January 8, 2025

Newsnap Kannada

The World at your finger tips!

adresh

ಅಂದು ಪ್ರೀತಿಸಿ ಮದುವೆಯಾದಳು ಈಗ ಪರಪುರುಷನ ಕೈಹಿಡಿದಳು!

Spread the love

ಒಂದು ಸಮಯದಲ್ಲಿ ಆದರ್ಶ ದಂಪತಿ ಎಂದು ಹೊಗಳಿಸಿಕೊಂಡ ಜೋಡಿ ಇಂದು ನಾನೊಂದು ತೀರ, ನೀನೊಂದು ತೀರ ಎಂಬಂತಾಗಿದೆ. ತನಗೆ ನ್ಯಾಯ ದೊರಕಿಸಿಕೊಳ್ಳಲು ಗಂಡು ಈಗ ಕೋರ್ಟ್ ಮೆಟ್ಟಿಲು ಹತ್ತುವ ಮನಸ್ಥಿತಿ ತಲುಪಿದ್ದಾನೆ.


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯ ನಿವಾಸಿ ಜತೆಗೆ ಕಿರುತೆರೆಯ ಕಲಾವಿದ ರವಿ ಬಾಳಿನಲ್ಲಿ ಈಗ ಮೂಡಿದೆ ಕಾರ್ಮೋಡ. ಈತ ಟಿವಿಯೊಂದರಲ್ಲಿ ಪ್ರಸಾರವಾದ ರಿಯಾಲಿಟಿ ಷೋನಲ್ಲಿ ಭಾಗವಹಿಸಿ ಹೆಸರು ಮಾಡಿದವ.


ನಾಲ್ಕು ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬ ಯುವತಿಯ ಪ್ರೀತಿಯ ತೆಕ್ಕೆಗೆ ಬಿದ್ದು, ಮನೆಯವರ ವಿರೋಧ ಕಟ್ಟಿಕೊಂಡು ಆಕೆಯನ್ನ ಬಾಳ ಸಂಗಾತಿಯಾಗಿ ಮಾಡಿಕೊಂಡ.


ಈ ವಿಷಯ ಹೊರಬಂದು ಟಿವಿ ಷೋ ಸಂದರ್ಭದಲ್ಲೇ ರವಿಯ ತಂದೆ-ತಾಯಿ ಸಮ್ಮುಖದಲ್ಲೇ ಆತನಿಂದ ಬೇಬಿಗೆ ತಾಳಿಯನ್ನು ಕಟ್ಟಿಸಿ ಆದರ್ಶ ದಂಪತಿ ಎಂದು ಹೊಗಳಿ, ಹಾರೈಸಲಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಈಗ ಬೇಬಿ ರವಿಯಿಂದ ದೂರವಾಗಿದ್ದಾಳೆ.


ನಿನ್ನ ಬಳಿ ಹಣವಿಲ್ಲ, ನಿನ್ನೊಂದಿಗೆ ಬದಕು ಬೇಡ ಎಂದು ಹೇಳಿ ಬೇರೆಯೊಂದು ಮದುವೆಯಾಗಿದ್ದಾಳೆ ಎಂದು ಹೇಳುವ ರವಿ, ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲ.ಹಾಗಾಗಿ ಸಂಪಾದನೆ ಇಲ್ಲದೆ ನೊಂದ ನನಗೆ ಜೀವನದಲ್ಲಿ ದೊಡ್ಡ ಆಘಾತನೀಡಿದ್ದಾಳೆ ನನ್ನ ಕೈಹಿಡಿದವಳು ಎಂದು ನೋವನ್ನು ತೋಡಿಕೊಂಡಿದ್ದಾನೆ.


ತನ್ನ ಪತ್ನಿಯಾಗಿದ್ದವಳು ಬೇರೆಯವನನ್ನು ಮದುವೆಯಾಗುವುದನ್ನು ತಡೆಯಲು ಹೋದಾಗ ಅವರಿಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ನೀಡಿರುವುದಾಗಿ ರವಿ ತಿಳಿಸಿದ್ದಾರೆ.


ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಇದಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಕಲಾವಿದ ರವಿ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!