Trending

3.5 ಕೆಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು, 250 ಕೋಟಿ ಆಸ್ತಿ ಸಿಕ್ಕಿದ್ದು ಎಲ್ಲಿ ಗೊತ್ತಾ?

ಸುಧಾ‌ ಗೋಲ್ಡ್ ಸ್ಟೋರ್ ನ ಪರಮ ಆಪ್ತೆಯ ಮನೆಯಲ್ಲಿ ಸಿಕ್ಕಿರುವ 3.5 ಕೆಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು, 250 ಕೋಟಿ ಆಸ್ತಿ ಎಸಿಬಿ ಅಧಿಕಾರಿಗಳಿಗೆ ದಾಳಿಯಲ್ಲಿ ಸಿಕ್ಕಿದೆ.

ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮನೆ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಈಗ ಸಿಕ್ಕಿ ಬಿದ್ದಿದೆ.

ಸುಧಾ ಅತ್ಯಾಪ್ತೆ ರೇಣುಕಾ ಚಂದ್ರಶೇಖರ್ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು ಸಿಕ್ಕಿದ ಸಂಪತ್ತುಗಳನ್ನು ನೋಡಿ  ದಂಗಾಗಿ ಹೋಗಿದ್ದಾರೆ.

ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಪ್ಲಾಟ್‍ನಲ್ಲಿ ಮಣಬಾರದಷ್ಟು ಚಿನ್ನಾಭರಣ, ನಗ-ನಾಣ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ 250 ಕೋಟಿ ದಾಟಬಹುದು ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಎಸಿಬಿ ಮೂಲಗಳ ಮಾಹಿತಿ ಪ್ರಕಾರ, ರೇಣುಕಾ ಚಂದ್ರಶೇಖರ್ ಡಾ. ಸುಧಾ ಅವರ ಏಜೆಂಟ್ ಆಗಿದ್ದರು ಎನ್ನಲಾಗುತ್ತಿದೆ. ಸುಧಾ ಹೇಳಿದ ಕಡೆ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ರೇಣುಕಾ ಮನೆ ಮೇಲೆ ದಾಳಿ ನಡೆದಿದೆ.

ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ರೇಣುಕಾ 4 ಕಂಪನಿ ಹೊಂದಿದ್ದಾರೆ. ಈ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಡಾ. ಸುಧಾ ಬೇನಾಮಿ ಇದೆಯೇ ಎಂಬುದರ ಬಗ್ಗೆಯೂ ಎಸಿಬಿ ತನಿಖೆ ಮಾಡುತ್ತಿದೆ. ಜೊತೆಗೆ, ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ ಡಿವೈಎಸ್ಪಿ ಆಗಿದ್ದಾರೆ.

ರೇಣುಕಾ ಪುತ್ರ ಕೂಡ ಎಇಇ ಆಗಿ ಕೆಲಸ ಮಾಡ್ತಿದ್ದಾರೆ. ನಾಳೆ ಕೆಎಎಸ್ ಅಧಿಕಾರಿ ಸುಧಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿದೆ.

ಸುಧಾ ಫ್ರೆಂಡ್ ಮನೇಲಿ ಸಿಕ್ಕಿದ್ದೇನು?

  • ಬರೋಬ್ಬರಿ ಮೂರೂವರೆ ಕೆ.ಜಿ ಚಿನ್ನ
  • 7 ಕೆಜಿ ಬೆಳ್ಳಿ, 36 ಲಕ್ಷ ನಗದು
  • ಸುಮಾರು 250 ಕೋಟಿ ಆಸ್ತಿ ಪತ್ರ
  • 40 ಬ್ಯಾಂಕ್‍ಗಳ ಪಾಸ್‍ಬುಕ್
  • ಬ್ಯಾಂಕ್‍ಗಳಲ್ಲಿ 4 ಕೋಟಿ ಡಿಪಾಸಿಟ್
  • ನೂರಕ್ಕೂ ಹೆಚ್ಚು ಚೆಕ್‍ಗಳು, ಒಪ್ಪಂದ ಪತ್ರಗಳು
Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024