ಕೇಂದ್ರ ಸರ್ಕಾರದ ಕೃಷಿ ಬಿಲ್ ಕುರಿತ ಲಾಭ-ನಷ್ಟದ ಚರ್ಚೆಯಾಗಲಿ. ಹೋರಾಟಮಾಡುತ್ತಿರುವವರು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಕೇಂದ್ರದ ಕೃಷಿ, ರೈತ, ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಸೆಪ್ಟೆಂಬರ್ 27 ರಂದು ರೈತ ಸಂಘಟನೆಗಳು ಕರೆದಿರುವ ಭಾರತ್ ಬಂದ್ ಕುರಿತು ಉಡುಪಿಯಲ್ಲಿ ವರದಿಗಾರರೊಂದಿಗೆ ಸಚಿವರು ಮಾತನಾಡಿದರು. ಬಿಲ್‌ನ ಸಾಧಕ-ಬಾಧಕ ಚರ್ಚಿಸದೆ ಅದು ಸರಿಯಿಲ್ಲ ಎಂದು ರೈತಪರ ಹೋರಾಟಗಾರರು ಹೇಗೆ ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು.
ರೈತ ಹೋರಾಟಗಾರರ ಜತೆ 11 ಸುತ್ತಿನ ಚರ್ಚೆ ನಡೆದಿದೆ. ಮತ್ತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು. ಕೇಂದ್ರದ ಕೃಷಿ ಬಿಲ್ ಅನುಷ್ಠಾನಗೊಳಿಸಿದ ರಾಜ್ಯಗಳ ರೈತರಿಗೆ ಲಾಭವಾಗಿದೆ. ಹೋರಾಟ ಮಾಡುವವರು ಈ ವರದಿಯನ್ನು ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರ ವಿಷಯದಲ್ಲಿ ರಾಜಕೀಯ ಬೇಡ. ದೇಶಕ್ಕೆ ಅನ್ನಕೊಡುವ ರೈತರೊಂದಿಗೆ ಚರ್ಚಿಸಲು ಸದಾಸಿದ್ಧ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
- ರೈತರ ಕ್ರಾಂತಿ ಸಂಕ್ರಾಂತಿ
- ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ
- ಮಕರ ಸಂಕ್ರಾಂತಿ
- ತಿರುಪತಿ ದೇವಾಲಯದಲ್ಲಿ ಬೆಂಕಿ ಅವಘಡ: ಲಡ್ಡು ವಿತರಣಾ ಕೌಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್
More Stories
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ
ರೈತರ ಕ್ರಾಂತಿ ಸಂಕ್ರಾಂತಿ