ಐಪಿಎಲ್ 20-20ಯ 35ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವು ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಮ್‌ಐ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಎಮ್‌ಐ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್ ಶರ್ಮಾ ಹಾಗೂ ಕ್ಲಿಂಟನ್ ಡಿ ಕಾಕ್ ಮೈದಾನಕ್ಕಿಳಿದರು. ಶರ್ಮಾ ಕೇವಲ 9 ರನ್‌ಗಳಿಗೆ ಪೆವಿಲಿಯನ್ ಸೇರಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಶರ್ಮಾ ಅವರ ಜೊತೆಯಾಟಗಾರರಾಗಿ ಮೈದಾನಕ್ಕಿಳಿದ ಕಾಕ್ ಎಮ್‌ಐ ತಂಡಕ್ಕೆ ಬಹು ದೊಡ್ಡ ಆಸರೆಯಾದರು. ಕಾಕ್ ಅವರು 43 ಎಸೆತಗಳಿಗೆ 53 ರನ್‌ಗಳ ದೊಡ್ಡ ಕೊಡುಗೆಯನ್ನು ತಂಡಕ್ಕೆ ನೀಡಿದರು. ಆದರೆ ಪಂದ್ಯದಲ್ಲಿ ಎಮ್‌ಐ ಗೆಲ್ಲುವ ಲಕ್ಷಣ ಕಾಣಲಿಲ್ಲ. ಕಾಕ್ ಅವರ ಜೊತೆ ಕೆ. ಪಾಂಡ್ಯ (30 ಎಸೆತಗಳಿಗೆ 34 ರನ್) ಹಾಗೂ ಕೆ. ಪೋಲಾರ್ಡ್ 12 ಎಸೆತಗಳಿಗೆ 34 ರನ್) ತಂಡವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಆಟವಾಡಿದರೂ ಸಹ ತಂಡ ಸೋಲಲೇಬೇಕಾಯಿತು. ಎಮ್‌ಐ ತಂಡ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಕೆ ಮಾಡಿತು.
ಪಂಜಾಬ್ ತಂಡದಿಂದ ಎಮ್‌ಐ ತಂಡಕ್ಕೆ ದಾಳಿಗೆ ಪ್ರತಿ ದಾಳಿ ಮಾಡಲು ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫೀಲ್ಡಿಗಿಳಿದರು. ರಾಹುಲ್ ಅವರ ಆಟ ತಂಡಕ್ಕೆ ಗೆಲುವಿನ ಉತ್ಸಾಹವನ್ನು ತುಂಬಿತು. ರಾಹುಲ್ ಅವರು 51 ಎಸೆತಗಳಿಗೆ 77 ರನ್‌ಗಳ ಮಿಂಚಿನಾಟ ಆಡಿದರು. ಕೊನೆ ಕ್ಷಣದಲ್ಲಿ ಹೂಡಾ ಮತ್ತು ಜೋರ್ಡನ್ ಅವರ ಆಟವೂ ತಂಡಕ್ಕೆ ಸಹಕಾರಿಯಾಯ್ತು. ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ಮುಂದೂಡಿತು.
ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ 5 ರನ್ ಗಳಿಸಿದರೆ, ಎಮ್‌ಐ ತಂಡ 5 ರನ್ ಗಳಿಸಿತು. ಮತ್ತೂ ಒಮ್ಮೆ ಪಂದ್ಯ ಸೂಪರ್ ಓವರ್‌ಗೆ ಹೋಯಿತು.
ಎರಡನೇ ಸೂಪರ್ ಓವರ್‌ನಲ್ಲಿ ಎಮ್‌ಐ ನೀಡಿದ 12 ರನ್‌ಗಳ ಗುರಿಗಳ ಸವಾಲನ್ನು 15 ರನ್‌ಗಳಿಸುವ ಮೂಲಕ ಪಂಜಾಬ್ ತಂಡ ಗೆದ್ದಿತು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ