February 22, 2026

Newsnap Kannada

The World at your finger tips!

sidda

ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಕಿಮ್ಮತ್ತು ಕೊಡುವ ಹಾಗಿಲ್ಲ – ಸಿದ್ದು

Spread the love

ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ ಎಂದು ಪ್ರತಿಕ್ರಿಯೆ ನೀಡಿದಸಿದ್ದರಾಮಯ್ಯ ಕುಮಾರಸ್ವಾಮಿಗೆ ಮಾತಿಗೆ ಕಿಮ್ಮತ್ತು ಕೊಡುವ ಹಾಗಿಲ್ಲ ಎಂದಿದ್ದಾರೆ

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಎಚ್‍ಡಿಕೆ ಜೊತೆ ಜಟಾಪಟಿ ಮುಂದುವರಿದಿದೆ.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೆ ಸಿದ್ದರಾಮಯ್ಯ ಎಚ್‍ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಅನ್ನಭಾಗ್ಯ ಯೋಜನೆ ಸೋಮಾರಿಗಳ ಮಾಡುವ ಯೋಜನೆ ಅನ್ನೋ ಎಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ. ಅದು ಹೊಟ್ಟೆ ತುಂಬಿದವರು ಹೇಳುವ ಹೇಳಿಕೆ. ಹಸಿವು ಯಾರು ಅನುಭವಿಸಿದವರು ಮತ್ತು ಹಸಿದವರು ಎಂದು ಹೀಗೆ ಮಾತನಾಡಲ್ಲ. ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ. ಬಡವರು ಹೇಳಿದರೆ ಅದು ಬೇರೆ. ಕುಮಾರಸ್ವಾಮಿಗೆ ಮಾತಿಗೆ ಕಿಮ್ಮತ್ತು ಕೊಡುವ ಹಾಗಿಲ್ಲ ಎಂದರು.

error: Content is protected !!