February 27, 2025

Newsnap Kannada

The World at your finger tips!

kolar, lokayukta , SDA

ರಾಜ್ಯದ ಏಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ!

Spread the love

ಬೆಂಗಳೂರು, ಜ.31: ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಳು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಬಂದ ದೂರಿನ ಹಿನ್ನಲೆಯಲ್ಲಿ, ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು, ಚಿತ್ರದುರ್ಗ, ರಾಯಚೂರು, ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಗೆ ಒಳಗಾದ ಅಧಿಕಾರಿಗಳು:

  • ಸಂಜಯ್ ಮಾಂಡೆಡ್ – ಬೆಳಗಾವಿ ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಯ ಪ್ರಥಮ ವಿಭಾಗದ ಸಹಾಯಕ
  • ಶಶಿಧರ್ – ಚಿತ್ರದುರ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ವ್ಯವಸ್ಥಾಪಕ
  • ಶಿವಲಿಂಗಯ್ಯ ಹಿರೇಮಠ – ಬಾಗಲಕೋಟೆಯ ಹೊಲಗೇರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ
  • ಮಾಧವರಾವ್ – ಬಿಬಿಎಂಪಿ ಹೆಬ್ಬಾಳ ವಿಭಾಗದ ಎಂಜಿನಿಯರಿಂಗ್ ಸಹಾಯಕ ಕಾರ್ಯನಿರ್ವಾಹಕ
  • ಟಿ.ಕೆ.ರಮೇಶ್ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಉಪ ಕಾರ್ಯದರ್ಶಿ
  • ನರಸಿಂಗರಾವ್ ಗುಜ್ಜರ್ – ರಾಯಚೂರು ಜಿಲ್ಲಾ ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ
  • ಸಂಜಯ್ ಅಣ್ಣಪ್ಪ ದುರ್ಗಣ್ಣನವರ್ – ಪಶುಸಂಗೋಪನಾ ಇಲಾಖೆಯ ಅಧಿಕಾರಿ


ಇದನ್ನು ಓದಿ -ಪೊಲೀಸ್ ವಿಚಾರಣೆಗೆ ಭಯಗೊಂಡ ಯುವಕ ನೇಣಿಗೆ ಶರಣು!

ಈ ದಾಳಿಯಲ್ಲಿ ಸಾಕಷ್ಟು ಪ್ರಮುಖ ದಾಖಲೆಗಳು ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!