Editorial

ದಾರಿ ದೀಪ -16

ಮನಸ್ಸು ಹೇಗೆ ವಿಶಾಲ ಮಾಡಿಕೊಳ್ಳುವುದು?

ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ……..

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ?

ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ?

ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ?

ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ?

ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ?

ಧರ್ಮ ಜಾತಿ ಭಾಷೆ ಹಣಕಾಸು ಪಕ್ಷ ಸಂಪ್ರದಾಯ ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತುಮಲವಾಗುತ್ತಿದೆಯೇ ?

ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ?????????

ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ……..

ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ ಕಂಡುಕೊಳ್ಳಬಹುದು ಮತ್ತು ನೆಮ್ಮದಿಯಿಂದ ಬದುಕಿನ ಸಾರ್ಥಕತೆಯತ್ತ ಹೆಜ್ಜೆ ಹಾಕಬಹುದು.

ಹೇಗೆ ಮನಸ್ಸನ್ನು ವಿಶಾಲ ಮಾಡಿಕೊಳ್ಳುವುದು ????

1) ನಮ್ಮ ಮೂಲ ನಿಷ್ಠೆಯನ್ನು ಪ್ರಕೃತಿಗೆ ವರ್ಗಾಯಿಸುವುದು……..

ನಮ್ಮನ್ನು ಹುಟ್ಟಿಸಿರುವ ಅಪ್ಪ ಅಮ್ಮ ನಾವು ಹುಟ್ಟಿಸುವ ಮಕ್ಕಳು ಸೇರಿ ಎಲ್ಲಾ ಸಂಬಂಧಗಳು ಒಂದು ಸಾಮಾಜಿಕ ವ್ಯವಸ್ಥೆಯೇ ಹೊರತು ಅದೇ ಅಂತಿಮವಲ್ಲ. ನಾವು ಸೃಷ್ಟಿಯ ಪ್ರತ್ಯೇಕ ಜೀವಿ. ನಮ್ಮ ಅಸ್ತಿತ್ವ ಸ್ವತಂತ್ರ. ಹುಟ್ಟಿಗೆ ಗಂಡು ಹೆಣ್ಣು ಒಂದು ಮಾರ್ಗ. ಅವರನ್ನು ವ್ಯಾವಹಾರಿಕ ಗುರುತಿಗಾಗಿ ತಂದೆ ತಾಯಿ ಮಗ ಮಗಳು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಅದರ ಅರ್ಥ ನಾವು ಈ ಯಾವ ಸಂಬಂಧಗಳ ನಿಯಂತ್ರಣಕ್ಕೆ ಒಳಪಡಬಾರದು ಅಥವಾ ಒಳಪಡಿಸಬಾರದು. ಪರಸ್ಪರ ಪ್ರೀತಿಯ ವಿಶ್ವಾಸ ಸಹಕಾರ ಇರಬೇಕೆ ಹೊರತು ಹೆಚ್ಚಿನ ನಿರೀಕ್ಷೆ ನಿಯಂತ್ರಣ ನಮ್ಮ ದುಃಖ ಹೆಚ್ಚಿಸುತ್ತದೆ. ಅಪ್ಪ ಮಗ ಮಗಳು ನಮ್ಮ ವಿರುದ್ಧ ಅಭಿಪ್ರಾಯ ಅಥವಾ ನಡವಳಿಕೆ ಪ್ರದರ್ಶಿಸಿದರೆ ಅದನ್ನು ಸಹಜವಾಗಿ ಸ್ವೀಕರಿಸಿ ಮುಂದೆ ಹೋಗಬೇಕು. ಅವರು ನಮ್ಮವರು ನಮ್ಮ ವಿರುದ್ಧವಿದ್ದಾರೆ ಎಂದು ಕೊರಗುತ್ತಾ ಇರಬಾರದು. ನಾವು ಇರುವುದು ನಮಗಾಗಿ ಮಾತ್ರ.

2) ಹುಟ್ಟಿದ ತಕ್ಷಣ ನಮ್ಮ ಮೇಲೆ ನಮ್ಮ ಧರ್ಮ ಜಾತಿ ಭಾಷೆ ವಂಶ ಎಲ್ಲವೂ ಹೇರಲ್ಪಡುತ್ತದೆ. ಇದು ಸ್ವಾಭಾವಿಕವಲ್ಲ…………

ಸಮಾಜ ಮತ್ತು ಆಡಳಿತದ ಅನುಕೂಲಕ್ಕಾಗಿ ರೂಪಿತವಾದ ನೀತಿ ನಿಯಮಗಳು. ಇವುಗಳ ಅರಿವು ಇರಬೇಕು. ಆದರೆ ಅದೇ ಶ್ರೇಷ್ಠ ಅದೇ ಅಂತಿಮ ಅದನ್ನು ಉಳಿಸುವುದೇ ನಮ್ಮ ಕರ್ತವ್ಯ ಮುಂತಾದ ಭ್ರಮೆಗೆ ಒಳಗಾಗಬಾರದು. ಅದೊಂದು ಅವಶ್ಯ ಮತ್ತು ಅನಿವಾರ್ಯ ಅಂಶಗಳೇ ಹೊರತು ನಾವು ಅಲ್ಲಿ ಹುಟ್ಟಿದ ಮಾತ್ರಕ್ಕೆ ಅವೆಲ್ಲವೂ ಶ್ರೇಷ್ಠ ಎಂದು ಭಾವಿಸಬಾರದು. ಆಗ ಇದರಿಂದ ಇತರರು ನಮ್ಮಂತೆ ಎಂಬ ಸಹಕಾರ ಭಾವ ಮೂಡುತ್ತದೆ. ದ್ವೇಷದ ಭಾವ ಕಡಿಮೆಯಾಗುತ್ತದೆ.

3) ಇದು ಅತಿಮುಖ್ಯವಾದುದು.
ನಾವು ನಮ್ಮ ಅರಿವಿನ – ಜ್ಞಾನದ – ತಿಳಿವಳಿಕೆಯ ಮೂಲವನ್ನು ಸ್ಪಷ್ಟವಾಗಿ ಮತ್ತು ವೈಯಕ್ತಿಕವಾಗಿ ಗುರುತಿಸಬೇಕು..
……….

ಅಂದರೆ ನಮ್ಮ ತಿಳಿವಳಿಕೆಯ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ಯಾವುದು ಎಂದು ಗಮನಿಸಬೇಕು. ತಂದೆ ತಾಯಿ ತಾತಾ ಅಜ್ಜಿ ಮಾವ ದೊಡ್ಡಪ್ಪ ಅಣ್ಣ ಅಕ್ಕ ಮುಂತಾದ ಸಂಬಂದಗಳೇ,
ಅಥವಾ ಶಾಲೆ ಮತ್ತು ಅಲ್ಲಿನ ಉಪಾಧ್ಯಾಯರು ಅವರಲ್ಲಿ ಒಬ್ಬರು ಅಥವಾ ಎಲ್ಲರೂ ಆಗಿರಬಹುದು ಅಥವಾ ಬೀದಿಯ – ಊರಿನ ಆಕರ್ಷಕ ವ್ಯಕ್ತಿತ್ವದ ನಾಯಕ ಯಾರಾದರೂ ಆಗಿರಬಹುದು ಅಥವಾ ಪೌರಾಣಿಕದ, ಇತಿಹಾಸದ, ವರ್ತಮಾನದ ರಾಜಕೀಯ ಸಾಮಾಜಿಕ ಧಾರ್ಮಿಕ,ಸಿನಿಮಾ, ಸಾಹಿತ್ಯ, ಸಂಗೀತ ಅಥವಾ ಇತರೆ ಯಾರಾದರೂ ಆಗಿರಬಹುದು ಅಥವಾ ನೀವು ಹುಟ್ಟಿದ, ಓದಿದ ಯಾವುದಾದರೂ ಧರ್ಮ ಅಥವಾ ಧರ್ಮ ಗ್ರಂಥಗಳಾಗಿರಬಹುದು ಅಥವಾ ಬುದ್ಧ ಬಸವ ವಿವೇಕಾನಂದ ಆಚಾರತ್ರಯರು, ಗಾಂಧಿ, ಅಂಬೇಡ್ಕರ್ ರೀತಿಯ ಯಾರಾದರೂ ಆಗಿರಬಹುದು ಅಥವಾ ನೀವು ಬೆಳೆದ ಅಥವಾ ನೋಡಿದ ಪರಿಸರವೇ ಆಗಿರಬಹುದು. ಇದರಲ್ಲಿ ಒಂದು ಅಥವಾ ಎಲ್ಲವೂ ಆಗಿರಬಹುದು. ಇದನ್ನು ನಾವು ಮನನ ಮಾಡಿಕೊಂಡರೆ ನಮಗೆ ಯೋಚಿಸುವ ದಿಕ್ಕು ಸುಲಭವಾಗಿ ಸಿಗುತ್ತದೆ. ಹೇಗೆಂದರೆ ನಾವು ಯೋಚಿಸುವುದು ಒಂದು ಮೂಲವಾದರೆ ಅದರ ಇನ್ನಷ್ಟು ಮೂಲಗಳು ಇವೆ ಎಂದು ಅರ್ಥಮಾಡಿಕೊಳ್ಳಬಹುದು. ಇದರಿಂದಾಗಿ ಮನಸ್ಸನ್ನು ವಿಶಾಲ ಗೊಳಿಸಿಕೊಳ್ಳಲು ತುಂಬಾ ತುಂಬಾ ಸಹಾಯವಾಗುತ್ತದೆ.

4) ಈ ಎಲ್ಲದರ ನಡುವೆ ವ್ಯಾವಹಾರಿಕ ಜಗತ್ತಿನ ಅನಿವಾರ್ಯತೆಯನ್ನು ಮರೆಯಬಾರದು………..

ಅದು ಸರಿಯಾಗಿ ಇಲ್ಲದಿದ್ದರೆ ಮೇಲೆ ಹೇಳಿದ ವಿಷಯಗಳು ವಾಸ್ತವದಲ್ಲಿ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಬದಲಾವಣೆಗಳನ್ನು ಸ್ವೀಕರಿಸುತ್ತಾ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾ ಅದರಲ್ಲಿ ನಿರಂತರತೆಯನ್ನು ಕಾಪಾಡಬೇಕು. ಮುಖ್ಯವಾಗಿ ಪಾಸ್ಟ್ ಪುಡ್ ಸಂಸ್ಕೃತಿಯನ್ನು ಆದಷ್ಟೂ ತಿರಸ್ಕರಿಸಬೇಕು. ಇಂದಿನ ನಮ್ಮ ಬಹುತೇಕ ಅಸಹನೆ ಅತೃಪ್ತಿಗೆ ಇದೇ ಬಹುಮುಖ್ಯ ಕಾರಣವಾಗಿದೆ. ಒಮ್ಮೆ ಇದನ್ನು ನಿಯಂತ್ರಿಸಿ ಸಾಧ್ಯವಾದಷ್ಟು ತಾಳ್ಮೆಗೆ ಶರಣಾದರೆ ಮನಸ್ಸು ನಿರ್ಮಲತೆಯತ್ತ ಸಾಗುತ್ತದೆ. ಆಗ ಸಹಜವಾಗಿ ಒತ್ತಡ ಕಡಿಮೆಯಾಗಿ ಮನಸ್ಸು ವಿಶಾಲವಾಗುತ್ತದೆ.

5) ಈ ಎಲ್ಲವನ್ನೂ ಸಾಧ್ಯವಾಗಿಸಲು ನಿಮ್ಮ ದೈಹಿಕ ಆರೋಗ್ಯ ಬಹುಮುಖ್ಯ……..

ಅದಿಲ್ಲದೇ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅದನ್ನು ನಮ್ಮ ನಮ್ಮ ಅವಕಾಶ ಮತ್ತು ಮಿತಿಯಲ್ಲಿ ಕಡ್ಡಾಯವಾಗಿ ಸೈನಿಕ ಶಿಸ್ತು ರೂಪಿಸಿಕೊಳ್ಳಲು ಪ್ರಯತ್ನಿಸಲೇಬೇಕು. ಏಕೆಂದರೆ ಬಹುತೇಕ ದುರ್ಬಲ ಆರೋಗ್ಯದ ಜನರು ಹೆಚ್ಚು ಉದ್ವೇಗ ಮತ್ತು ನಿರಾಸೆಗೆ ಒಳಗಾಗುತ್ತಾರೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡು ಇತರರನ್ನು ದೂಷಿಸುತಾರೆ. ಮನಸ್ಸಿನ ವಿಶಾಲತೆಗೆ ಇದು ಅಡ್ಡಿಯಾಗಬಹುದು.

ಕೊನೆಯದಾಗಿ,
ಇದಷ್ಟೇ ಅಲ್ಲದೆ ಇನ್ನೂ ನಿಮ್ಮ ಒಳ ಮನಸ್ಸಿಗೆ ಹೊಳೆಯುವ ಯಾವುದಾದರೂ ವಿಷಯವಾಗಿರಬಹುದು. ಅದನ್ನು ಉಪಯೋಗಿಸಿಕೊಂಡು ನಿಮ್ಮ ಮನಸ್ಸುಗಳನ್ನು ವಿಶಾಲಗೊಳಿಸಿಕೊಳ್ಳಿ. ಖಂಡಿತವಾಗಿಯೂ ನಿಮ್ಮ ಜೀವನಮಟ್ಟ ತನ್ನಿಂದ ತಾನೇ ‌ಈಗಿರುವ ಸ್ಥಾನಕ್ಕಿಂತ ಉತ್ತಮ ಮಟ್ಟಕ್ಕೆ ಏರುತ್ತದೆ. ಆ ಪ್ರಜ್ಞೆಯೇ ಒಂದು ಅದ್ಬುತ ಮಾನವ ಪ್ರೇಮದ ಸಂಕೇತ. ಸಮಾಜ ಪ್ರೀತಿಯ, ದೇಶ ಭಕ್ತಿಯ ಅನುಸಂಧಾನ.

ವಿವೇಕಾನಂದ. ಹೆಚ್.ಕೆ.

Team Newsnap
Leave a Comment
Share
Published by
Team Newsnap

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024