ಸರ್ಕಾರ ನಡೆಯುತ್ತಿಲ್ಲ, 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಆಡಿಯೋ ಕುರಿತಂತೆ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಖಾರವಾಗಿ ಪ್ರತಿಕ್ರಿಯೆ ನೀಡಿ ಸಚಿವ ಮಾಧುಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಅಂತ ಸಚಿವ ಮುನಿರತ್ನ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸಚಿವ ಮುನಿರತ್ನ ಅವರು, ಸಂಪೂರ್ಣ ಅವಧಿವರೆಗೂ ಸರ್ಕಾರ ಮಾಡಲಿದ್ದೇವೆ. ಚುನಾವಣೆ ಬೇಗ ಬಂದರೂ ನಾವು ಎದುರಿಸಲು ಸಿದ್ಧರಾಗಿದ್ದೇವೆ. ಆದರೆ ಮಾಧುಸ್ವಾಮಿ ಮಾನೇಜ್ ಮಾಡುತ್ತಿದ್ದೀವಿ ಅಂತ ಹೇಳಿದ್ದರೆ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅವರ ಹಿರಿತನಕ್ಕೆ ಈ ರೀತಿ ಹೇಳಿಕೆ ಶೋಭೆ ತರೋದಿಲ್ಲ. ಸರ್ಕಾರದಲ್ಲಿ ಮಾಧುಸ್ವಾಮಿ ಸಹ ಒಂದು ಭಾಗ. ಕ್ಯಾಬಿನೇಟ್ನ ಪ್ರತಿಯೊಂದು ಅಂಶದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಅಂತಹ ಹೇಳಿಕೆ ನೀಡಿದರೆ ಅವರು ಸಹ ಪಾಲುದಾರರಾಗಿರುತ್ತಾರೆ. ಒಂದು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಈ ರೀತಿ ಮಾತನಾಡಬಾರದು ತಿರುಗೇಟು ನೀಡಿದ್ದಾರೆ.
ಸಹಕಾರ ಇಲಾಖೆಯ ಯೋಜನೆಯಲ್ಲಿ ಕಮಿಷನ್ ವಿಚಾರವಾಗಿ ಮಾಧುಸ್ವಾಮಿ ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಎನ್ನಲಾಗಿದೆ.
ಕಮಿಷನ್ ವಿಚಾರ ಸಹಕಾರ ಸಚಿವ ಸೋಮಶೇಖರ್ ಗಮನಕ್ಕೆ ತಂದಿದ್ದೇನೆ. ನಾನೂ ಕೂಡ ಅಧಿಕಾರಿಗಳಿಗೆ ಹಣ ಕೊಟ್ಟಿದ್ದೇನೆ. ಸರ್ಕಾರ ನಡೀತಿಲ್ಲ.. 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಮ್ಯಾನೇಜ್ ಮಾಡ್ತಿದ್ದೇವೆ ಅಂತ ಹೇಳಿದರು ಮಾಧುಸ್ವಾಮಿ ಹೇಳಿಕೆಯನ್ನು ಖಂಡನೆ ಮಾಡುವ ಮೂಲಕ ಬಹಿರಂಗ ಸಮರ ಸಾರಿದ್ದಾರೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು