March 14, 2026

Newsnap Kannada

The World at your finger tips!

prathap simha

ಕುಮಾರಸ್ವಾಮಿ ರೈತನ ಮಗ – ಟೀಕೆ ಯಾಕೆ?:ಸಂಸದ ಸಿಂಹ ಹೆಚ್.ಡಿ.ಕೆ ಪರ ಬ್ಯಾಟಿಂಗ್

Spread the love

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಬ್ಬ ರೈತನ ಮಗ, ಅವರನ್ನು ಟೀಕೆ ಯಾಕ್ರಿ ಟೀಕೆ ಮಾಡುತ್ತೀರಾ? ಹಾಗೆ ಮಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೆಚ್.ಡಿ.ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕುಮಾರಸ್ವಾಮಿ ಒಬ್ಬ ರೈತನ ಮಗ. ಹೀಗಾಗಿ ರೈತರು ಹಾಗೂ ಗೋವಿನ ಬಗ್ಗೆ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಅವರು ಬಿಜೆಪಿಯ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಅವರನ್ನು ಟೀಕೆ ಮಾಡುವುದು ಸರಿಯಲ್ಲ ಎಂದರು.

ಕುಮಾರಸ್ವಾಮಿ ಬಿಜೆಪಿಯ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿದ್ದಾರೆ. ಅವರನ್ನು ರಾಜಕೀಯ ಕಾರಣಕ್ಕೆ ಟೀಕಿಸುವುದು ಸಣ್ಣತನ. ಕುಮಾರಸ್ವಾಮಿ 20-20 ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ಮರಿಸಿದರು.

error: Content is protected !!