December 23, 2024

Newsnap Kannada

The World at your finger tips!

balakrsihna

ಕುಮಾರಸ್ವಾಮಿ , ಯಡಿಯೂರಪ್ಪ ಜೊತೆ ಸೇರಿದ್ದೇ ಬಿಡದಿ ಗೆಲುವಿಗೆ ಕಾರಣ- ಬಾಲಕೃಷ್ಣ

Spread the love

ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪನವರ ಬಳಿ ಹೋಗಿ ಚುನವಣೆ ತಂತ್ರ ರೂಪಿಸಿದ್ದು ಜೆಡಿಎಸ್ ಗೆ ಬಿಡದಿಯಲ್ಲಿ ಲಾಭವಾಗಿದೆ ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.

ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಾದ ಹಿನ್ನೆಲೆ ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ , ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಬಳಿ ಹೋಗಿದ್ದರು. ಶಾಸಕ ಎ. ಮಂಜು ಜೊತೆಗೆ ಹೋಗಿ ಬೇಕಾದ ಕ್ಯಾಟಗರಿ ಮಾಡಿಸಿಕೊಂಡರು. 18 ವಾರ್ಡ್ ಗಳಲ್ಲಿ ಅವರು ಮೊದಲೇ ತಯಾರಿ ನಡೆಸಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರು. ಜೊತೆಗೆ ಕುಮಾರಸ್ವಾಮಿಯವರು ಎರಡು ದಿನ ಪ್ರಚಾರ ಕೂಡಾ ನಡೆಸಿದ್ದರು ಎಂದರು.

ಲೋಕಲ್ ಎಲೆಕ್ಷನ್ ಪ್ರಚಾರಕ್ಕಾಗಿ ನಾನು ಕೂಡ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರನ್ನು ಕರೆದಿದ್ದೆ. ಆದರೆ ನಮ್ಮ ನಾಯಕರು ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದರು. ಈ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು, ಆಡಳಿತವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ಎಂದರು

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಇಲ್ಲ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಇದ್ದಾರೆ ಅಷ್ಟೇ. ಆದರೆ ಈ ಪುರಸಭೆ ಚುನಾವಣೆಯಲ್ಲಿ ಫೇಲ್ ಆಗಿದ್ದಾರೆ. ಸರ್ಕಾರ ಇದ್ದಾಗ ಒಂದೆರಡು ಸ್ಥಾನವನ್ನಾದರೂ ಗೆಲ್ಲಬೇಕಿತ್ತು. ಆದರೆ ಅವರು ಯಾವ ಸ್ಥಾನಗಳನ್ನೂ ಗೆದ್ದಿಲ್ಲ. ಇನ್ನು ಯೋಗೇಶ್ವರ್ ನ ನಾವು ಕಾಂಗ್ರೆಸ್‍ಗೆ ಕರೆಯಲ್ಲ. ನಾನು ಅಷ್ಟು ದೊಡ್ಡ ನಾಯಕ ಅಲ್ಲ, ಕೆಪಿಸಿಸಿ ಅಧ್ಯಕ್ಷ ಅಲ್ಲ. ಅವರು ಸಹ ನಮ್ಮನ್ನು ಕೇಳಿ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!