December 19, 2024

Newsnap Kannada

The World at your finger tips!

lovers,friends,death

liea-peters-birthday-shopping

ಲೀಯಾ – ಪೀಟರ್ ‘ ಬರ್ತ್ ಡೇ’ ಶಾಪಿಂಗ್​ಗೆ ಹೋಗಿದ್ದ ಪ್ರೇಮಿಗಳು : ಯುವಕನಿಂದ ಮಾಹಿತಿ

Spread the love

ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿದ್ದ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್. ಯುವತಿ ಬಿದ್ದಿರುವುದು ಕಟ್ಟಡದ ಟೆರಸ್​ ಮೇಲಿಂದ ಅಲ್ಲ. ಬ್ರಿಗೇಡ್ ರೋಡ್​ನಲ್ಲಿರುವ ಅವೆನ್ಯೂ ಮಾಲ್​​ನ 2ನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ ಇದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನು ಓದಿ –ದೇಶದ ಜನತೆಗೆ ಸಿಹಿ ಸುದ್ದಿ:ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ

ಯುವತಿ ಲಿಯಾ ಕಿಟಕಿ ಬಳಿ ಜ್ಯೂಸ್ ಕುಡಿಯಲು ಕೂತಿದ್ದಾಗ ಗ್ಲಾಸ್ ಓಪನ್ ಆಗಿದೆ. ಈ ವೇಳೆ ಲಿಯಾಳನ್ನು ರಕ್ಷಿಸಲು ಗೆಳೆಯ ಕ್ರಿಸ್ ಪೀಟರ್ ಹೋಗಿದ್ದಾನೆ. ಆಗ ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ನಾವಿಬ್ಬರೂ ಪ್ರೇಮಿಗಳು ಎನ್ನುವ ಸಂಗತಿಯನ್ನು ಯುವಕ ಪೀಟರ್ ಹೇಳಿದ್ದಾನೆ

ಈ ಪ್ರೇಮಿಗಳು ಸ್ನೇಹಿತನ ಬರ್ತ್​​ಡೇ ಪಾರ್ಟಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಸಂಜೆ ಸ್ನೇಹಿತನ ಬರ್ತಡೇ ಪಾರ್ಟಿಗೆ ಹೋಗಬೇಕಿತ್ತು. ಇಂದು ಮೂರನೇ ಶನಿವಾರ ಕಾಲೇಜಿಗೆ ರಜೆ ಇತ್ತು. ಬೆಳಗ್ಗೆಯಿಂದ ಮನೆಯಲ್ಲೇ ಇದ್ದು ಬೋರ್ ಆಗಿತ್ತು. ಶಾಪಿಂಗ್ ಮುಗಿಸಿ ಪಾರ್ಟಿಗೆ ಹೋಗೋಣ ಎಂದು ಪೀಟರ್ ಕರೆದಿದ್ದ.

ಎಂ.ಜಿ ರಸ್ತೆಯ ಪಬ್ ಒಂದರಲ್ಲಿ ಸಂಜೆ ಪಾರ್ಟಿ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಆದರೆ ವಿಧಿಯಾಟ ಸಂಜೆಗೂ ಮೊದಲೇ ಯುವತಿಯ ಜೀವವನ್ನೇ ಕಳೆದುಕೊಂಡಳು

Copyright © All rights reserved Newsnap | Newsever by AF themes.
error: Content is protected !!