ಐಪಿಎಲ್ 20-20ಯ 37ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆದ್ದಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿ ತಂಡದಿಂದ ಆರಂಭಿಕ ಆಟಗಾರರಾಗಿ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದರು. ಶಾ ಅವರ ಆಟದ ಆರಂಭ ಅತ್ಯಂತ ಸಾಧಾರಣವಾಗಿದ್ದರೂ, ಧವನ ಅವರ ಆರಂಭ ಅದ್ಭುತವಾಗೊತ್ತು. ಶಿಖರ್ ಧವನ್ 61 ಎಸೆತಗಳಿಗೆ 106 ರನ್ ಗಳಿಸಿದರೆ, ಶಾ 11 ಎಸೆತಗಳಿಗೆ 7 ರನ್ ಮಾತ್ರ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಯಾರ ಆಟವೂ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಡಿಸಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್‌ಗಳ ಸಾಧಾರಣ ಗಳಿಕೆ ಮಾಡಿತು.
ಪಂಜಾಬ್ ತಂಡ ಉತ್ಸಾಹದಿಂದಲೇ ಡಿಸಿ ಸವಾಲನ್ನು ಸ್ವೀಕಾರ ಮಾಡಿತು. ತಂಡದಿಂದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೈದಾನಕ್ಕಿಳಿದರು. ರಾಹುಲ್ 11 ಬಾಲ್‌ಗಳಿಗೆ 15 ರನ್ ಹಾಗೂ 9 ಬಾಲ್‌ಗಳಿಗೆ 5 ರನ್ ಗಳಿಕೆ ಮಾಡಿದರು. ಆಟವನ್ನು ಇಂದು ನಿಜವಾಗಿ ಗೆಲ್ಲಿಸಿದ್ದು ಎನ್. ಪೂರನ್ ಮತ್ತು ಜಿ. ಮ್ಯಾಕ್ಸ್‌ವೆಲ್ ಅವರ ಆಟ. ಪೂರನ್ 28 ಬಾಲ್‌ಗಳಿಗೆ 53 ರನ್ ಹಾಗೂ ಮ್ಯಾಕ್ಸ್‌ವೆಲ್ 24 ಎಸೆತಗಳಿಗೆ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪಾಲು ಹಂಚಿಕೊಂಡರು. ಪಂಜಾಬ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
More Stories
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ