ಲೋಕಸಭೆ ಚುನಾವಣೆ 2024: ಫಲಿತಾಂಶಗಳ ನವೀಕರಣ

Team Newsnap
4 Min Read
  • 9:33 AM : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ 2744 ಮತಗಳಿಂದ ಮುನ್ನಡೆ. ಕಾಂಗ್ರೆಸ್ 38,640, ಬಿಜೆಪಿ35896 ಮತ.
  • 9:31 AM : ಧಾರವಾಡದಲ್ಲಿ 10,351 ಮತಗಳ ಅಂತರದಿಂದ ಬಿಜೆಪಿಯ ಪ್ರಲ್ಹಾದ ಜೋಶಿ ಮುನ್ನಡೆ, ಕಾಂಗ್ರೆಸ್‌ನ ವಿನೋದ್​ ಅಸೂಟಿಗೆ ಹಿನ್ನಡೆ
  • 9:33 AM : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ 2744 ಮತಗಳಿಂದ ಮುನ್ನಡೆ. ಕಾಂಗ್ರೆಸ್ 38,640, ಬಿಜೆಪಿ35896 ಮತ.
  • 9:31 AM : ಧಾರವಾಡದಲ್ಲಿ 10,351 ಮತಗಳ ಅಂತರದಿಂದ ಬಿಜೆಪಿಯ ಪ್ರಲ್ಹಾದ ಜೋಶಿ ಮುನ್ನಡೆ, ಕಾಂಗ್ರೆಸ್‌ನ ವಿನೋದ್​ ಅಸೂಟಿಗೆ ಹಿನ್ನಡೆ
  • 9:29 AM : ಉತ್ತರ ಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ 2126 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
  • 9:24 AM: ಚಿಕ್ಕೋಡಿಯಲ್ಲಿ 4ನೇ ಸುತ್ತು ಮತ ಎಣಿಕೆ ಮುಕ್ತಾಯ, 20,753 ಮತಗಳಿಂದ ಪ್ರಿಯಾಂಕಾ ಮುನ್ನಡೆ
  • 9:23 AM: ಹಾಸನದಲ್ಲಿ ಮೊದಲ‌ ಸುತ್ತು ಮುಕ್ತಾಯ. ಜೆಡಿಎಸ್ ಗೆ 85593 ಮತ. ಕಾಂಗ್ರೆಸ್ ಗೆ 83117 ಮತ. 2476 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ
  • 9:22AM: ಹಿಮಾಚಲ ಪ್ರದೇಶದ ಹಮೀರ್‌ಪುರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಅನುರಾಗ್ ಸಿಂಗ್ ಠಾಕೂರ್ 6492 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
  • 9:21AM: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ 8718 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
  • 9:12 AM: ಜೆಡಿಎಸ್​ ಅಭ್ಯರ್ಥಿ ಎಚ್​ಡಿ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಸ್ಟಾರ್​ ಚಂದ್ರು ಹಿನ್ನಡೆ ಸಾಧಿಸಿದ್ದಾರೆ.
  • 9:11 AM: ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಅವರು 3500 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಾಟೀಲ್​​ ಹಿನ್ನಡೆ ಸಾಧಿಸಿದ್ದಾರೆ.
  • 9:10 AM: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ 40480 ಮತಗಳನ್ನು ಪಡೆದಿದ್ದರೆ. ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಎಸ್.ಬಾಲರಾಜ್ 35217 ಮತಗಳನ್ನು ಗಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು 5263 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
  • 9:10 AM: ಬಳ್ಳಾರಿ‌ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. ಬಿಜೆಪಿ ‌ಅಭ್ಯರ್ಥಿ ಶ್ರೀರಾಮುಲು‌ ಗಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ‌.ತುಕಾರಾಮ್ 3940 ಮತಗಳಿಂದ ಮುನ್ನಡೆ ಪಡೆದಿದ್ದಾರೆ‌. ಒಟ್ಟು ಕಾಂಗ್ರೆಸ್ – 38303, ಬಿಜೆಪಿ – 34363 ಮತಗಳ ಎಣಿಕೆಯಾಗಿದೆ.
  • 9:05 AM: ಚಿತ್ರದುರ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 32239 ಮತ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 32164ಮತ. 75ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮುನ್ನಡೆ
    ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ, ಕೈ ಅಭ್ಯರ್ಥಿಗೆ ಅಲ್ಪ ಮುನ್ನಡೆ.
  • 9:01 :AM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ. ಎರಡನೇ ಸುತ್ತಿನಲ್ಲಿ 22590 ಮತ ಪಡೆದ ಕಾಗೇರಿ 1338 ಮತಗಳಿಂದ ಮುನ್ನಡೆ. ಕಾಂಗ್ರೆಸ್‌ ನ ಅಂಜಲಿ ನಿಂಬಾಳಕರ್ ಗೆ 9252. ಮತ
  • 8:59AM:ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 5344 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 21,006 ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ 26,350 ಮತಗಳನ್ನು ಪಡೆದಿದ್ದಾರೆ
  • 8: 58 AM: ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಿನ್ನಡೆ, ಕಾಂಗ್ರೆಸ್​​ ಅಭ್ಯರ್ಥಿ ಆನಂದ್​​ ಗಡ್ಡದೇವರಮಠಗೆ ಮುನ್ನಡೆ
  • 8: 57 AM: 269 ಕ್ಷೇತ್ರಗಳಲ್ಲಿ ಎನ್​ಡಿಎ ಮುನ್ನಡೆ
  • 8: 55 AM: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಮುನ್ನಡೆ
  • 8: 52 AM: ಮೈಸೂರಿನಲ್ಲಿ 2,390 ಮತಗಳಿಂದ ಎಂ.ಲಕ್ಷ್ಮಣ್ ಮುನ್ನಡೆ, ಯದುವೀರ್​ ಹಿನ್ನಡೆ
  • 8: 51 AM: ಮಂಡ್ಯದಲ್ಲಿ 27,000 ಮತಗಳಿಂದ ಎಚ್​.ಡಿ. ಕುಮಾರಸ್ವಾಮಿ ಮುನ್ನಡೆ, ಸ್ಟಾರ್​ ಚಂದ್ರುಗೆ ಹಿನ್ನಡೆ
  • 8: 50 AM: ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಮುನ್ನಡೆ, ರಕ್ಷಾ ರಾಮಯ್ಯಗೆ ಹಿನ್ನಡೆ
  • 8: 48 AM: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಮುನ್ನಡೆ
  • 8: 46 AM: ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಾಟೀಲ್​​ ಮುನ್ನಡೆ ಸಾಧಿಸಿದ್ದಾರೆ.
  • 8: 44 AM: ಹಾಸನದಲ್ಲಿ ಅಂಚೆ ಮತಗಳಲ್ಲಿ ಪ್ರಜ್ವಲ್​ ರೇವಣ್ಣಗೆ ಹಿನ್ನಡೆ
  • 8: 43 AM : 1800 ಮತಗಳಿಂದ ಡಾ. ಮಂಜುನಾಥ್ ಮುನ್ನಡೆ, ಡಿ.ಕೆ. ಸುರೇಶ್​ ಹಿನ್ನಡೆ
  • 8:37:AM : ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಹಿನ್ನಡೆ ಸಾಧಿದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಕಾಂಗ್ರೆಸ್​​ ಅಭ್ಯರ್ಥಿಯೂ ಆಗಿರುವ ಮೃಣಾಲ್​ ಹೆಬ್ಬಾರ್​​ ಮುನ್ನಡೆ ಸಾಧಿಸಿದ್ದಾರೆ.
  • 8:29 AM: ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್​​ ಹಿನ್ನಡೆ ಸಾಧಿಸಿದ್ದಾರೆ.
  • 8:28 :AM: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಅಂಚೆ ಮತಗಳ ಏಣಿಕೆಯಲ್ಲಿ ಮುನ್ನಡೆ
Share This Article
Leave a comment