ವೀರಶೈವ ಲಿಂಗಾಯತರೂ ಇನ್ನು ಮುಂದೆ OBC ಪಟ್ಟಿ ಗೆ – ಸಿಎಂ ಬಂಪರ್ ಗಿಪ್ಟ್

Team Newsnap
1 Min Read

ವೀರಶೈವ – ಲಿಂಗಾಯತರಿಗೆ ಬಂಪರ್ ಗಿಪ್ಟ್ ನೀಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ.

ಇಂದು ನಡೆಯುವ ಸಚಿವ ಸಂಪುಟದ ಸಭೆಗೆ ತರಾತುರಿಯಲ್ಲಿ‌ ಲಿಂಗಾಯತ- ವೀರಶೈವರನ್ನು ಓಬಿಸಿ ( ಹಿಂದುಳಿದ ವರ್ಗ) ಮೀಸಲಾತಿ ಪಟ್ಟಿಗೆ ಸೇರಿಸುವ ವಿಷಯವನ್ನು ಚರ್ಚೆಗಾಗಿ ಅಜೆಂಡಾಕ್ಕೆ ಸೇರಿಸಲು ಸ್ಪಷ್ಟ ಆದೇಶ ನೀಡಿದ್ದಾರೆ.

ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿದ ನಂತರ ನಿರ್ಧಾರ ಕೈಗೊಂಡು, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದ್ದಾರೆ.

ಈ ನಡುವೆ ಜಯ ಮೃತ್ಯುಂಜಯ ಸ್ವಾಮಿಜೀಗಳು ನಿನ್ನೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಂಚಮಸಾಲಿ ಲಿಂಗಾಯತ ರನ್ನು 2ಎ ಗ್ರೂಪ್ ಗೆ ಸೇರಿಸುವಂತೆ ಮನವಿ ಮಾಡಿದ್ದಾರೆ.

ಲಿಂಗಾಯತ – ವೀರಶೈವರನ್ನು ಹಿಂದುಳಿದ ವರ್ಗಗಳ ಪಟ್ಟಿ ಗೆ ಸೇರಿಸುವಂತೆ ನಾನು ಸಾಕಷ್ಟು ದಿನದಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ಜಯ ಮೃತ್ಯುಂಜಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.


ಲಿಂಗಾಯತ ವೀರಶೈವ ಸಮುದಾಯ ವನ್ನು ಸೆಳೆದುಕೊಳ್ಳಲು ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಈ ನಿರ್ಧಾರದಿಂದ ಯಡಿಯೂರಪ್ಪ ನವರ ರಾಜಕೀಯ ಶಕ್ತಿ ಮತ್ತಷ್ಟು ಬಲಗೊಳ್ಳಲಿದೆ.

ಇಂದು ನಡೆಯುವ ಮಾಧ್ಯಮ ಗೋಷ್ಠಿಯಲ್ಲಿ ಸಿಎಂ ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

Share This Article
Leave a comment