ಮೈಸೂರು : ಮೈಸೂರು & ಕೊಡಗು ಲೋಕಸಭೆ ಕ್ಷೇತ್ರದಿಂದ ಸತತ 2 ಬಾರಿ ಜಯ ಕಂಡಿದ್ದ ಪ್ರತಾಪ್ ಸಿಂಹಗೆ ಈ ಬಾರಿಯ ಟಿಕೆಟ್ ಕೈತಪ್ಪಿದ್ದು , ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿತ್ತು .
ಯದುವೀರ್ ಮೈಸೂರು ರಾಜವಂಶದ ಕುಡಿ ಹೀಗಾಗಿ ಇಡೀ ದೇಶದ ಗಮನ ಸೆಳೆದಿತ್ತು . ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ & ಜೆಡಿಎಸ್ ವರಿಷ್ಠರ ಪಡೆಯೇ ಒಗ್ಗಟ್ಟಿನಿಂದ ಪ್ರಚಾರ ಕೂಡ ನಡೆಸಿತ್ತು.
ಹಾಗಾದರೆ ಮೈಸೂರು ಕ್ಷೇತ್ರದಲ್ಲಿ ಯಾವ ಪಕ್ಷ ಇದೀಗ ಮುನ್ನಡೆ ಸಾಧಿಸಿದೆ? ಹಾಗೇ, ಗೆಲ್ಲುವ ಕುದುರೆ ಯಾವ ಅಭ್ಯರ್ಥಿ? ಈ ಕುರಿತು ಪ್ರತಿಕ್ಷಣದ ಮಾಹಿತಿ ಇಲ್ಲಿದೆ . ಲೋಕಸಭೆ ಚುನಾವಣೆ 2024: ಫಲಿತಾಂಶಗಳ ನವೀಕರಣ
ಮೈಸೂರು ರಾಜವಂಶಸ್ಥ ಯದುವೀರ್ ಅವರು 1,64,337 ಮತ ಪಡೆದಿದ್ದು , ಲಕ್ಷ್ಮಣ್ ಅವರಿಗೆ 128,870 ಮತಗಳು ಬಂದಿವೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ 35467 ಮತಗಳ ಮುನ್ನಡೆ ಸಿಕ್ಕಿದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು