Editorial

ಪ್ರೀತಿ, ಸ್ನೇಹ, ವಿಶ್ವಾಸ, ಕರುಣೆ, ಸಹಕಾರ, ನೆಲ ಇಲ್ಲದೆ ವಿನಾಶದ ಅಂಚಿಗೆ….

ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕ್ವೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು.

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ…….

500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ . ಆದರೆ ಈಗ ಕೆಲವೇ ವರ್ಷಗಳಲ್ಲಿ 5000 ರೂಪಾಯಿ ತಲುಪಿದೆ……..

ಸಣ್ಣ ಕಟ್ಟಡಗಳ, ವಿಶಾಲ ಮೈದಾನದಲ್ಲಿ ಹಸಿರು ಗಿಡಗಳ ನಡುವೆ ಸರಳವಾಗಿ ನಡೆಯುತ್ತಿದ್ದ ಶಾಲೆಗಳು ಖಾಸಗಿ ಜನರ ಕೈಸೇರಿ ಅದ್ದೂರಿ ಕಾಂಕ್ರೀಟ್ ಕಟ್ಟಡಗಳಾಗಿ ಕೇವಲ ಒಂದನೇ ತರಗತಿಗೆ ಒಂದು ವರ್ಷಕ್ಕೆ ಲಕ್ಷ ರೂಪಾಯಿಗಳನ್ನು ಮೀರಿದ ಹಣ ಪಾವತಿ ಮಾಡಬೇಕಿದೆ…….

ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಐಷಾರಾಮಿ ಹೋಟೆಲುಗಳನ್ನು ಮೀರಿಸುವ ಭವ್ಯತೆ ಪಡೆದು ಕೆಮ್ಮು ಜ್ವರಕ್ಕೂ ಸಾವಿರಾರು ರೂಪಾಯಿ ತೆರುವಂತಾಗಿದೆ…….

ಸಾಮಾನ್ಯ ಜನರು ಕನಸಿನಲ್ಲೂ ಯೋಚಿಸಿದ ಐಷಾರಾಮಿ ಕಾರುಗಳು ಸಾಮಾನ್ಯರ ಕಾಲ ಕೆಳಗೆ ಸೇರಿ ಅವರನ್ನು ಹೊತ್ತು ತಿರುಗುತ್ತಿವೆ…..

ಪಿಎಚ್ ಡಿ ಮಾಡಿರುವವರೂ ಕೂಡ ಪಡೆಯದ ಲಕ್ಷ ರೂಪಾಯಿ ಸಂಬಳ ಕೇವಲ ಪಿಯುಸಿ ಮತ್ತು ಕಂಪ್ಯೂಟರ್ ಡಿಪ್ಲೊಮಾ ಮಾಡಿದ 20 ವಯಸ್ಸಿನ ಹುಡುಗ ಹುಡುಗಿಯರು ಎಣಿಸತೊಡಗಿದ್ದಾರೆ….

ಫೇಶೀಯಲ್ ಮಸಾಜ್, ಲಿಪ್ ಸ್ಟಿಕ್, ಡ್ಯಾನ್ಸ್ ಕ್ಲಬ್ ಫ್ಯಾಷನ್ ಡಿಸೈನಿಂಗ್ ಗಳು ಶಾಪಿಂಗ್ ಮಾಲ್ ಗಳು ಒಂದು ಕಡೆ,….

ಮಾಸ್ಟರ್ ಬೆಡ್ ರೂಂ,
ಚಿಲ್ಡ್ರನ್ಸ್ ಬೆಡ್ ರೂಂ,
ಸರ್ವೆಂಟ್ ಬೆಡ್ ರೂಂ,
ಗೆಸ್ಟ್ ಬೆಡ್ ರೂಂ ಗಳೆಂಬ ಐಷಾರಾಮಿ ಇನ್ನೊಂದು ಕಡೆ……

ಪ್ರಕೃತಿ ಸಂಪನ್ಮೂಲಗಳು ಯಾರಪ್ಪನದು…..

ತಿನ್ನುವ, ಅಪಾರ ಪೌಷ್ಠಿಕಾಂಶದ ಹಣ್ಣು ತರಕಾರಿ ಎಳನೀರುಗಳು ಬೀದಿ ಬದಿಯ ಬಿಸಿಲಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗತೊಡಗಿದವು
ಅದನ್ನು ಬೆಳೆಯುವವರು ಬದುಕಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ …..

ಪೆಪ್ಸಿ ಕೋಲಾ ವಿಸ್ಕಿ ಸಿಗರೇಟ್ ಎಂಬ ಸಾವಿನ ವಿಷಗಳನ್ನು ರಾಜಾರೋಷ ವಾಗಿ ಎಸಿ ರೂಮುಗಳಲ್ಲಿ ಅಪಾರ ಬೆಲೆ ಕೊಟ್ಟು ‌ಸೇವಿಸುವುದೇ ಒಂದು ಪ್ರತಿಷ್ಠೆಯಾಯಿತು. ಅದನ್ನು ‌ಸೃಷ್ಟಿಸುವವರು ಅತ್ಯಂತ ಶ್ರೀಮಂತರಾಗಿ ಬದುಕನ್ನು ಮಜಾ ಉಡಾಯಿಸುತ್ತಿದ್ದಾರೆ……

ತಲೆ ಒಡೆದು – ತಲೆ ಹಿಡಿದು
ಕೊಂದು – ವಂಚಿಸಿ
ಹಣ ಮಾಡಿ ಅದನ್ನು ಪ್ರದರ್ಶನ ಮಾಡುವುದೇ
ಬದುಕಿನ ಧ್ಯೇಯವಾಯಿತು…….

ಶಿಕ್ಷಕ ವೃತ್ತಿ ಕಾಲ ಕಸವಾಯಿತು,
ಬ್ರೋಕರ್ ಗಿರಿ ಪವಿತ್ರ ವೃತ್ತಿಯಾಯಿತು.
ಸಮಾಜ ಸೇವೆ ರಾಜಕೀಯವಾಯಿತು,
ರಾಜಕೀಯ ದಂಧೆಯಾಯಿತು……
ಹಣ ಅಧಿಕಾರ ಜಾತಿ ಧರ್ಮ ಸಾಮಾಜಿಕ ಮೌಲ್ಯಗಳಾದವು.
ಪ್ರೀತಿ ಸ್ನೇಹ ವಿಶ್ವಾಸ ಕರುಣೆ ಸಹಕಾರ
ನೆಲ ಇಲ್ಲದೆ ವಿನಾಶದ ಅಂಚಿಗೆ ತಲುಪಿದವು…….

ಸೇವಿಸುವ ಗಾಳಿ,
ಕುಡಿಯುವ ನೀರು,
ತಿನ್ನುವ ಆಹಾರ ವಿಷವಾದವು..
ಇಟಾಲಿಯನ್ ಮಾರ್ಬಲ್, ಅಮೆರಿಕನ್ ಟೈಲ್ಸ್, ಮಲೇಷಿಯಾನ್ ವುಡ್, ಜರ್ಮನಿ ಕಮೋಡ್ ಗಳಿಂದ ನೆಲ ಗೋಡೆ ಕಿಚನ್ ಒಳಾಂಗಣ ಹೊರಾಂಗಣಗಳು ಫಳಫಳ ಹೊಳೆಯು ತೊಡಗಿದವು…..

ಮನಸ್ಸುಗಳ ಚಿಕ್ಕದಾದವು,
ಮನೆಗಳು ದೊಡ್ಡದಾದವು,
ವಸ್ತುಗಳು ಹತ್ತಿರವಾದವು,
ಸಂಬಂಧಗಳು ದೂರವಾದವು…..

ಕ್ಷಮಿಸಿ,
ಏಕಾಂತದಲ್ಲಿ ನೆನಪಿನ ಅಲೆಗಳು ಅಪ್ಪಳಿಸಿದಾಗ ಮೂಡಿದ ಭಾವನೆಗಳು..

ವಿವೇಕಾನಂದ. ಹೆಚ್.ಕೆ.

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024