February 17, 2026

Newsnap Kannada

The World at your finger tips!

T narsipura Kumba mela

ಟಿ. ನರಸೀಪುರದಲ್ಲಿ ದಕ್ಷಿಣ ಭಾರತದ ಕುಂಭಮೇಳ ಆರಂಭ

Spread the love

ಮೈಸೂರು: ದಕ್ಷಿಣ ಭಾರತದ ಪ್ರಸಿದ್ಧ ಕುಂಭಮೇಳಕ್ಕೆ ತೆರೆಬಿದ್ದಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳ ಪವಿತ್ರ ಜಲಸಂಗಮದಲ್ಲಿ, ಆರು ವರ್ಷಗಳ ನಂತರ 13ನೇ ಕುಂಭಮೇಳ ಇಂದಿನಿಂದ (ಫೆಬ್ರವರಿ 10) ಮೂರು ದಿನಗಳ ಕಾಲ ಜರುಗಲಿದೆ.

ಸಾವಿರಾರು ಭಕ್ತರು ಈ ಪುಣ್ಯಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಉತ್ತರ ಭಾರತದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುವಂತೆಯೇ, ಕರ್ನಾಟಕದಲ್ಲಿ ಟಿ. ನರಸೀಪುರ ತ್ರಿವೇಣಿ ಸಂಗಮ ಒಂದು ಪವಿತ್ರ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ.

ಕುಂಭಸ್ನಾನ ಮಹತ್ವದ ದಿನಾಂಕಗಳು:

  • ಫೆ.12: ಪವಿತ್ರ ಕುಂಭಸ್ನಾನ ಮುಹೂರ್ತ ನಿಗದಿಯಾಗಿದ್ದು, ಬೆಳಗ್ಗೆ 9:00ರಿಂದ 9:30ರೊಳಗೆ ಶುಭ ಮೀನ ಲಗ್ನದಲ್ಲಿ ಹಾಗೂ ಮಧ್ಯಾಹ್ನ 12:00ರಿಂದ 1:00ರ ವರೆಗೆ ವೃಷಭ ಲಗ್ನದಲ್ಲಿ ಪುಣ್ಯ ಸ್ನಾನ ನಡೆಯಲಿದೆ.
  • ಈ ಮಹೋತ್ಸವಕ್ಕಾಗಿ ಸರ್ಕಾರವು ₹6 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಮುಖ್ಯ ಕಾರ್ಯಕ್ರಮಗಳು:

  • ಫೆ.10: ಬೆಳಗ್ಗೆ 10:00ಕ್ಕೆ ಅಗಸ್ತೇಶ್ವರ ದೇವಸ್ಥಾನದಲ್ಲಿ ತ್ರಯೋದಶಿ ಪೂಜೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಲಿದೆ. ಸಂಜೆ 5:00ಕ್ಕೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಧ್ವಜಾರೋಹಣ ನಡೆಯಲಿದೆ.
  • ಫೆ.11: ಬೆಳಗ್ಗೆ ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದ್ದು, 11:00ಕ್ಕೆ ಧರ್ಮಸಭೆ, 4:00ಕ್ಕೆ ಮಹಾತ್ಮರು, ಸಂತರ, ಮಹಾಮಂಡಲೇಶ್ವರರು ತ್ರಿವೇಣಿ ಸಂಗಮ ಪ್ರವೇಶಿಸಲಿದ್ದಾರೆ. ಸಂಜೆ 6:00ಕ್ಕೆ ರುದ್ರ ಹೋಮ, 7:00ಕ್ಕೆ ವಾರಾಣಸಿ ಗಂಗಾರತಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.
  • ಫೆ.12: ಕುಂಭಮೇಳದ ಪ್ರಮುಖ ಅಂಗವಾಗಿ ಪವಿತ್ರ ಕುಂಭಸ್ನಾನ ನೆರವೇರಲಿದೆ.

ಹೆಚ್ಚಿನ ಗಣ್ಯರ ಭಾಗವಹಿಸುವವರು:
ಕುಂಭಮೇಳದಲ್ಲಿ ಹಲವು ರಾಜಕೀಯ ಮತ್ತು ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಸಚಿವರಾದ ಕೆ. ವೆಂಕಟೇಶ್, ರಾಮಲಿಂಗಾರೆಡ್ಡಿ, ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಯದುವೀರ್ ಒಡೆಯರ್, ಸ್ಥಳೀಯ ಶಾಸಕರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.ಇದನ್ನು ಓದಿ –ಯುವ ಶಕ್ತಿ ದೇಶ ಶಕ್ತಿ

ಅದೃಷ್ಟಸಂಪನ್ನ ಧಾರ್ಮಿಕ ಸಾನಿಧ್ಯಕ್ಕಾಗಿ ಅದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮುಂತಾದ ಹರಗುರುಚರ ಮೂರ್ತಿಗಳು ಕಾರ್ಯಕ್ರಮವನ್ನು ಗೌರವಿಸಲಿದ್ದಾರೆ.

error: Content is protected !!