February 21, 2026

Newsnap Kannada

The World at your finger tips!

MILANA

ಲೌವ್ ಮಾಕ್ಟೆಲ್ ಜೋಡಿಗೆ ಫೆ – 14 ರಂದು ಕೆರೆ ಮಧ್ಯೆ ವಿಶಿಷ್ಟ ಸೆಟ್ ನಲ್ಲಿ ಮದುವೆ !

Spread the love

ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಗೆ ನಾಂದಿ ಹಾಡಿದ ಲೌವ್ ಮಾಕ್ಟೆಲ್ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಹಾಗೂ ನಾಯಕಿ ಮಿಲನ ನಾಗರಾಜ್ ಫೆ 14 ರಂದು ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ.

milana 1

ಕಳೆದ 10 ವರ್ಷಗಳ ಕಾಲ ಈ ಜೋಡಿ ಲೌವ್ ಮಾಡಿದ್ದ ಸಂಗತಿ ಎಲ್ಲರಿಗೂ ಗೊತ್ತಾಗಿದೆ. ಈಗ ಬ್ಯಾಚಲರ್ ಪಾರ್ಟಿ ಕೂಡಾ ಮುಗಿಸಿದ್ದಾರೆ. ಮದುವೆಗೆ ತಯಾರಿ ತುಂಬಾ ಜೋರಾಗಿ ಸಾಗಿದೆ.‌

ಒಳ್ಳೆಯ ಈಜುಗಾರನಾಗಿರುವ ಡಾರ್ಲಿಂಗ್ ಕೃಷ್ಣ ಕೆರೆಯ ನೀರಿನ ಮಧ್ಯೆ ವಿಶಿಷ್ಟ ರೀತಿಯಲ್ಲಿ ಸೆಟ್ ಹಾಕಿ ಅಲ್ಲಿ ಮದುವೆ ಮಂಟಪ ಮಾಡಿ , ಸಪ್ತಪದಿ ತುಳಿಯುವ ಪ್ಲಾನ್ ಮಾಡಿದ್ದಾರೆ. ಮದುವೆ ಸಿದ್ದತೆ ಗಾಗಿ ಕಂಚಿಗೆ ಹೋಗಿ ಖರೀದಿ ಕಾರ್ಯ ಮುಗಿಸಿದ್ದಾರೆ.‌ ಫೆ 14 ರಂದು ಬೆಳಿಗ್ಗೆ ಮದುವೆ ನಂತರ ಸಂಜೆ ಆರತಕ್ಷತೆ ಕಾರ್ಯಕ್ರಮವಿದೆ.

ಮದುವೆ ದಿನವೇ ಲೌವ್ ಮಾಕ್ಟೆಲ್ -2 ಚಿತ್ರದ ಆಡಿಯೋ ಬಿಡುಗಡೆ ಮಾಡುವ ಪ್ಲಾನ್ ಕೂಡಾ ಮಾಡಿದ್ದಾರೆ ಕೃಷ್ಣ.

error: Content is protected !!