December 22, 2024

Newsnap Kannada

The World at your finger tips!

new election commission

ಲೋಕಸಭಾ ಚುನಾವಣೆ : ನಾಳೆ ಚುನಾವಣೆ ದಿನಾಂಕ ಘೋಷಣೆ

Spread the love

ನವದೆಹಲಿ : ಲೋಕಸಭಾ ಚುನಾವಣೆ ದಿನಾಂಕ ನಾಳೆ ಘೋಷಣೆಯಾಗಲಿದ್ದು , ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ (Election Commission) ಸುದ್ದಿಗೋಷ್ಠಿ ಕರೆದಿದೆ.

ಗುರುವಾರ ನೇಮಕಗೊಂಡಿದ್ದ ಇಬ್ಬರು ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉತ್ತರಕನ್ನಡ ಕ್ಷೇತ್ರಕ್ಕೆ ಅನಂತಕುಮಾರ್ ಹೆಗ್ಡೆ ಬದಲು ಚಕ್ರವರ್ತಿ ಸೂಲಿಬೆಲೆ ?

2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯಗಳ ಅಸೆಂಬ್ಲಿಗಳ ವೇಳಾಪಟ್ಟಿಯನ್ನು ಪ್ರಕಟಿಸಲು ನಾಳೆ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಕರೆದಿದ್ದು , ಏಪ್ರಿಲ್/ಮೇ ತಿಂಗಳಲ್ಲಿ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಿಗೆ ಮತದಾನ ನಡೆಯಲಿದೆ.

ಈ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಮತದಾನ ಮಾಡಲು ನಿರ್ಧರಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!