ಕರ್ನಾಟಕದಿಂದ ರಾಜ್ಯದ ಒಳಗಡೆ ಹಾಗೂ ಅಂತರ್‌ರಾಜ್ಯಕ್ಕೆ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿಯ ಪ್ರತಿಷ್ಠಿತ ಬಸ್‌ಗಳಲ್ಲಿ ವಾರಾಂತ್ಯಗಳಲ್ಲಿ ಪ್ರಯಾಣಕ್ಕೆ ಹೆಚ್ಚುವರಿಯಾಗಿ ವಿಧಿಸಲಾಗುತ್ತಿದ್ದ ಶೇ. 10%ರಷ್ಟು ಪ್ರಯಾಣದ ದರವನ್ನು ರದ್ದುಪಡಿಸಲು ನಿಗಮ ನಿರ್ಧರಿಸಿದೆ.
‘ಕರ್ನಾಟಕ ರಾಜ್ಯದ ಪ್ರತಿಷ್ಠಿತ ಹವಾ ನಿಯಂತ್ರಿತ ಸಾರಿಗೆಗಳಲ್ಲಿ ಹಾಗೂ ಪ್ರತಿಷ್ಠಿತ ಅಂತರ್ ರಾಜ್ಯದ ಸಾರಿಗೆಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ರಾಜ್ಯದ ಒಳಗಡೆ ಮತ್ತು ಅಂತರ್‌ರಾಜ್ಯದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯಕ್ಕೆ ವಿಧಿಸಲಾಗುವ ಶೇ.10ರಷ್ಟು ಹೆಚ್ಚುವರಿ ಶುಲ್ಕವನ್ನು ಡಿಸೆಂಬರ್ 2020ರ ವರೆಗೆ ರದ್ದುಗೊಳಿಸುವುದು ಸೂಕ್ತವೆಂದು ಅಭಿಪ್ರಾಯಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
‘ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯದಲ್ಲಿ ಅಂದರೆ, ಪ್ರತಿ ಶುಕ್ರವಾರ ಪ್ರಮುಖ ಸ್ಥಳಗಳಿಗೆ ಹೊರಡುವ ಹಾಗೂ ಪ್ರಮುಖ ಸ್ಥಳಗಳಿಂದ ಮರಳುವ ಸಾರಿಗೆಗಳಲ್ಲಿ ವಿಧಿಸುತ್ತಿರುವ ಶೇ. 10ರಷ್ಟು ಹೆಚ್ಚುವರಿ ದರವನ್ನು ಅಕ್ಟೋಬರ್ 16 2020ರಿಂದ ಜಾರಿಗೆ ಬರುವಂತೆ ಡಿಸೆಂಬರ್ 31, 2020ರ ವರೆಗೆ ಜಾರಿಗೆ ಬರುವಂತೆ ಹೆಚ್ಚುವರಿ ದರವನ್ನು ರದ್ದುಪಡಿಸಲಾಗಿದೆ.’ ಎಂದು ಪತ್ರದಲ್ಲಿ ನಮೂಸಿಸಲಾಗಿದೆ
More Stories
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ