Editorial

ಕೆ ಎಂ ಎಫ್ ಮತ್ತು ಕೃಷಿಕರು ಕಟ್ಟಿಕೊಂಡ ಬದುಕು…..

ನಿಜಕ್ಕೂ ಒಂದು ಇಡೀ ಸಮುದಾಯವನ್ನು – ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ ಆರೋಗ್ಯ ವಸತಿ ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗದ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಕಾಮಧೇನು ಕರ್ನಾಟಕ ಹಾಲು ಮಹಾ ಮಂಡಲ.

ಬಹುಶಃ ರೈತ ಆತ್ಮಹತ್ಯೆಗಳು ಇನ್ನಷ್ಟು ನಿಯಂತ್ರಣ ಮೀರಿ ಹೋಗದಿರಲು ಕಾರಣ ಈ ಕ್ರಮಬದ್ಧ ಹೈನುಗಾರಿಕೆ ಎಂದು ನಿಸ್ಸಂಶಯವಾಗಿ ಹೇಳಬಹುದು.
ಗ್ರಾಮೀಣ ಬದುಕಿನ ಬಡತನದ ನಿವಾರಣೆಯಲ್ಲಿ ಈ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದು. ಅದರಲ್ಲೂ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ
ಕೆ ಎಂ ಎಫ್ ಅನ್ನು ಮರೆಯಲು ಸಾಧ್ಯವೇ ಇಲ್ಲ.

ಎಷ್ಟೊಂದು ಜನ ಹಸು ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಿದ್ದಾರೆ, ಎಷ್ಟೊಂದು ಜನ ಇದರಲ್ಲಿ ಸಂಪಾದಿಸಿದ ಹಣದಿಂದ ಮನೆಕಟ್ಟಿಕೊಂಡಿದ್ದಾರೆ, ಎಷ್ಟೊಂದು ಜನ ಇದರಿಂದಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡಿದ್ದಾರೆ ಎಂಬುದನ್ನು ಗಮನಿಸಿದಾಗ ಅದರ ಬಗ್ಗೆ ಹೆಮ್ಮೆಯಾಗುತ್ತದೆ.

ಹಾಲಿನ ಬೆಲೆಯಲ್ಲಿ ಮೂಲ ರೈತರಿಗೆ ಸ್ವಲ್ಪ ಕಡಿಮೆ ಹಣ ಪಾವತಿಯಾಗುತ್ತಿರುವುದು ನಿಜ. ಆದರೆ ಹಾಲಿನ ಗುಣಮಟ್ಟ, ಹಾಲು ಉತ್ಪಾದಕರಿಗೆ ಸಮಯಕ್ಕೆ ಸರಿಯಾಗಿ ಹೆಚ್ಚಿನ ಮೋಸವಿಲ್ಲದೆ ಕ್ರಮಬದ್ಧ ಹಣ ಪಾವತಿ, ಇಡೀ ರಾಜ್ಯದ ಜನರಿಗೆ ಸಮಯಕ್ಕೆ ಸರಿಯಾಗಿ ಹಾಲು ತಲುಪಿಸುವ ವ್ಯವಸ್ಥೆ, ಹಾಲಿನ ಇನ್ನಿತರ ಅತ್ಯಂತ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ಉತ್ಪನ್ನಗಳು ಹೀಗೆ ಒಂದು ದೊಡ್ಡ ಸಾಧನೆ ಹಾಲು ಮಹಾ ಮಂಡಲ ಮಾಡಿದೆ ಮತ್ತು ಮಾಡುತ್ತಲಿದೆ.

ಸರ್ಕಾರದ ಸ್ವಾಯತ್ತ ಸಂಸ್ಥೆ‌ಯಾದ್ದರಿಂದ ರಾಜಕೀಯ, ಭ್ರಷ್ಟಾಚಾರ, ಅವ್ಯವಹಾರ ಎಲ್ಲವೂ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಒಟ್ಟಾರೆಯಾಗಿ ಕೆಳ ಮಧ್ಯಮ ವರ್ಗದ ಜನರಿಗೆ ಈಗಲೂ ಆಶಾಕಿರಣವಾಗಿರುವುದು ವಾಸ್ತವಿಕ ಸತ್ಯ.

ಕ್ಷೀರ ಕ್ರಾಂತಿ, ವರ್ಗೀಸ್ ಕುರಿಯನ್, ಮಹಾ ಮಂಡಲದ ಸ್ಥಾಪನೆ ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಅದಕ್ಕೆ ಸಂಬಂಧಿಸಿದ ಎಲ್ಲೆಡೆಯೂ ಲಭ್ಯವಿದೆ. ಅದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಆದರೆ ಒಂದಷ್ಟು ಕೊರತೆಗಳ ನಡುವೆಯೂ ಹಣ್ಣು ತರಕಾರಿ ಬೇಳೆಕಾಳುಗಳು ಮುಂತಾದ ಕೃಷಿ ಉತ್ಪನ್ನಗಳ ವಿಷಯದಲ್ಲಿ ಈ ರೀತಿಯ ಅಥವಾ ಇದಕ್ಕೆ ಸ್ವಲ್ಪ ಹತ್ತಿರದ ಕ್ರಮಬದ್ಧವಾದ ಒಂದು ಸಂಸ್ಥೆಯನ್ನು ಸ್ಥಾಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ.

ಹಾಲಿಗಿಂತ ಭಿನ್ನವಾದ ಕೆಲವು ಕಠಿಣ ಸಮಸ್ಯೆಗಳು ಕೃಷಿ ಬೆಳೆಗಳಲ್ಲಿ ಇದೆ ಎಂಬುದು ನಿಜ. ಆದರೆ ಒಂದು ಬದ್ದತೆಯಿರುವ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗದ ಮೂಲಕ ಪರಿಹಾರ ಹುಡುಕುವುದು ಕಷ್ಟವೇನಲ್ಲ.

ಬಹುಶಃ ಹಾಗೇನಾದರೂ ಒಂದು ಕ್ರಮಬದ್ಧತೆ ಆಹಾರದ ಬೆಳೆಗಳಲ್ಲಿ ಸಾಧ್ಯವಾದರೆ ರೈತರ ಬಹುತೇಕ ಮಾರುಕಟ್ಟೆ ಸಮಸ್ಯೆಗಳಿಗೆ ಒಂದು ಪರಿಹಾರ ಸಿಗಬಹುದು. ಈಗಾಗಲೇ ಎ ಪಿ ಎಂ ಸಿ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ. ಆದರೆ ಅದು ಕೆ ಎಂ ಎಫ್ ರೀತಿ ಯಶಸ್ವಿಯಾಗದೆ ದಲ್ಲಾಳಿಗಳು ಮತ್ತು ರಾಜಕೀಯ ಕಾರಣಗಳಿಗಾಗಿ ತೃಪ್ತಿದಾಯಕವಾಗಿಲ್ಲ.

ಕೃಷಿಗೆ ಸಂಬಂಧಿಸಿದ ಒಂದಕ್ಕೊಂದು ಅವಲಂಬಿತ ಪ್ರಕೃತಿಯೂ ಸೇರಿ ಮನುಷ್ಯನ ನಿರೀಕ್ಷೆಗೆ ಮೀರಿದ ಅನೇಕ ಸಮಸ್ಯೆಗಳು ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಸಾಧ್ಯವಾದಷ್ಟು ಪರಿಹರಿಸಲು ಮತ್ತು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂಬುದು ವಾಸ್ತವಿಕ ಸತ್ಯ.

ಒಂದು ಯಶಸ್ವಿ ಸಂಸ್ಥೆಯ ಮಾದರಿ ನಮ್ಮ ಮುಂದೆ ಇರುವಾಗಲು ಅದರ ಉಪಯೋಗ ಪಡೆಯುವ ಪ್ರಯತ್ನ ಮಾಡದಿರುವುದು ಬೇಜವಾಬ್ದಾರಿ ಎನಿಸುತ್ತದೆ.

ಕೆಲವು ಬರಗಾಲ ಪೀಡಿತ ಪ್ರದೇಶಗಳು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಪಶುಸಂಗೋಪನೆ ಅನೇಕ ಜನರ ಜೀವನಾಧಾರ ಎಂಬುದನ್ನು ಗಮನಿಸಿ ಒಮ್ಮೆ ನಿಮ್ಮ ಗಮನಕ್ಕೆ ತರುವ ಒಂದು ಸಣ್ಣ ಪ್ರಯತ್ನ.

ಕಾರಣ ಅನೇಕ ಕುಂದು ಕೊರತೆಗಳ ನಡುವೆಯೂ ಮಾದರಿ ಸಂಸ್ಥೆಗಳು ನಮಗೆ ಸ್ಪೂರ್ತಿಯಾಗಿ ಅದು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲಿ ಎಂಬ ಆಶಯದಿಂದ….

ವಿವೇಕಾನಂದ. ಹೆಚ್.ಕೆ

Team Newsnap
Leave a Comment
Share
Published by
Team Newsnap

Recent Posts

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024