Trending

ಗೆಲುವಿನ ಕಹಳೆ ಮೊಳಗಿಸಿದ KXIP

ಐಪಿಎಲ್ 20-20ಯ 30ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರೋಚಕ ಗೆಲುವು ಸಾಧಿಸಿತು.

ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಪಂದ್ಯದಲ್ಲಿ ಮುಗ್ಗರಿಸಿತು.

ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಫೀಲ್ಡಿಗಿಳಿದ ಆರೋನಾ ಫಿಂಚ್ ಹಾಗೂ ದೇವದತ್ ಪಡಿಕಲ್‌‌ ಆಟದಲ್ಲಿ ಕಳೆದ ಬಾರಿಯ ಮ್ಯಾಜಿಕ್ ಇರಲಿಲ್ಲ. ಫಿಂಚ್ 18 ಎಸೆತಗಳಲ್ಲಿ 29 ರನ್ ಗಳಿಕೆ‌ ಮಾಡಿದರೆ, ಪಡಿಕ್ಕಲ್ 12 ಎಸೆತಗಳಿಗೆ 18 ರನ್ ಗಳಿಸಿದರು. ಪಡಿಕ್ಕಲ್ ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ 39 ಬಾಲ್‌ಗಳಿಗೆ 48 ರನ್ ಗಳಿಸಿ ಅರ್ಧ ಶತಕದ ಹೊಸ್ತಿಲಲ್ಲಿ ಔಟಾದರು. ನಿರೀಕ್ಷಿತ ಆಟಗಾರ ಎಬಿ ಡಿ ವೀಲಿಯರ್ಸ್ 2 ರನ್‌ಗಳಿಗೆ ಮಹಮದ್ ಶಮಿ ಅವರ ಬೌಲಿಂಗ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಸಿ. ಮೊರೀಸ್ 8 ಎಸೆತಗಳಲ್ಲಿ 25 ರನ್‌ಗಳ ಮಿಂಚಿನಾಟ ಆಡಿದರಾದರೂ ತಂಡ ಗೆಲ್ಲುವಲ್ಲಿ ಅಸಫಲವಾಯಿತು. ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟುವ ನಿಟ್ಟಿನಲ್ಲಿ ಪಂಜಾಬ್ ತಂಡದಿಂದ ಕೆ.ಎಲ್‌. ರಾಹುಲ್‌ ಹಾಗೂ ಮಯಾಂಕ್ ಅಗರ್ವಾಲ್ ಅವರು ಆರಂಭಿಕ ಬ್ಯಾಟ್ಸ್‌ಮನ್ ‌ಗಳಾಗಿ ಮೈದಾನಕ್ಕಿಳಿದರು. ರಾಹುಲ್‌ ಹಾಗೂ ಅಗರ್ವಾಲ್ ಅವರ ಬ್ಯಾಟಿಂಗ್‌ಗೆ ಆರ್‌ಸಿಬಿ ಬೌಲರ್‌ಗಳು ಬಸವಳಿದು ಹೋದರು. ಅಗರ್ವಾಲ್ 25 ಎಸೆತಗಳಿಗೆ 45 ರನ್ ಗಳಿಕೆ ಮಾಡಿ ಔಟಾದರು. ರಾಹುಲ್ 49 ಎಸೆತಗಳಿಗೆ 61 ರನ್ ಹಾಗೂ ಕ್ರಿಸ್ ಗೇಲ್ 45 ಎಸೆತಗಳಿಗೆ 53 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಕಡೆಯ ಕ್ಷಣದಲ್ಲಿ ಗೇಲ್ ರನ್‌ಔಟ್ ಆದುದರಿಂದ ಪ್ರೇಕ್ಷಕರಲ್ಲಿ ಕೆಲ ಕ್ಷಣಗಳ ಗೊಂದಲವುಂಟಾಯಿತು. ಪಂಜಾಬ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಕೆ ಮಾಡಿ ಪಂದ್ಯದಲ್ಲಿ ಜಯಮಾಲೆಯನ್ನು ತನ್ನದಾಗಿಸಿಕೊಂಡಿತು.

Team Newsnap
Leave a Comment
Share
Published by
Team Newsnap
Tags: KXIP

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024