36 ರನ್ ಗಳಿಗೆ ಟೀಂ ಇಂಡಿಯಾ ಆಲ್ ಔಟ್: ಕಳಪೆ ಬ್ಯಾಟಿಂಗ್ ಮಾಡಿದ ಕೊಹ್ಲಿ ಬಾಯ್ಸ್

Team Newsnap
2 Min Read
  • 90 ರನ್ ಗಳ ಸಾಧಾರಣ ಗುರಿದ ಭಾರತ
  • ಎರಡಂಕಿ ದಾಟದ ಟೀಂ ಇಂಡಿಯಾ ಬ್ಯಾಟ್ಸ್ಮನ್ ಸ್ಕೋರ್
  • ಹ್ಯಾಜಲ್ ವುಡ್, ಕಮಿನ್ಸ್ ಮಾರಕ ದಾಳಿಗೆ ನಲುಗಿದ ಭಾರತ
  • ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಪ್ರದರ್ಶನದ ಹೆಸರು ದಾಖಲು

ಆಸ್ಟ್ರೇಲಿಯ ಎದುರಿನ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಟೆಸ್ಟ್ ಇತಿಹಾಸ ದಲ್ಲಿಯೇ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ.

ಕೇವಲ 36 ರನ್ ಗಳಿಗೆ ಆಲ್ ಔಟ್ ಆದ ಭಾರತ ಆಸ್ಟ್ರೇಲಿಯಾ ಸುಲಭದ ಗೆಲುವಿಗೆ ಕಾರಣವಾಯಿತು. ಟೀಂ ಇಂಡಿಯಾ 90 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿತ್ತು.

ಮೊದಲನೇ ಇನ್ನಿಂಗ್ಸ್ ನಲ್ಲಿ 53 ರನ್ ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಬಳಗವು 21.2 ಓವರ್ ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 36 ರನ್ ಗಳನ್ನಷ್ಟೇ ಗಳಿಸಲಷ್ಟೆ ಶಕ್ತವಾಯಿತು.

Kohlijpg
  • ಇದು ಟೆಸ್ಟ್ ಇತಿಹಾಸದಲ್ಲಿಯೇ ಭಾರತ ಕ್ರಿಕೆಟ್ ತಂಡ ಗಳಿಸಿರುವ ಅತ್ಯಂತ ಕಡಿಮೆ ಮೊತ್ತವಾಗಿದೆ.
  • 5 ವಿಕೆಟ್ ಪಡೆದ ಹ್ಯಾಜಲ್ ವುಡ್
  • 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯದ ಹ್ಯಾಜಲ್ ವುಡ್ 5 ಮತ್ತು ಪ್ಯಾಟ್ ಕಮಿನ್ಸ್ 4 ವಿಕೆಟ್ ಪಡೆದು ಮಿಂಚಿದರು.

ಶುಕ್ರವಾರ ಬ್ಯಾಟಿಂಗ್ ಆರಂಭಿಸಿದ ಪೃಥ್ವಿಶಾ 4 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಮೊದಲನೇ ಇನ್ನಿಂಗ್ಸ್ ನಲ್ಲಿ 17 ರನ್ ಕಲೆ ಹಾಕಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 40 ಎಸೆತಗಳನ್ನು ಎದುರಿಸಿ 9 ರನ್ ಗಳಿಸಿ ಪೆವಿಲಿಯನ್ ಸೇರಿ ಕಳಪೆ ಬ್ಯಾಟಿಂಗ್ ಮುಂದುವರಿಸಿದರು.

ಭಾರತದ ಆಟಗಾರರು ಎರಡಂಕಿ ದಾಟದೆ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬೌಲರ್ ಬೂಮ್ರಾ 2, ಟೆಸ್ಟ್ ಪರಿಣಿತರಾದ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಶೂನ್ಯಕ್ಕೆ ನಿರ್ಗಮಿಸಿದರು.

ಮೊದಲನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ 4, ಹನುಮಾನ್ ವಿಹಾರಿ 8, ವೃದ್ಧಿಮಾನ್ ಸಹಾ 4, ಅಶ್ವಿನ್ 0, ಉಮೇಶ್ ಯಾದವ್ 4.ಅಂತಿಮವಾಗಿ ಟೀಂ ಇಂಡಿಯಾ 36ರನ್ ಗೆ ತನ್ನೆಲ್ಲ ವಿಕೇಟ್ ಗಳನ್ನು ಕಳೆದುಕೊಂಡು ಆಸ್ಟ್ರೇಲಿಯ ಸುಲಭದ ಗೆಲುವಿಗೆ ಕಾರಣವಾಯಿತು.

Share This Article
Leave a comment