December 22, 2024

Newsnap Kannada

The World at your finger tips!

puttaraju

‘ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಣ್ಣನೇ’.ಪಾಂಡವಪುರದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ.

Spread the love

ಮಂಡ್ಯ : ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಣ್ಣನೇ. ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ.ಅತ್ಯಂತ ಪ್ರಚಂಡ ಬಹುಮತದಲ್ಲಿ ಕುಮಾರಣ್ಣನ್ನನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಪುಟ್ಟರಾಜು ,ಕುಮಾರಣ್ಣ ನಾಮಪತ್ರ ಸಲ್ಲಿಸಲು ಅಷ್ಟೇ ಬರಲಿ ಅಂತಾ ಹೇಳಿದ್ದೇವೆ.
ನಾವೇ ಓಡಾಡಿ ಕುಮಾರಣ್ಣನ್ನ ಗೆಲ್ಲಿಸುತ್ತೇವೆ.ದೇವೇಗೌಡರ ಆಶೀರ್ವಾದ, ನರೇಂದ್ರ ಮೋದಿ ಅವರ ಸಹಕಾರದಿಂದ ಗೆಲ್ಲಿಸುತ್ತೇವೆ ಎಂದರು.

ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಬಳಿಕ ಅವರೇ ಹೇಳ್ತಾರೆ.ಬಿಜೆಪಿ ಹೈಕಮಾಂಡ್ ಸಹ ಸಹಕಾರ ನೀಡಿದೆ.
ನಾವೆಲ್ಲಾ ಒಮ್ಮತದಿಂದ ಮಂಡ್ಯ, ಹಾಸನ, ಕೋಲಾರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ.

ಮೈತ್ರಿಯಲ್ಲಿರುವ ಸಣ್ಣ ಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ.ನಾಳೆ ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಎಂದು ಅಧಿಕೃತವಾಗಿ ಹೇಳುತ್ತೆ.

ಟಿಕೆಟ್ ಘೋಷಣೆ ಬಳಿಕ ಸುಮಲತಾ ಅವರೊಂದಿಗೂ ಮಾತಾಡುತ್ತೇವೆ.ಅವರು ಹೇಗೆ ನಡೆದುಕೊಳ್ಳಬೇಕು, ನಾವು ಹೇಗೆ ನಡೆದುಕೊಳ್ಳಬೇಕು ಎಂದು ರಾಷ್ಟ್ರ ನಾಯಕರು ಹೇಳ್ತಾರೆ ಎಂದು ಹೇಳಿದರು.

ಸುಮಲತಾ ಅವರು ಇಂದಿಗೂ ಲೋಕಸಭಾ ಸದಸ್ಯರು. ಹಿಂದೆ ರಾಜಕೀಯವಾಗಿ ನಮ್ಮ ಅವರ ಮಧ್ಯೆ ಸಣ್ಣ ಪುಟ್ಟ ವ್ಯತ್ಯಾಸ ಆಗಿತ್ತು.

ಅದೆಲ್ಲವನ್ನು ಸರಿ ಪಡಿಸಿಕೊಳ್ಳುತ್ತೇವೆ. ರಾಜಕೀಯದಲ್ಲಿ ಯಾರು ಶತ್ರುವು ಅಲ್ಲ, ಮಿತ್ರರೂ ಅಲ್ಲ.ಎಲ್ಲರೂ ಒಗ್ಗಟ್ಟನಿಂದ ಹೋಗುತ್ತೇವೆ.

ಕುಮಾರಸ್ವಾಮಿ ಅವರೇ ಮಂಡ್ಯಗೆ ಬರಬೇಕೆಂಬ ನಿರ್ಣಯವನ್ನು ನಾವು ಮಾಡಿದ್ದೋ.ಮಂಡ್ಯ ಅಂದ್ರೆ ಇಂಡಿಯಾ ಎಂಬ ದಿಕ್ಸೂಚಿ ಇದೆ.

ಅದಕ್ಕೆ ಹೊಸ ನಾಂದಿ ಹಾಡಲು ನಾವು ಕುಮಾರಣ್ಣನ ತರುತ್ತಾ ಇದ್ದೀವಿ.ಇಂದು ಮೇಲುಕೋಟೆ ವೈರಮುಡಿ ಉತ್ಸವ

ಕುಮಾರಣ್ಣ ನಮ್ಮ‌ ಕಾರ್ಯಕರ್ತರ ನಮ್ಮ ಆಸೆ ನಿರಾಸೆ ಮಾಡಬಾರದು ಎಂದು ಸ್ಪರ್ಧೆ ಮಾಡ್ತಾ ಇದ್ದಾರೆ.ಕುಮಾರಣ್ಣನ ಮತ್ತೊಮ್ಮೆ ನಾವು ಎಂಪಿಯಾಗಿ ಮಾಡ್ತೀವಿ ಎಂದರು .

Copyright © All rights reserved Newsnap | Newsever by AF themes.
error: Content is protected !!