ಐಪಿಎಲ್ 20-20ಯ 41ನೇ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್‌ಗಳ ಅದ್ಭುತ ಜಯ ಗಳಿಸಿತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪಂಜಾಬ್ ತಂಡದಿಂದ ಆರಂಭಿಕ ಆಟಗಾರರಾಗಿ ಕೆ. ಎಲ್. ರಾಹುಲ್ ಹಾಗೂ ಎಂ. ಸಿಂಗ್ ಫೀಲ್ಡಿಗೆ ಎಂಟ್ರಿ ನೀಡಿದರು. ರಾಹುಲ್ 27 ಬಾಲ್‌ಗಳಿಗೆ 27 ರನ್ ಗಳಿಕೆ ಮಾಡಿದರೆ, ಸಿಂಗ್ 14 ಬಾಲ್‌ಗಳಿಗೆ 17 ರನ್ ಮಾತ್ರ ಗಳಿಸಿದರು. ನಂತರ ಬಂದ ಎನ್. ಪೂರನ್ ಕೇವಲ 32 ರನ್ (28 ಬಾಲ್‌ಗಳಿಗೆ) ಗಳಿಸಿದರು. ಪಂಜಾಬ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು.
ಪಂಜಾಬ್ ತಂಡ ನೀಡಿದ ಗುರಿಗೆ ಪ್ರತಿಯಾಗಿ ಮೈದಾನಕ್ಕೆ ಹೈದರಾಬಾದ್ ತಂಡದ ನಾಯಕ ಮತ್ತು ಉಪ ನಾಯಕರಾದ ಡಿ. ವಾರ್ನರ್ ಮತ್ತು ಜೆ. ಬೇರ್ಸ್ಟೋವ್ ಬಂದರು. ವಾರ್ನರ್ 20 ಬಾಲ್‌ಗಳಿಗೆ 35 ರನ್ ಹಾಗೂ ಬೇರ್ಸ್ಟೋವ್ 20 ಬಾಲ್‌ಗಳಿಗೆ 19ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಶಂಕರ್ ಅವರ ಬ್ಯಾಟಿಂಗ್ (27 ಬಾಲ್‌ಗಳಿಗೆ 26 ರನ್) ಉತ್ತಮವಾಗಿತ್ತಾದರೂ ತಂಡ ಸೋಲಿನ ಮೆಟ್ಟಿಲನ್ನು ತುಳಿಯಬೇಕಾಯಿತು. ಉಳಿದ ಆಟಗಾರರ ಪ್ರದರ್ಶನವಂತೂ ತೀರ ನಿರಾಸೆ ಮೂಡಿಸಿತ್ತು. ಪಂಜಾಬ್ ತಂಡದ ಬೌಲರ್‌ಗಳಾದ ಎ. ಸಿಂಗ್ ಮತ್ತು ಸಿ. ಜೋರ್ಡನ್ ತಲಾ ಮೂರು ವಿಕೆಟ್ ಪಡೆದು ಹೈದರಾಬಾದ್ ತಂಡವನ್ನು ದುರ್ಬಲಗೊಳಿಸಿದರು. ಹೈದರಾಬಾದ್ ತಂಡ 19.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಪಂದ್ಯದಲ್ಲಿ ಸೋತು ಸುಣ್ಣವಾಯಿತು.
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ