January 3, 2025

Newsnap Kannada

The World at your finger tips!

185d9844 d9ab 4e36 9349 386d2b1a87c4

ಸಚಿವ ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಆಖೈರು – ರಾಜ್ಯಪಾಲರಿಗೆ ಪಟ್ಟಿ ತಲುಪಿಸಲಿರುವ ಸಿಎಂ

Spread the love

ಬಿಜೆಪಿ ಹೈಕಮಾಂಡ್​​ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ನಾಳೆ ಸಂಜೆ 4 ಗಂಟೆಗೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ.
ಈ ಸಂಬಂಧ ಸಿಎಂ ಬಿಎಸ್​ ಯಡಿಯೂರಪ್ಪ ಇಂದು ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಲಿದ್ದಾರೆ.

ರಾಜಭವನದಲ್ಲಿ ಇಂದು ಸ್ವಾಮಿ ವಿವೇಕಾನಂದ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ಕೊಟ್ಟು, ಬಳಿಕ ಪದಗ್ರಹಣಕ್ಕೆ ಸಿಎಂ ಸಮಯ ನಿಗದಿಪಡಿಸಲಿದ್ದಾರೆ.

ಸದ್ಯ ಖಾಲಿಯಿರುವ 7 ಸ್ಥಾನಗಳನ್ನು ಮಾತ್ರ ತುಂಬಲು ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಇತ್ತ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕ ಬೆಲ್ಲದ್ , ಮುರುಗೇಶ್ ನಿರಾಣಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

Copyright © All rights reserved Newsnap | Newsever by AF themes.
error: Content is protected !!