ರಾಜ್ಯ ಕೆಪಿಸಿಸಿಗೆ ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿಯು ನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಿದೆ. ಆ ಪಟ್ಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್‍ನ ಹಾಲಿ ಶಾಸಕರ ಹೆಸರು ಇದ್ದು ಭಾರಿ ಕುತೂಹಲ ಮೂಡಿಸಿದೆ.‘ಮೋದಿ ಹತ್ಯೆ ಮಾಡಿ’ ಕರೆ ನೀಡಿದ್ದ ಕಾಂಗ್ರೆಸ್ ನಾಯಕ ಪಟೇರಿಯಾ ಬಂಧನ
ಹಾಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಕ್ಷ ತೊರೆದು ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಾರಾ ಎಂಬ ಚರ್ಚೆಗೆ ಈ ಪಟ್ಟಿ ಅನುವು ನೀಡಿದೆ.
ಕಾಂಗ್ರೆಸ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಅರಸೀಕೆರೆಯಿಂದ ಟಿಕೆಟ್ ಎಂಬ ಚರ್ಚೆಗಳಿಗೆ ಈ ಪಟ್ಟಿ ಇನ್ನಷ್ಟು ಪುಷ್ಠಿ ನೀಡಿದೆ.
ಹಾಸನ ಜಿಲ್ಲಾ ಕಾಂಗ್ರೆಸ್ ನ ನಿರೀಕ್ಷಿತ ಅಭ್ಯರ್ಥಿಗಳ ವಿವರ :
- ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕೆ.ಎಂ.ಶಿವಲಿಂಗೇಗೌಡ
- ಅರಕಲಗೂಡು ಕ್ಷೇತ್ರದಿಂದ ಹಾಲಿ ಬಿಜೆಪಿಯಲ್ಲಿರುವ ಹಾಗೂ ಮಾಜಿ ಸಚಿವ ಎ.ಮಂಜು,
- ಬೇಲೂರು ಕ್ಷೇತ್ರದಿಂದ ಮಾಜಿ ಸಚಿವ ಬಿ.ಶಿವರಾಂ
- ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಹೆಚ್.ಸಿ.ಶ್ರೀಕಂಠಯ್ಯ ಹಿರಿಯ ಪುತ್ರ ಲಲಿತ್ ರಾಘವ್,
- ಹಾಸನ ವಿಧಾನಸಭಾ ಕ್ಷೇತ್ರದಿಂದ ಬಿ.ಕೆ.ರಂಗಸ್ವಾಮಿ ಅಲಿಯಾಸ್ ಬನವಾಸೆ ರಂಗಸ್ವಾಮಿ,
- ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಶ್ರೇಯಸ್ ಪಟೇಲ್,
- ಆಲೂರು-ಸಕಲೇಶಪುರ ಕ್ಷೇತ್ರದಿಂದ ಮುರುಳಿ ಮೋಹನ್‍ಗೆ ಟಿಕೆಟ್ ಶಿಫಾರಸ್ಸು ಮಾಡಿ ಪಟ್ಟಿ ಕಳುಹಿಸಲಾಗಿದೆ
Like this:
Like Loading...
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು