ನಮ್ಮ ಸುತ್ತಲಿರುವ ಎಲ್ಲರೂ ಒಳ್ಳೆಯವರಾಗಿರಬೇಕೆಂದು ನಾವು ಬಯಸುವುದು ತಪ್ಪು ಮತ್ತು ಬಯಸಬಾರದೂ ಸಹ!
ನಮ್ಮ ಸುತ್ತ ಇರುವವರಲ್ಲಿ ವಿನಾಕಾರಣ ಟೀಕಿಸುವವರೂ ಇರಬೇಕು, ಅಣಕಿಸುವವರೂ ಇರಬೇಕು, ನಮ್ಮನ್ನು ಕಂಡರೆ ಸಹಿಸದವರಿರಬೇಕು,ಆಗ ಮಾತ್ರ ನಮ್ಮಲ್ಲಿ ತಾಳ್ಮೆ, ಸಾಧಿಸಬೇಕು ಎನ್ನುವ ಛಲ, ಗಮ್ಯ ತಲುಪಬೇಕು ಎಂಬ ಹಠ ಹೆಚ್ಚುತ್ತದೆ.
ಆಗ ಮಾತ್ರ ನಮಗೆ ಗೊತ್ತಿಲ್ಲದೆ ನಮ್ಮಲ್ಲಿ ಹುದುಗಿರುವ ನಮ್ಮ ಶಕ್ತಿ ಹೊರಗೆ ಬರುತ್ತದೆ.. ಸುತ್ತಲಿನ ಎಲ್ಲವೂ ಚೆನ್ನಾಗಿರುವಾಗ/ಅನುಕೂಲವಿದ್ದಾಗ ನಾವು ಚೆನ್ನಾಗಿರುವುದು,ಬೆಳೆಯುವುದು ಮಹತ್ತರವಲ್ಲ.. ಯಾರು ಎಷ್ಟೇ ಕಾಲೆಳೆದರೂ, ಸಂದರ್ಭ/ಸನ್ನಿವೇಶಗಳು ಎಷ್ಟೇ ಪ್ರತಿಕೂಲವಾಗಿದ್ದರೂ ನಮ್ಮ ಸಹಜತೆಯನ್ನು ಕಳೆದುಕೊಳ್ಳದಿರುವುದೇ ನಮ್ಮ ನಿಜವಾದ ಬಲ.
ಕುಲುಮೆಯಲ್ಲಿ ಕರಗಿದರೇನೇ
ಬಂಗಾರ ಹೊಳೆವುದು,
ಉಜ್ಜಿದಷ್ಟೂ ವಜ್ರ ಮಿನುಗುವುದು..
ಸಂಪಿಗೆ ವಾಸು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು