Main News

ಆಕಾಶವಾಣಿಯ ಮಧುರ ಧ್ವನಿ ನಾಗಮಣಿ ಎಸ್ ರಾವ್‌ಗೆ ಕೆಯುಡಬ್ಲ್ಯುಜೆ ಗೌರವ

“ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್” ಎಂಬ ಅಚ್ಚಕನ್ನಡದ ಧ್ವನಿಯನ್ನು ಹಳೆ ತಲೆಮಾರಿನ ಯಾರೂ ಮರೆತಿಲ್ಲ. ಮಧುರ ನುಡಿಯ ವಾರ್ತಾವಾಚಕಿ ನಾಗಮಣಿ ಎಸ್ ರಾವ್ ನಿವಾಸಕ್ಕೆ ತೆರಳಿ ಅಭಿನಂದಿಸಿದ್ದು ಅವಿಸ್ಮರಣೀಯ ಕ್ಷಣ.

ಪತ್ರಕರ್ತೆಯಾಗಿ, ಲೇಖಕಿಯಾಗಿ,ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥೆಯಾಗಿ ರಾಜ್ಯ ಹಾಗೂ ದೇಶದ ಗಣ್ಯರಿಂದ ಶಹಬ್ಬಾಸ್‌ಗಿರಿ ಪಡೆದ 88ರ ಹರೆಯದ ನಾಗಮಣಿ ಎಸ್ ರಾವ್ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ ಸಂಭ್ರಮ ಕೆಯುಡಬ್ಲ್ಯುಜೆಯದ್ದು.

ಪ್ರಶಸ್ತಿಗಳ ಸರಮಾಲೆ

ನಾಗಮಣಿ ಅವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ವಿಶ್ವ ಮಹಿಳೆ, ಕನ್ನಡ ಸಾರಥಿ,ಮುಂತಾದ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರಕಾರದ ಪ್ರತಿಷ್ಠಿತ , ಟಿಎಸ್ಸಾರ್, ಆರ್ಯಭಟ, ಕೆಂಪೇಗೌಡ, ಡಿ.ವಿ.ಜಿ ಸದ್ಭಾವನಾ,
ಕರ್ನಾಟಕ ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳಿಗೆ ಬಾಜನರಾದ ಅಪರೂಪದ ಸಾಧಕಿ ಕರ್ನಾಟಕದ ಹೆಮ್ಮೆಯ ಸುಪುತ್ರಿಯಾದ ನಾಗಮಣಿಯವರು ಸುದ್ದಿ ಮನೆಯ ಕಣ್ಮಣಿಯಾಗಿದ್ದಾರೆ.

“ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್” ಎಂದು ನಮ್ಮ ಒತ್ತಾಯದ ಮೇರೆಗೆ ಪುನರುಚ್ಚರಿಸಿದಾಗ ಮತ್ತದೇ ಮಧುರ ಕಂಠ ಪ್ರತಿದ್ವನಿಸಿದ ಹಿತಾನುಭವ ಮರೆಯಲಾಗದ್ದು. ಸಂಜೆ ಭೇಟಿಯಲ್ಲಿ ಅವರ ಬದುಕು, ಬರಹದ ಹೆಜ್ಜೆಗುರುತನ್ನು ನಮ್ಮೊಂದಿಗೆ ಹಂಚಿಕೊಂಡರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ (ಕೆಯುಡಬ್ಲ್ಯುಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರ ಮನೆಯಲ್ಲಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರನ್ನು ಪದ್ಮನಾಭ ನಗರ ನಿವಾಸದಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತ್ವದಲ್ಲಿ ಅಭಿನಂದಿಸಿ, ಗೌರವಿಸಲಾಯಿತು.

ಈ ಕುರಿತು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, “ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಸಾಧಕರನ್ನು ಗುರುತಿಸಿ ಅವರನ್ನೆಲ್ಲಾ ಒಂದೇ ವೇದಿಕೆಗೆ ಅಹ್ವಾನಿಸಿ ಗೌರವಾರ್ಪಣೆ ಸಲ್ಲಿಸುವ ಬದಲಾಗಿ ಅವರ ಮನೆಗೇ ತೆರಳಿ ಸನ್ಮಾಸಲಾಗುತ್ತಿದೆ. ಅದರಂತೆ, ಮೂವತ್ತಮೂರು ವರ್ಷಗಳ ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಹಿರಿಯರಾದ ನಾಗಮಣಿ ಎಸ್ ರಾವ್ ಅವರಂತಹ ಸಾಧಕಿ ಮನೆಗೆ ಹೋಗಿ ಗೌರವಿಸುವುದರಿಂದ ಕೆಯುಡಬ್ಲ್ಯುಜೆ ಗೌರವ ಘನತೆ ಹೆಚ್ಚಾಗುತ್ತದೆ,” ಎಂದು ಅಭಿಪ್ರಾಯ ಪಟ್ಟರು.

ತಮ್ಮಇಳಿ ವಯಸ್ಸಿಲ್ಲಿ ಲವಲವಿಕೆಯಿಂದ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುವ ಅವರನ್ನು ಅಭಿನಂದಿಸಿದ ಸಾರ್ಥಕತೆಯಿಂದ ದೇವರು ನಾಗಮಣಿ ಮೇಡಂ ಅವರಿಗೆ ದೇವರು ಆಯುರಾರೋಗ್ಯ ನೀಡಿ ಹೆಚ್ಚುಕಾಲ ಸಮಾಜ ಮುಖಿಯಾಗಿ ಕೆಲಸ ಮಾಡುವಂತೆ ಅನುಗ್ರಹಿಸಲಿ ಎಂದು ಕೆಯುಡಬ್ಲ್ಯುಜೆ ಆಶಿಸುತ್ತದೆ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ನಾಗಮಣಿ ಎಸ್. ರಾವ್, “ನನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆಯ ಖುಷಿಕಂಡಿದ್ದೇನೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯರನ್ನು ಗುರುತಿಸಿ ಅದರಲ್ಲೂ ಮನೆ ಬಾಗಿಲಿಗೇ ತೆರಳಿ ಅಭಿನಂದಿಸುತ್ತಿರುವುದು ಶ್ಲಾಘನೀಯ. ಇಂತಹ ಉತ್ತಮ ಕಾರ್ಯ ನಿರಂತರವಾಗಿ ಮುಂದುವರಿಯಲಿ,” ಎಂದು ಹಾರೈಸಿದರು.

ನೆನಪಿನ ಬುತ್ತಿಯಿಂದ
1965ರಲ್ಲಿ ಕೇಂದ್ರ ವಾರ್ತಾ ಸಚಿವೆಯಾಗಿದ್ದ ಇಂದಿರಾ ಗಾಂಧಿಯವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಹಳೆಯ ಕಲ್ಲಿನ ಕಟ್ಟಡಕ್ಕೆ ಭೇಟಿ ನೀಡಿದಾಗ, ಅಲ್ಲಿದ್ದ ಏಕೈಕ ಮಹಿಳೆ ನಾಗಮಣಿಯವರೇ ಹೂವಿನ ಹಾರ ಹಾಕಿ ಸ್ವಾಗತಿಸಿದ್ದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದ್ದನ್ನು ನೆನೆದರು.

ಎರಡನೇ ಬಾರಿ ಬೆಂಗಳೂರಿಗೆ ಆಗಮಿಸಿದ್ದ ವಾರ್ತಾ ಸಚಿವೆ ಇಂದಿರಾಗಾಂಧಿಯವರು ಅಂದು ಹಲವಾರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಸಮಯದಲ್ಲಿ ನಾಗಮಣಿಯವರೂ ಪರ್ತಕರ್ತೆಯಾಗಿ ಅವರೊಂದಿಗೆ ಸುತ್ತಾಡಿದ್ದರು. ನಂತರ ಇಂದಿರಾಗಾಂಧಿ ಅವರು ಊಟ ಮಾಡುವ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಕಾರ್ಯಕ್ರಮಗಳಲ್ಲಿ ಓಡಾಡಿ ಸಾಕಾಯಿತೇ ಎಂದು ಆತ್ಮೀಯವಾಗಿ ಮಾತಾಡಿಸಿದ್ದನ್ನು ನಾಗಮಣಿ ಅವರು ಮೆಲುಕು ಹಾಕಿದರು.

ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಮಾತನಾಡಿ, ನಾಗಮಣಿ ಮೇಡಂ ವಿಜ್ಞಾನ , ಕ್ರೀಡಾ ಕಾರ್ಯಕ್ರಮ ,ಸಾಹಿತ್ಯ ಸಮ್ಮೇಳನ,ಕವಿಗೋಷ್ಟಿ,ವಿಧಾನ ಸಭೆ, ವಿಧಾನ ಪರಿಷತ್ ಕಲಾಪಗಳು ಮಾತ್ರವಲ್ಲದೆ ಅಂದು ನಡೆಯುತ್ತಿದ್ದ ಯುದ್ಧದ ಸುದ್ದಿಯನ್ನು ಬಿತ್ತರಿಸುವ ಜೊತೆಗೆ ದೇಶದ ಹಲವು ಗಣ್ಯರ ಸಂದರ್ಶನವನ್ನು ನಡೆಸಿರುವ ಬಗ್ಗೆ ಉಲ್ಲೇಖಿಸಿದರು.

ಆಕಾಶವಾಣಿಯ ಹಿರಿಯ ಉದ್ಘೋಷಕಿ ಸುಮತಿ ಮಾತನಾಡಿ, ನಾಗಮಣಿಯವರ ಸಮಾಜ ಮುಖಿ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿ,ರಾಜ್ಯ ಪತ್ರಕರ್ತರ ಸಂಘವು ಹಿರಿಯ ಸಾಧಕ -ಸಾಧಕಿಯರನ್ನು ಗುರುತಿಸಿ ಸನ್ಮಾನಿಸುವ ಸತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘ ವನ್ನು ಅಭಿನಂದಿಸಿದರು.

ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಮತ್ತು ಕಿರಣ್ ಮೆಯಿ ನಾಗಮ‌ಣಿ ಎಸ್ ರಾವ್ ಅವರ ಒಡನಾಟದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದಿಸಿದರು.
ರಾಜ್ಯ ಸಮಿತಿ ಸದಸ್ಯರಾದ ವಾಸುದೇವ ಹೊಳ್ಳ , ದೇವರಾಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಮತ್ತು ಸಂಘದ ಸದಸ್ಯರಾದ ಪ್ರಶಾಂತ್, ಅಜಿತ್ ಹಾಜರಿದ್ದರು.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024