Trending

MI ವಿರುದ್ಧ ರೋಚಕ ಗೆಲುವು ಸಾಧಿಸಿದ KXIP

ಐಪಿಎಲ್ 20-20ಯ 35ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ‌ ಗೆಲುವು ಸಾಧಿಸಿತು.

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಮ್‌ಐ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಎಮ್‌ಐ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್ ಶರ್ಮಾ‌ ಹಾಗೂ ಕ್ಲಿಂಟನ್ ಡಿ ಕಾಕ್ ಮೈದಾನಕ್ಕಿಳಿದರು. ಶರ್ಮಾ ಕೇವಲ 9 ರನ್‌ಗಳಿಗೆ ಪೆವಿಲಿಯನ್ ಸೇರಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಶರ್ಮಾ ಅವರ ಜೊತೆಯಾಟಗಾರರಾಗಿ ಮೈದಾನಕ್ಕಿಳಿದ ಕಾಕ್ ಎಮ್‌ಐ ತಂಡಕ್ಕೆ ಬಹು ದೊಡ್ಡ ಆಸರೆಯಾದರು. ಕಾಕ್ ಅವರು 43 ಎಸೆತಗಳಿಗೆ 53 ರನ್‌ಗಳ ದೊಡ್ಡ ಕೊಡುಗೆಯನ್ನು ತಂಡಕ್ಕೆ ನೀಡಿದರು. ಆದರೆ ಪಂದ್ಯದಲ್ಲಿ ಎಮ್‌ಐ ಗೆಲ್ಲುವ ಲಕ್ಷಣ ಕಾಣಲಿಲ್ಲ. ಕಾಕ್ ಅವರ ಜೊತೆ ಕೆ. ಪಾಂಡ್ಯ (30 ಎಸೆತಗಳಿಗೆ 34 ರನ್) ಹಾಗೂ ಕೆ. ಪೋಲಾರ್ಡ್ 12 ಎಸೆತಗಳಿಗೆ 34 ರನ್) ತಂಡವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಆಟವಾಡಿದರೂ ಸಹ ತಂಡ ಸೋಲಲೇಬೇಕಾಯಿತು. ಎಮ್‌ಐ ತಂಡ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಕೆ ಮಾಡಿತು.

ಪಂಜಾಬ್ ತಂಡದಿಂದ ಎಮ್‌ಐ ತಂಡಕ್ಕೆ ದಾಳಿಗೆ ಪ್ರತಿ ದಾಳಿ ಮಾಡಲು ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫೀಲ್ಡಿಗಿಳಿದರು. ರಾಹುಲ್‌ ಅವರ ಆಟ ತಂಡಕ್ಕೆ ಗೆಲುವಿನ ಉತ್ಸಾಹವನ್ನು ತುಂಬಿತು. ರಾಹುಲ್ ಅವರು 51 ಎಸೆತಗಳಿಗೆ 77 ರನ್‌ಗಳ ಮಿಂಚಿನಾಟ ಆಡಿದರು. ಕೊನೆ ಕ್ಷಣದಲ್ಲಿ ಹೂಡಾ ಮತ್ತು ಜೋರ್ಡನ್ ಅವರ ಆಟವೂ ತಂಡಕ್ಕೆ ಸಹಕಾರಿಯಾಯ್ತು. ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ಮುಂದೂಡಿತು.

ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ 5 ರನ್ ಗಳಿಸಿದರೆ, ಎಮ್‌ಐ ತಂಡ 5 ರನ್ ಗಳಿಸಿತು. ಮತ್ತೂ ಒಮ್ಮೆ ಪಂದ್ಯ ಸೂಪರ್ ಓವರ್‌ಗೆ ಹೋಯಿತು.

ಎರಡನೇ ಸೂಪರ್ ಓವರ್‌ನಲ್ಲಿ ಎಮ್‌ಐ ನೀಡಿದ 12 ರನ್‌ಗಳ ಗುರಿಗಳ ಸವಾಲನ್ನು 15 ರನ್‌ಗಳಿಸುವ ಮೂಲಕ ಪಂಜಾಬ್ ತಂಡ ಗೆದ್ದಿತು.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024