January 28, 2026

Newsnap Kannada

The World at your finger tips!

kumarswamy

ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶವಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ

Spread the love

ಕೈಗಾರಿಕೆ ಗಳನ್ನು ಅಭಿವೃದ್ಧಿಪಡಿಸಿ ನಾಗಮಂಗಲ ಭಾಗದ ಯವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ೩೦೦ ಎಕರೆ ಭೂಮಿಯನ್ನು ಸ್ವಾಧೀನಕ್ಕೆ ನನ್ನ ಸರ್ಕಾರ ನಿರ್ಧರಿಸಿತ್ತು. ಆದರೆ ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಇರಾದೆ ನನಗೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ಸ್ಷಷ್ಟಪಡಿಸಿದರು.

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ‘ಅಸಮಾಧಾನಗೊಂಡ ರೈತರೊಡನೆ ಇಂದು ಸಭೆ ನಡೆಸಿದ್ದೇನೆ‌. ರೈತರ ಅಭಿಪ್ರಾಯ ಪಡೆದುಕೊಂಡೇ ಮುಂದೆ ಏನು ಮಾಡಬೇಕೆಂಬ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುವಂತಹ ಪ್ರಯತ್ನ ಮಾಡುತ್ತೇವೆ ಎಂದರು.

ನಾನು ಸಿಎಂ ಆಗಿದ್ದಾಗ ಈ ಸ್ಥಳದಲ್ಲಿ ಸುಮಾರು ೩೦೦ ಎಕರೆ ಪ್ರದೇಶದಲ್ಲಿ ಕೈಗಾರಿಕೆಯನ್ನು ಸ್ಥಾಪಿಸಲು ಮಾಡಲು ಆದೇಶ ನೀಡಿದ್ದೆ. ಅದು ಯುವಕರಿಗೆ ಉದ್ಯೋಗ ಸಿಗಲಿ‌ ಎಂಬ ದೃಷ್ಠಿಯಿಂದಲೇ ಹೊರತು, ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದಲ್ಲ. ಆದರೆ ಈಗ ಪ್ರಸ್ತುತ ಸರ್ಕಾರವು ೧೩೫೦ ರೈತರ ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ನಿರ್ಧರಿಸಿದೆ’ . ಈ ಬಗ್ಗೆ ಚರ್ಚೆ ಮಾಡುತ್ತವೆ ಎಂದು ಭರವದೆ ನೀಡಿದರು.

ನಾವು ಒಗ್ಗಟ್ಟಾಗಿ ಇದ್ದೇವೆ

ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ಪಾಳಯದಲ್ಲಿ ಎದ್ದಿರುವ ಚರ್ಚೆಯ ಕುರಿತು ಮಾತನಾಡಿದ ಅವರು ‘ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಹೇಳುವದರ ಜೊತೆಗೇ, ಯಡಿಯೂರಪ್ಪ ಅವರನ್ನು ಭೇಟಿ‌ ಮಾಡಿದ ಕುರಿತು ‘ಅವರು ರಾಜ್ಯದ ಮುಖ್ಯಮಂತ್ರಿ. ನಾನು ವಿರೋಧ ಪಕ್ಷದ ನಾಯಕ. ಹೀಗಾಗಿ ಅವರನ್ನು ಭೇಟಿ‌ ಮಾಡಿದ್ದೇನೆಯೇ ಹೊರತು ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇನ್ನು ಸರ್ಕಾರವು ಸಾಲದ ಹೆಸರಲ್ಲಿ ಜನರನ್ನು ಲೂಟಿ‌ ಮಾಡಬಾರದು’ ಎಂದು ಹೇಳಿದರು

ಡ್ರಗ್ಸ್ ದಂಧೆ ಕುರಿತು ಮಾತನಾಡಿ ಮಾಜಿ ಸಿಎಂ ‘ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ. ಮೊನ್ನೆ ಮೊನ್ನೆ ತಾನೇ ನಾನು ಸಿನಿಮಾ ಮಾಡಿದೆ. ಆಗಲೂ ಕೂಡ ಈ ಡ್ರಗ್ಸ್ ಎಂಬುದು ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ದೇವೆಗೌಡ ಅವರ ಮೇಲಿರುವ ಆರೋಪದ ಕುರಿತು ‘ದೇವೆಗೌಡರು ಸೀಮೆ ಎಣ್ಣೆ ಡಬ್ಬ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ವಿಷಯ ಎಂದ ತಕ್ಷಣ ಮೋರಿ ಕ್ಲೀನ್ ಕೂಡ ಮಾಡುತ್ತಾರೆ. ಅವರು ಮಾಜಿ ಪ್ರಧಾನಿ ಎಂದು ಎಸಿ ರೂಮ್ ನಲ್ಲಿ‌ ಕುಳಿತಿಲ್ಲ’ ಎಂದು ಖಾರವಾಗಿ ಹೇಳಿದ್ದಾರೆ.

error: Content is protected !!