January 9, 2025

Newsnap Kannada

The World at your finger tips!

bdvt

ವಿಧಾನ ಸಭಾ ಕಲಾಪದಿಂದ ಶಾಸಕ ಸಂಗಮೇಶ್ ಒಂದು ವಾರ ಅಮಾನತ್ತು

Spread the love

ವಿಧಾನಸಭೆ ಕಲಾಪದಲ್ಲಿ ಆಂಗಿ (ಶಟ್೯) ಬಿಚ್ಚಿದ ಕಾರಣಕ್ಕಾಗಿ ಕಾಂಗ್ರೆಸ್​ನ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರ ಕಾಲ ಸದನದಿಂದ ಅಮಾನತು ಮಾಡಲಾಗಿದೆ.

ಇಂದಿನ ವಿಧಾನ ಸಭಾ ಕಲಾಪದ ವೇಳೆ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ಸಂಗಮೇಶ್ ನಡೆಗೆ ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನಗೊಂಡು ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ ಎಂದು ಹೇಳಿದ್ದರು.

ಕ್ಷೇತ್ರದ ಜನತೆಗೆ ಅಗೌರವ ತರಬೇಡಿ. ಅಶಿಸ್ತಿನಿಂದ ನಡೆದುಕೊಂಡರೆ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಬಳಿಕ ಸಂಗಮೇಶ್‌ಗೆ ಡಿ.ಕೆ. ಶಿವಕುಮಾರ್ ಶರ್ಟ್ ಹಾಕಿಸಿದ್ದರು.

ಅಂಗಿ ಬಿಚ್ಚಿದ್ದು ಅತಿರೇಕವೇನಲ್ಲ- ಶಾಸಕ :

ಭದ್ರಾವತಿ ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆರ್​ಎಸ್​ಎಸ್​, ಬಿಜೆಪಿ, ಬಜರಂಗದಳದವರು ಭದ್ರಾವತಿಯಲ್ಲಿ ಕೋಮುಗಲಭೆ ಮಾಡಬೇಕು ಅನ್ಕೊಂಡಿದ್ದಾರೆ. ಕರಾವಳಿಯ ರೀತಿಯಲ್ಲೇ ಹಿಂದುತ್ವದಿಂದ ಗೆಲ್ಲಬಹುದು ಎಂದು ನನ್ನ ಮೇಲೆ, ಕುಟುಂಬದ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ನಾನು ಕಾಂಗ್ರೆಸ್ ಶಾಸಕನಾಗಿರುವ ಕಾರಣ ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ವಾರ ಭದ್ರಾವತಿಗೆ ಬಂದು ಅವರ ಹಲ್ಕಾಗಿರಿ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ನ್ಯಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸದನದಲ್ಲಿ ಶರ್ಟ್ ಬಿಚ್ಚುವ ಹಂತಕ್ಕೆ ಹೋದೆ ಎಂದಿದ್ದಾರೆ.‌

ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅವರಿಗೆ ಪತ್ರ ಕೊಟ್ಟರೂ ಸರ್ಕಾರಕ್ಕೆ ಸೂಚನೆ ಕೊಟ್ಟಿಲ್ಲ. ಹೀಗಾಗಿ ಮನಸ್ಸಿಗೆ ನೋವಾಗಿ ಪ್ರತಿಭಟನೆ ಮಾಡಿದೆ ಎಂದರು.

ಶರ್ಟ್ ಬಿಚ್ಚಿದರೆ ಕ್ಷೇತ್ರದ ಜನರಿಗೆ ಏಕೆ ಅವಮಾನ ಆಗುತ್ತೆ? ನ್ಯಾಯ ಸಿಗದೇ ಇದ್ದಾಗ ನಾನು ಏನು ಮಾಡಬೇಕು? ನನ್ನ ಭಾವನೆ ಪ್ರಕಾರ ಅದು ಅತಿರೇಕ ಆಗಿಲ್ಲ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!