ಮೈಸೂರು ಜಿಲ್ಲೆಯಲ್ಲಿ ಪಿಯು ಉಪನ್ಯಾಸಕರು, ಸಿಬ್ಬಂದಿಗಳು ಇನ್ನು ಮುಂದೆ ಕಾಲೇಜಿಗೆ ಕತ೯ವ್ಯಕ್ಕೆ ಬರುವಾಗ ಜೀನ್ಸ್ ಪ್ಯಾಂಟ್ , ಟಿ ಶರ್ಟ್ ಹಾಕುವಂತಿಲ್ಲ.
ಹೀಗಂತ ಮೈಸೂರು ಡಿಡಿಪಿಯು ಶ್ರೀನಿವಾಸ್ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗೆ ಸೂಚನೆ ನೀಡಿ ಆದೇಶ ನೀಡಲಾಗಿದೆ.
ಕರ್ತವ್ಯದಲ್ಲಿರುವಾಗ ಸಿಬ್ಬಂದಿಗಳು ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸದಂತೆ ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮೌಖಿಕವಾಗಿ ಸೂಚನೆ ಮೇರೆಗೆ ಆದೇಶ ಡಿಡಿಪಿಯು ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ಕಾಲೇಜಿನ ಮತ್ತು ಜಿಲ್ಲಾ ಕಚೇರಿಯ ಎಲ್ಲಾ ಪ್ರಾಂಶುಪಾಲರು, ಬೋಧಕ, ಬೋಧಕೇತರ ನೌಕರರು ಕಡ್ಡಾಯವಾಗಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸುವುದನ್ನು ನಿರ್ಭಂದಿಸುವ ಕುರಿತು ಸೌಕರರ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು