ಕನ್ನಡ ಕಿರುತೆರೆ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಅವರನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದಾರೆ .
ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ, ದಿವ್ಯಾ ದೂರು ನೀಡಿದ್ದರು.
ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದರು. ಈ ದೂರಿನ ಅನ್ವಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೊನ್ನೆಯಷ್ಟೇ ಆಸ್ಪತ್ರೆಯಿಂದ ಸೀದಾ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ದಿವ್ಯಾ ಶ್ರೀಧರ್, ತನಗೆ ಈ ರೀತಿ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನಿಸಿದ್ದರು. ಪತಿ ಜೊತೆ ಜೋರು ಮಾತಿಗೆ ನಿಂತಿದ್ದರು. ದಿವ್ಯಾ ಶ್ರೀಧರ್ ಕೂಗಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಅಮ್ಜಾದ್ ಖಾನ್ ಅದನ್ನು ಮಾಧ್ಯಮಗಳಿಗೆ ನೀಡಿದ್ದರು. ಗ್ಯಾನವಾಪಿ ಪ್ರಕರಣ : ‘ಕಾರ್ಬನ್ ಡೇಟ್’ ಪರೀಕ್ಷೆಗೆ ವಾರಣಾಸಿ ಕೋರ್ಟ್ ನಕಾರ
ಮಾಧ್ಯಮಗಳ ಜೊತೆ ಹಂಚಿಕೊಂಡಿರುವ ವಿಡಿಯೋದಲ್ಲಿ ‘ನೀನು ಯಾಕೆ ನನಗೆ ಮೋಸ ಮಾಡಿ ಮದುವೆಯಾದೆ. ಸುಳ್ಳು ಯಾಕೆ ಹೇಳಬೇಕಿತ್ತು’ ಎಂದು ದಿವ್ಯಾ ಕೇಳುತ್ತಾರೆ. ‘ಮೋಸ ಮಾಡಿದ್ದು ನಾನಲ್ಲ, ನೀನು. ನೀನೇ ನನ್ನನ್ನು ಪ್ರೀತಿಸಿ ಮದುವೆ ಆಗಿದ್ದು. ನಾನು ಮೋಸ ಮಾಡಿಲ್ಲ. ನೀನೇ ನನಗೆ ಮೋಸ ಮಾಡುತ್ತಿರುವದು’ ಎಂದು ಅಮ್ಜಾದ್ ಖಾನ್ ಹೇಳುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಮೋಸದ ಆರೋಪ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿತ್ತು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ನಟಿ ದಿವ್ಯಾ ನಟಿ ದಿವ್ಯಾ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ