January 8, 2025

Newsnap Kannada

The World at your finger tips!

upagraha

ಮಧ್ಯಾಹ್ನ 3 ಕ್ಕೆ ಇಸ್ರೋದಿಂದ 10 ಉಪಗ್ರಹಗಳ ಉಡಾವಣೆ

Spread the love

ಭಾರತದ ಭೂ ವೀಕ್ಷಣಾ ಉಪಗ್ರಹ ಇಒಎಸ್​-01 ಹಾಗೂ ವಿದೇಶದ 9 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 49 ರಾಕೆಟ್​ ಶನಿವಾರ ಉಡಾವಣೆ ಆಗಲಿದೆ.

ಮಧ್ಯಾಹ್ನ 3 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಆಗಲಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್​ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಭತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಲಿದೆ.

EOS-01 ಭೂಮಿಯ ಸುತ್ತ ಸುತ್ತುವ ಉಪಗ್ರಹವಾಗಿದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಹಾಯಕಾರಿಯಾಗಲಿದೆ. ಇನ್ನು ಅಂತಾರಾಷ್ಟ್ರೀಯ ಸ್ಯಾಟಲೈಟ್​ಗಳನ್ನು ವಾಣಿಜ್ಯ ಒಪ್ಪಂದದ ಮೇರೆ ಉಡಾಯಿಸಲು ಇಸ್ರೋ ಮುಂದಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್​​ನಲ್ಲಿ ಈ ಸ್ಯಾಟಲೈಟ್​ಗಳನ್ನು ಉಡಾಯಿಸಲು ಮುಂದಾಗಿದ್ದು ಉಡಾವಣೆಯ ದೃಶ್ಯವನ್ನ ಇಸ್ರೋದ ವೆಬ್​ಸೈಟ್, ಯೂಟ್ಯೂಬ್, ಫೇಸ್​ಬುಕ್ ಮತ್ತು ಟ್ವಿಟ್ಟರ್​ ಚಾನೆಲ್​ಗಳಲ್ಲಿ ಜನರು ಲೈವ್​ಗಳಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!