ನು ಓದಿ –ಬೆಂಗಳೂರಿನಲ್ಲಿ 18 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಹೆಲ್ತ್ ಇನ್ಸ್ ಪೆಕ್ಟರ್

#ChennagiriMLA #Virupakshappa #Gutkacompany #Kannadanews #thenewsnap #news #Latestnews

Copyright © All rights reserved Newsnap | Newsever by AF themes.
error: Content is protected !!