November 16, 2024

Newsnap Kannada

The World at your finger tips!

electric bus,banglore, EV

KSRTC ಎಲೆಕ್ಟ್ರಿಕಲ್ ಬಸ್ ಹೊರ ಜಿಲ್ಲೆಯ ಸಂಚಾರ ಸಿದ್ದತೆ

Spread the love

ಬಿಎಂಟಿಸಿ ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ನಡೆಸುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಸಿದ್ಧವಾಗಿದೆ.

ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್, ಬೆಂಗಳೂರಿನಿಂದ ಈ ನಗರಗಳಿಗೆ ಸಂಚಾರ

ಡಿಸೆಂಬರ್‌ ವೇಳೆಗೆ ವಿದ್ಯುತ್ ಚಾಲಿತ ಬಸ್‌ಗಳು ಬೆಂಗಳೂರಿನಿಂದ ಸಂಚಾರ ನಡೆಸಲಿವೆ.ಬೆಂಗಳೂರಿನಿಂದ ವಿವಿಧ ನಗರಕ್ಕೆ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲು ಯೋಜನೆ ಸಿದ್ಧಪಡಿಸಿದೆ.ಇದನ್ನು ಓದಿ –ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಬಾಕಿ – 25 ಸಾವಿರ ಕ್ಯೂಸೆಕ್ ನೀರು ನದಿಗೆ

ಹೈದರಾಬಾದ್ ಮೂಲದ ಕಂಪನಿ ಕೆಎಸ್‌ಆರ್‌ಟಿಸಿಗೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡಲಿದೆ.ಮೊದಲು ಬೆಂಗಳೂರು-ಮೈಸೂರು ನಡುವೆ ಬಸ್‌ಗಳು ಸಂಚಾರ ನಡೆಸಲಿವೆ.ಯಾವ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಬೇಕು ಎಂದು ಕೆಎಸ್‌ಆರ್‌ಟಿಸಿ ಈಗಾಗಲೇ ನೀಲನಕ್ಷೆ ತಯಾರು ಮಾಡಿದೆ.


ಯಾವ ಮಾರ್ಗದಲ್ಲಿ ಸಂಚಾರ ನಡೆಸಬೇಕು?

ಬೆಂಗಳೂರು-ವಿರಾಜಪೇಟೆ,ರ, ಬೆಂಗಳೂರು-ಚಿಕ್ಕಮಗಳೂರು,ಬೆಂಗಳೂರು-ಮೈಸೂರು, ಬೆಂಗಳೂರು-ಮಡಿಕೇರಿ, ಬೆಂಗಳೂರು-ಕೋಲಾರ,ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ ನಡುವೆ ಬಸ್ ಸಂಚಾರ ನಡೆಯುತ್ತದೆ.

ಒಮ್ಮೆ ಚಾರ್ಜ್ ಮಾಡಿದ ಬಸ್ ಎಷ್ಟು ಕಿ. ಮೀ. ದೂರ ಓಡಲಿದೆ?

ಒಮ್ಮೆ ಚಾರ್ಜ್ ಮಾಡಿದ ಬಳಿಕ ಬಸ್‌ಗಳು 250 ರಿಂದ 300 ಕಿ. ಮೀ. ತನಕ ಸಂಚಾರ ನಡೆಸಲಿವೆ ಮತ್ತು 43 ಸೀಟುಗಳು ,2 ಮೀಟರ್ ಉದ್ದವಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿದೆ.ಆಗುಂಬೆ ಘಾಟಿನಲ್ಲಿ ಗುಡ್ಡ ಕುಸಿತ : ಭೀಕರ ಮಳೆಯಿಂದಾಗಿ ವಾಹನ ಸಂಚಾರ ಸ್ಥಗಿತ

ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪೂರೈಕೆ ಟೆಂಡರ್ ಕರೆದಾಗಲೇ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದೆ ಮತ್ತು ಕಂಪನಿ ಕಡೆಯಿಂದಲೇ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಡ್ರೈವರ್‌ ಬರುತ್ತಾರೆ. ಪ್ರಾಯೋಗಿಕ ಬಸ್ ಜೂನ್ ತಿಂಗಳಿನಲ್ಲಿಯೇ ಕೆಎಸ್‌ಆರ್‌ಟಿಸಿಗೆ ಬರಬೇಕಿತ್ತು.

ಕೆಲಸಗಳನ್ನು ಚುರುಕುಗೊಳಿಸುವಂತೆ ಹೈದರಾಬಾದ್ ಮೂಲದ ಸಂಸ್ಥೆಗೆ ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!