December 29, 2024

Newsnap Kannada

The World at your finger tips!

grahana

581 ವರ್ಷಗಳ ಬಳಿಕ ಇಂದು ಸುದೀರ್ಘ ಚಂದ್ರಗ್ರಹಣ – ಒಂದಷ್ಟು ಮಾಹಿತಿ : ಭಾರತದಲ್ಲಿ ಗೋಚರ ಇಲ್ಲ

Spread the love

ಚಂದ್ರಗ್ರಹಣದ ವೇಳೆ :
ಗ್ರಹಣ ದಿನಾಂಕ: 19 ನವೆಂಬರ್ 2021
ಗ್ರಹಣ ಆರಂಭ: ಮಧ್ಯಾಹ್ನ 12.48
ಗ್ರಹಣ ಮಧ್ಯ ಕಾಲ: 2.32
ಗ್ರಹಣ ಅಂತ್ಯಕಾಲ: 4:17
ಗ್ರಹಣದ ಒಟ್ಟು ಅವಧಿ: 3 ಗಂಟೆ 28 ನಿಮಿಷ 24 ಸೆಕೆಂಡ್ಸ್

ಅಪರೂಪದಲ್ಲೇ ಅಪರೂಪದ ಅಚ್ಚರಿಯ ಕುತೂಹಲದ ವಿದ್ಯಮಾನಕ್ಕೆ ಇಂದು ಭೂಮಿ ಸಾಕ್ಷಿಯಾಗುತ್ತಿದೆ.

ಬರೋಬ್ಬರಿ 581 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅತಿಸುದೀರ್ಘ ಪಾಕ್ಷಿಕ ಚಂದ್ರಗ್ರಹಣ ಸಂಭವಿಸುತ್ತಿದೆ.

ಇದು ಪ್ರತಿವರ್ಷ ಮತ್ತೊಂದು ಚಂದ್ರಗ್ರಹಣ ಅಲ್ಲ. ಈ ಬಾರಿ ಘಟಿಸುವ ಅಪರೂಪದಲ್ಲೇ ಅಪರೂಪದ ಚಂದ್ರಗ್ರಹಣ.

2021ರ ಕೊನೆಯ ಚಂದ್ರ ಗ್ರಹಣ ಇಂದು ಕಾಣಿಸಲಿದೆ. ಇದು ಕೇವಲ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಲ್ಲ. ಕಳೆದ ಆರು ಶತಮಾನಗಳಲ್ಲೇ ನಡೆಯದಷ್ಟು ಸುದೀರ್ಘವಾಗಿ ಕಾಣಿಸಲಿರುವ ಚಂದ್ರಗ್ರಹಣ ಇದು.

ಇತಿಹಾಸದಲ್ಲೇ ಅತಿದೀರ್ಘ ಗ್ರಹಣವಾಗಿ ದಾಖಲೆಯಾಗಲಿದೆ.
3 ಗಂಟೆ 24 ನಿಮಿಷ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಇಷ್ಟು ಸುದೀರ್ಘವಾಗಿ ಯಾವತ್ತೂ ಚಂದ್ರನ ಮೇಲೆ ಭೂಮಿಯ ನೆರಳು ಆವರಿಸಿಲ್ಲ. ಅದರಲ್ಲೂ ಮಧ್ಯಾಹ್ನ 2.32ರ ವೇಳೆಗೆ ಚಂದ್ರನ ಶೇ.97 ರಷ್ಟು ಭಾಗವನ್ನು ಭೂಮಿ ಆವರಿಸಿಕೊಳ್ಳಲಿದೆ.

ಭಾರತದಲ್ಲಿ ಗೋಚರವಿಲ್ಲ :

ಸಾವಿರ ವರ್ಷಗಳಿಗೆ 2 ಬಾರಿ ನಡೆಯುವಂತಹ ಈ ಅಪರೂಪದ ವಿದ್ಯಮಾನ ಈ ಬಾರಿ ನಡೆಯುತ್ತಿದೆ. ಈ ಸುದೀರ್ಘ ಚಂದ್ರಗ್ರಹಣದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.

ಚಂದ್ರನ ಅಪರೂಪದ ದೃಶ್ಯಕಾವ್ಯವನ್ನು ನೋಡಲು ವಿಜ್ಞಾನಿಗಳು ಕಾಯುತ್ತಿದ್ದಾರೆ. ಈ ರಕ್ತಚಂದ್ರಗ್ರಹಣ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್ ಹಾಗೂ ಏಷ್ಯಾದ ಕೆಲವು ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗೋಚರವಾಗಲಿದೆ.

ಮಧ್ಯಾಹ್ನ 12.48ರಿಂದ 4.17ರ ನಡುವೆ ಗ್ರಹಣ ನಡೆಯಕಿದೆ. ಹೀಗಾಗಿ ಭಾರತದಲ್ಲಿ ಇದು ಗೋಚರಿಸುವುದಿಲ್ಲ.

ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಗ್ರಹಣದ ನೆರಳು ಕಾಣಿಸಬಹುದು ಅಂತ ವಿಜ್ಞಾನಿಗಳು ಹೇಳಿದ್ದಾರೆ.

ಈ ಗ್ರಹಣವನ್ನು ಧಾರ್ಮಿಕರು ಅಪಾಯದ ಕಣ್ಣುಗಳಿಂದ ನೋಡುತ್ತಾರೆ. ಗ್ರಹಣದಿಂದ ಕೇಡುಕಾಲ ಖಂಡಿತವಂತೆ. ಈ ಗ್ರಹಣದಿಂದಾಗಿ ಪ್ರಕೃತಿಯಲ್ಲಿ ಅಲ್ಲೋಲ-ಕಲ್ಲೋಲ ಸಂಭವಿಸುತ್ತೆ ಅಂತಾ ಮುನ್ಸೂಚನೆ ಕೊಟ್ಟಿದ್ದಾರೆ. ಶೀತಗಾಳಿ, ಮಳೆ ಎಲ್ಲಾ ಗ್ರಹಣದ ಗ್ರಹಚಾರ. ಭಾರತಕ್ಕೆ ಗ್ರಹಣ ಕಾಣದಿದ್ದರೂ, ಅದರ ದೋಷಗಳು ಕಟ್ಟಿಟ್ಟಬುತ್ತಿ ಅಂತೆ.

Copyright © All rights reserved Newsnap | Newsever by AF themes.
error: Content is protected !!