ಸರ್ಚ್ ವಾರೆಂಟ್ ಮತ್ತು ಸ್ಥಳಾಂತರ ಆರೋಪ:
ಜೂನ್ 28ರಂದು ಲೋಕಾಯುಕ್ತ ಕಚೇರಿಯಲ್ಲಿ ದಾಳಿ ನಡೆಸಲು ಸರ್ಚ್ ವಾರೆಂಟ್ ಸಿದ್ಧವಾಗಿತ್ತು. ಆದರೆ, ವರದಿ ಪ್ರಕಾರ, ಸರ್ಚ್ ವಾರೆಂಟ್ ಜಾರಿಯಾದ 12 ತಾಸುಗಳೊಳಗೆ ಡಿವೈಎಸ್‌ಪಿ ಮಾಲತೇಶ್ ಅವರು ಮುಡಾ ಕಚೇರಿಗೆ ಭೇಟಿ ನೀಡಿ, 144 ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.ಈ ವಿಷಯವನ್ನು ಲೋಕಾಯುಕ್ತ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ.
ಆರೋಪಗಳ ಪ್ರಕಾರ, ಡಿವೈಎಸ್‌ಪಿ ಮಾಲತೇಶ್ ಅವರು ದಾಳಿಯ ಮುನ್ನವೇ ಮಾಹಿತಿ ನಗರಾಭಿವೃದ್ಧಿ ಸಚಿವರಿಗೆ ನೀಡಿದ್ದು, ಈ ಹಿನ್ನೆಲೆ ದಾಖಲಾತಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನ ಮೂಡಿಸಿದೆ.
ತೀವ್ರ ತನಿಖೆಯ ಅವಶ್ಯಕತೆ:
ಮುಡಾ ಕಚೇರಿಯಿಂದ ದಾಖಲೆಗಳನ್ನು ಸ್ಥಳಾಂತರ ಮಾಡಿರುವ ಆರೋಪದಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದು ಇನ್ನಷ್ಟು ಗಂಭೀರ ತನಿಖೆಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.ಇದನ್ನು ಓದಿ –ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಈ ಘಟನೆ ಮುಡಾ ಹಗರಣದ ತನಿಖೆಯ ನೈತಿಕತೆಗೆ ಗಂಭೀರ ಪ್ರಶ್ನೆ ಎತ್ತುತ್ತಿದ್ದು, ಪ್ರಾಮಾಣಿಕ ಮತ್ತು ತ್ವರಿತ ತನಿಖೆ ಮೂಲಕ ಸತ್ಯ ಬಯಲಾಗಬೇಕಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು