December 19, 2024

Newsnap Kannada

The World at your finger tips!

WhatsApp Image 2022 05 30 at 11.36.18 AM

ಚಾಡಿ ಹೇಳಿ ಬದುಕುವುದನ್ನು ಬಿಟ್ಟು, ಚುನಾವಣೆಯಲ್ಲಿ ಗೆದ್ದು ತೋರಿಸು- JDSಜಿಲ್ಲಾಧ್ಯಕ್ಷ ಡಿ ರಮೇಶ್ ಗೆ ಕೆ ಸಿ ಎನ್ ಸವಾಲು

Spread the love

ನನ್ನ ಬಗ್ಗೆ ಮಾತನಾಡಿದರೆ ಹುಷಾರ್.! ನಿನ್ನದೆಲ್ಲ ಓಪನ್ ಮಾಡಿ ಬಂಡವಾಳ ಬಹಿರಂಗ ಮಾಡುತ್ತೇನೆ ಎಂದು ಮಂಡ್ಯ ಜಿಲ್ಲಾ JDS ಅಧ್ಯಕ್ಷ ಡಿ. ರಮೇಶ್ ಗೆ ಸಚಿವ ಕೆ ಸಿ ನಾರಾಯಣಗೌಡರು ಧಮ್ಕಿ ಹಾಕಿ ವಾರ್ನಿಂಗ್ ನೀಡಿದ್ದಾರೆ.

ಇದನ್ನು ಓದಿ –ಪತ್ತೆಯಾಯ್ತು ನೇಪಾಳ ವಿಮಾನ: ಪ್ರಯಾಣಿಕರ ಗುರುತು ಪತ್ತೆ

ಚಾಡಿ ಹೇಳಿ ಬದುಕುವುದನ್ನು ಬಿಟ್ಟು, ಚುನಾವಣೆಯಲ್ಲಿ ಗೆದ್ದು ತೋರಿಸು- JDSಜಿಲ್ಲಾಧ್ಯಕ್ಷ ಡಿ ರಮೇಶ್ ಗೆ ಸಚಿವ ಕೆ ಸಿ ಎನ್ ಸವಾಲು ಹಾಕಿದ್ದಾರೆ

ಸಚಿವ ನಾರಾಯಣಗೌಡ ಹಾಗೂ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ನಡುವಿನ ವಾಗ್ದಾಳಿ ತಾರಕಕ್ಕೇರಿದೆ.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಸಚಿವ ನಾರಾಯಣಗೌಡನೇ ಕಾರಣ ಎಂದು ಹೇಳಿರುವ ಡಿ. ರಮೇಶ್ ವಿರುದ್ಧ ನನ್ನ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಸಚಿವರು ಆವಾಜ್ ಹಾಕಿದ್ದಾರೆ.

ಕೆ ಆರ್ ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ಸಚಿವ ನಾರಯಣಗೌಡರು ,ಈ ಹಿಂದೆ ನನ್ನ ಬಳಿ ಬಂದು ಕಾಲು ಹಿಡಿದುಕೊಂಡಿದ್ದು ಮರೆತುಬಿಟ್ಟಿದ್ದಾನೆ ನಾನು ಈವರೆಗೆ ಯಾರಿಗೂ ಹೆದರಿಲ್ಲ, ಹೆದರುವವನೂ ಅಲ್ಲ . ನನ್ನ ಬಗ್ಗೆ ಮಾತನಾಡಿದರೆ ನಿನ್ನದೆಲ್ಲ ಓಪನ್ ಮಾಡುತ್ತೇನೆ ಎಂದು ಸಚಿವ ನಾರಾಯಣಗೌಡ ಗದರಿದ್ದಾರೆ.

ಚಾಡಿ ಹೇಳಿ ಬದುಕಿದವನು ನೀನು :

ಹೆಚ್.ಡಿ.ದೇವೇಗೌಡರ ಬಳಿ ಹೋಗಿ ಚಾಡಿ ಹೇಳುವುದೇ ನಿನ್ನ ವೃತ್ತ . ನಿಂಗೆ ತಾಕತ್ತಿದ್ದರೆ ಬಂದು ಚುನಾವಣೆ ಎದುರಿಸು. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಬೇಡ ಎಂದು ಗುಡುಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!