- ಶಾಸಕಿಯಿಂದ ಪೊಲೀಸ್ ಕರ್ತವ್ಯ ಕ್ಕೆ ಅಡ್ಡಿ
- ಶಾಸಕಿ ಸೌಮ್ಯ ರೆಡ್ಡಿ ವಿರುದ್ದ ಕೇಸ್
- ಕಿರಿಕ್ ಎಂಎಲ್ಎ ಸೌಮ್ಯ ರೆಡ್ಡಿ ರುದ್ರಾವತಾರ
ಮಹಿಳಾ ಪೋಲಿಸ್ ಪೇದೆ ಮೇಲೆ ಶಾಸಕಿ ಸೌಮ್ಯ ರೆಡ್ಡಿ ಹಲ್ಲೆ ಮಾಡಿದ ಪ್ರಸಂಗ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ.
ಕಾಂಗ್ರೆಸ್ ನಾಯಕರು, ಕಾರ್ಯ ಕರ್ತ ರೈತರ ಪರವಾಗಿ ಕೃಷಿ ಕಾಯ್ದೆಗಳನ್ನು ಕೈ ಬಿಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನಾ ಹೋರಾಟದ ವೇಳೆ ರಾಜಭವನಕ್ಕೆ ದಾಳಿ ಮಾಡಲು ಮುಂದಾದರು.
ಈ ವೇಳೆ ಪೋಲಿಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದು ತಳ್ಳಾಟ – ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದುಕೊಳ್ಳುವ ವೇಳೆ ಬ್ಯಾರಿಕೇಡ್ ತಳ್ಳಿ ಕೊಂಡು ನಾಯಕರು ಮತ್ತೆ ಮುಂದೆ ಹೋದಾಗ ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದರು.
ಪೋಲಿಸ್ ಕೈಗೆ ಏಟು ಹಾಕಿದ ಶಾಸಕಿ :
ತಳ್ಳಾಟ -ನೂಕಾಟದಿಂದ ಕೋಪಗೊಂಡ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ತನ್ನ ಮೇಲೆ ಮಹಿಳಾ ಪೋಲಿಸ್ ಒಬ್ಬರು ದೌರ್ಜನ್ಯ ಮಾಡಿದ್ದಾರೆಂದು ವ್ಯಾಗ್ರ ರೂಪ ತಾಳಿದರು. ನಂತರ ಶಾಸಕಿ ಮಹಿಳಾ ಪೋಲಿಸ್ ಕೈಗೆ ಎರಡು ಏಟು ಹಾಕಿದರು. ಆ ಮೇಲೆ ಡಿಕೆಶಿ ಬಳಿ ಬಂದು ದೂರು ಹೇಳಿದರು.
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
ಬಂಧಿತ ಕಾಂಗ್ರೆಸ್ ನಾಯಕರನ್ನು ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.
More Stories
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು